ಕಳೆದ 5 ವರ್ಷಗಳಿಂದ ಇದ್ದ ಗ್ರಾಪಂ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ರಸ್ತೆ, ಒಳಚರಂಡಿಯಂತಹ ಮೂಲ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದಾರೆ. ಸಂಜೀವಿನಿ ಕಟ್ಟಡ, ಗ್ರಂಥಾಲಯ ಕಟ್ಟಡ ಮಾಡಲಾಗಿದೆ. ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಸ್ಥಳ ದಾನ ಮಾಡಿರುವ ಕುಟುಂಬಕ್ಕೆ ಮಾದರಿಯಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ದಾನದಲ್ಲಿ ವಿದ್ಯಾದಾನ ಶ್ರೇಷ್ಠವಾದರೆ, ಜ್ಞಾನ ದೇಗುಲಕ್ಕೆ ಜಾಗ ನೀಡುವ ಕೆಲಸವೂ ಸರ್ವಶ್ರೇಷ್ಠವಾಗಿದೆ ಎಂದು ಶಾಸಕ ಎಚ್.ಟಿ. ಮಂಜು ಹೇಳಿದರು.
ಅಂಕನಹಳ್ಳಿಯಲ್ಲಿ ನೂತನ ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಜಾಗವನ್ನೇ ಒತ್ತುವರಿ ಮಾಡುವ ಈ ಕಾಲದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಭೂಮಿ ನೀಡಿರುವ ದಾನಿಗಳನ್ನು ಸ್ಮರಿಸಬೇಕಿದೆ ಎಂದರು.
ಐಕನಹಳ್ಳಿ ಗ್ರಾಪಂ ಮಾದರಿಯಾಗಿದೆ. ಇಲ್ಲಿನ ಪಿಡಿಒ ವಿಜಯ್, ಸಿಬ್ಬಂದಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಪಂನ 15ನೇ ಹಣಕಾಸು ಯೋಜನೆಯಡಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ ಎಂದರು.
ಕಳೆದ 5 ವರ್ಷಗಳಿಂದ ಇದ್ದ ಗ್ರಾಪಂ ಸದಸ್ಯರು ಉತ್ತಮ ಕೆಲಸ ಮಾಡಿದ್ದಾರೆ. ರಸ್ತೆ, ಒಳಚರಂಡಿಯಂತಹ ಮೂಲ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದಾರೆ. ಸಂಜೀವಿನಿ ಕಟ್ಟಡ, ಗ್ರಂಥಾಲಯ ಕಟ್ಟಡ ಮಾಡಲಾಗಿದೆ. ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಸ್ಥಳ ದಾನ ಮಾಡಿರುವ ಕುಟುಂಬಕ್ಕೆ ಮಾದರಿಯಾಗಿದೆ ಎಂದು ನುಡಿದರು.
ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಮಾತನಾಡಿ, ಗ್ರಾಪಂ ನರೇಗಾ ಯೋಜನೆಯಡಿ ಕೆಲಸಗಳನ್ನು ಮಾಡಲು ಮುಂದಾಗಬೇಕು. ಇದು ಎಲ್ಲರ ಬದುಕಿಗೆ ವರದಾನವಾಗಿದೆ ಎಂದರು.
ಅಂಗನವಾಡಿ ಕೇಂದ್ರಕ್ಕೆ ಸ್ಥಳ ದಾನ ಮಾಡಿದ ದಾನಿ ಕುಟುಂಬದ ಪಟೇಲ್ ದೇವಮ್ಮ ಈರೇಗೌಡ, ಸುಕನ್ಯಾ, ಎ.ಇ. ಕುಮಾರ್, ಸೃಷ್ಟಿ, ಡಾ.ದರ್ಶನ್, ಪರಿಸರ ಇಲಾಖೆ ವಿಜ್ಞಾನಿ ದರ್ಶನ್ ಅವರನ್ನು ಗೌರವಿಸಲಾಯಿತು.
ಈ ವೇಳೆ ಗ್ರಾಪಂ ಆಡಳಿತಾಧಿಕಾರಿ ಶ್ರೀನಿವಾಸ್, ತಾಪಂ ಇಒ ಕೆ.ಸುಷ್ಮಾ, ಪಂಚಾಯತ್‌ರಾಜ್ ಇಲಾಖೆ ಎಇಇ ಮಂಜುಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾವತಿ ಓಂಕಾರಗೌಡ, ಪಿಡಿಒ ವಿಜಯ್, ಮುಖಂಡರಾದ ಪ್ರವೀಣ್, ಐಕನಹಳ್ಳಿ ಕೃಷ್ಣೇಗೌಡ, ಶೇಖರ್, ಬಿ.ರಾಮೇಗೌಡ ಇದ್ದರು. ಮಾ.೯ರಂದು ಕಾದಂಬರಿ ಬಿಡುಗಡೆ, ಮಹಿಳಾ ಸಾಧಕರಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಮಂಡ್ಯಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.೯ರಂದು ಸಂಜೆ ೫ ಗಂಟೆಗೆ ಗಾಂಧಿನಗರದ ಕನ್ನಿಕ ಶಿಲ್ಪ ಸಭಾಂಗಣದಲ್ಲಿ ಹೆಚ್.ಆರ್.ಕನ್ನಿಕ ರಚಿಸಿರುವ ನೀ ಮಾಯೆಯೋ ನಿನ್ನೊಳು ಮಾಯೆಯೋ ಕಾದಂಬರಿ ಬಿಡುಗಡೆ ಹಾಗೂ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉದ್ಘಾಟನೆಯನ್ನು ಮದ್ದೂರಿನ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಎಂ.ಶ್ರೀಲತಾ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮೈಸೂರು ಎಂಐಟಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪ್ರೊ.ಜಿ.ಉಷಾರಾಣಿ ವಹಿಸುವರು. ಕೃತಿ ಬಿಡುಗಡೆ ಹಾಗೂ ಕೃತಿ ಕುರಿತು ಮಳವಳ್ಳಿ ಶಾಂತಿ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸಿ.ಅನಿತಾ ಮಾತನಾಡುವರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರಾದ ಡಾ.ಆರ್.ಪಿ.ಛಾಯಾ (ಜಾನಪದ), ಡಾ.ಜಿ.ಎ.ಮಂಜುಳಾ (ವೈದ್ಯೆ), ಡಾ.ಎನ್.ಎಸ್.ದೇವಿಕಾ (ಸಾಹಿತ್ಯ), ಹೆಚ್.ಆರ್.ವರುಣ (ಕೃಷಿ), ಎಂ.ಯು.ಶ್ವೇತಾ (ನಿರೂಪಕಿ), ಲಕ್ಷ್ಮೀ (ಪೌರ ಕಾರ್ಮಿಕರು), ಟಿ.ಸಿ.ವಸಂತಾ (ಸಮಾಜಸೇವೆ), ಎಸ್.ಎಸ್.ವನಿತಾ (ರಂಗಭೂಮಿ), ಜಿ.ಎನ್.ವಾಣಿ (ಪ್ರಸಾದನ), ವೈ.ಜಿ.ರುಕ್ಮಿಣಿ (ಆರಕ್ಷಕರು), ಅರುಣ (ಸಂಘಟನೆ), ಎಸ್.ವಾಣಿಶ್ರೀ (ಶಿಕ್ಷಣ), ಎಂ.ಫಾತಿಮಾ (ಶುಶ್ರೂಷಕಿ) ಅವರನ್ನು ಸನ್ಮಾನಿಸಲಾಗುವುದು ಎಂದು ಕನ್ನಿಕ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎಚ್.ಆರ್.ಕನ್ನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.