ಕ್ರಿಸ್‌ಮಸ್‌ ಹಬ್ಬಕ್ಕೆ ಶಾಲಾ-ಕಾಲೇಜಿಗೆ ರಜೆ ನೀಡಬೇಡಿ

KannadaprabhaNewsNetwork |  
Published : Nov 27, 2025, 02:00 AM IST
ಕ್ರಿಸ್‌ಮಸ್‌ ಹಬ್ಬದಲ್ಲಿ ಕ್ರಿಶ್ಚಿಯನ್‌ ಶಾಲೆ- ಕಾಲೇಜುಗಳಿಗೆ 10 ದಿನದ ಸರ್ಕಾರಿ ರಜೆ ನೀಡದಂತೆ ಶ್ರೀರಾಮ ಸೇನೆಯಿಂದ ಬುಧವಾರ ಹುಬ್ಬಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಾರತೀಯರ ಪವಿತ್ರ ಹಬ್ಬಗಳಲ್ಲಿ ಒಂದಾದ ವಿಜಯದಶಮಿ ಹಬ್ಬಕ್ಕೆ ಕೇವಲ ಒಂದು ವಾರ ಮಾತ್ರ ಸರ್ಕಾರ ರಜೆ ಘೋಷಿಸುತ್ತದೆ. ಆದರೆ, ಕ್ರಿಶ್ಚಿಯನ್‌ ಕಾನ್ವೆಂಟ್‌, ಶಾಲಾ-ಕಾಲೇಜುಗಳಿಗೆ ದಸರಾ ಹಬ್ಬದ ರಜೆ ನೀಡದೆ ಸರ್ಕಾರದ ಆದೇಶ ಉಲ್ಲಂಘಿಸಿಕೊಂಡು ಬರಲಾಗುತ್ತಿದೆ.

ಹುಬ್ಬಳ್ಳಿ:

ಕ್ರಿಸ್‌ಮಸ್‌ ಹಬ್ಬದಲ್ಲಿ ಕ್ರಿಶ್ಚಿಯನ್‌ ಶಾಲಾ-ಕಾಲೇಜುಗಳಿಗೆ 10 ದಿನ ಸರ್ಕಾರಿ ರಜೆ ನೀಡದಂತೆ ಶ್ರೀರಾಮಸೇನಾ ಹುಬ್ಬಳ್ಳಿ-ಧಾರವಾಡ ಜಿಲ್ಲಾ ಘಟಕದ ವತಿಯಿಂದ ಬುಧವಾರ ಹುಬ್ಬಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಭಾರತೀಯರ ಪವಿತ್ರ ಹಬ್ಬಗಳಲ್ಲಿ ಒಂದಾದ ವಿಜಯದಶಮಿ ಹಬ್ಬಕ್ಕೆ ಕೇವಲ ಒಂದು ವಾರ ಮಾತ್ರ ಸರ್ಕಾರ ರಜೆ ಘೋಷಿಸುತ್ತದೆ. ಆದರೆ, ಕ್ರಿಶ್ಚಿಯನ್‌ ಕಾನ್ವೆಂಟ್‌, ಶಾಲಾ-ಕಾಲೇಜುಗಳಿಗೆ ದಸರಾ ಹಬ್ಬದ ರಜೆ ನೀಡದೆ ಸರ್ಕಾರದ ಆದೇಶ ಉಲ್ಲಂಘಿಸಿಕೊಂಡು ಬರಲಾಗುತ್ತಿದೆ. ಕ್ರಿಶ್ಚಿಯನ್‌ ಶಿಕ್ಷಣ ಸಂಸ್ಥೆಯಲ್ಲಿ ಶೇ. 90ರಷ್ಟು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಿಂದುಗಳೇ ಆಗಿದ್ದರೂ, ಅಲ್ಲಿ ಹಿಂದೂಗಳ ಹಬ್ಬಕ್ಕೆ ಮಹತ್ವ ನೀಡಲಾಗುತ್ತಿಲ್ಲ. ಆದರೆ, ಶೇ. 10ರಷ್ಟು ಮಾತ್ರ ಇರುವ ಕ್ರಿಶ್ಚಿಯನ್‌ ಸಮುದಾಯದ ಕ್ರಿಸ್‌ಮಸ್‌ ಹಬ್ಬಕ್ಕೆ 10 ದಿನ ದಿನ ರಜೆ ನೀಡುತ್ತಿರುವುದು ಖಂಡನೀಯ ಎಂದರು.

ಕೆಲವೆಡೆ ಕ್ರಿಶ್ಚಿಯನ್‌ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಒತ್ತಾಯಪೂರ್ವಕವಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೇಲೆ ಹೇರಲಾಗುತ್ತಿದೆ. ವಿದೇಶಿ ಸಂಸ್ಕೃತಿಯಲ್ಲಿ ಬರುವ ಸಂತಾಕ್ಲಾಸ್‌ನ ವೇಷಭೂಷಣ ಹಾಕುವ ಮೂಲಕ ಹಿಂದೂಗಳಿಗೆ ವಂಚನೆ ಮಾಡಲಾಗುತ್ತಿದೆ. ಪಾಶ್ಚಿಮಾತ್ಯ ಹಬ್ಬವಾದ ಕ್ರಿಸ್‌ಮಸ್‌ ಹಬ್ಬಕ್ಕೆ ಶಾಲಾ-ಕಾಲೇಜಿನಲ್ಲಿ ಯಾವುದೇ ಕಾರಣಕ್ಕೂ ರಜೆ ನೀಡಬಾರದು. ಹಾಗೊಂದು ವೇಳೆ ನೀಡಿದ್ದೇ ಆದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಅಂತಹ ಕಾಲೇಜುಗಳ ಮೇಲೆ ಕಾನೂನು ಕ್ರಮಕೈಗೊಂಡು ಪರವಾನಗಿ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ನಂತರ ಮನವಿಯನ್ನು ಬಿಇಒ ಮೂಲಕ ಸರ್ಕಾರಕ್ಕೆ ಹಾಗೂ ಶಿಕ್ಷಣ ಸಚಿವರಿಗೆ ಸಲ್ಲಿಸಲಾಯಿತು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಅಣ್ಣಪ್ಪ ಡಿವಟಗಿ, ಜಿಲ್ಲಾ ಪ್ರಮುಖ ಮಂಜು ಕಾಟಕರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸು ದುರ್ಗದ, ಪೂರ್ಣಿಮಾ ಕಾಡಮ್ಮನವರ, ಬಸವರಾಜ ಗೌಡರ, ಪ್ರವೀಣ ಮಾಳದಕರ, ಮಗೇಶ ಟೊಂಗಳಿ, ಗುಣಧರ ಡಡೋತಿ, ವೀರಯ್ಯ ಸಾಲಿಮಠ, ವಿಜಯ ದೇವರಮನಿ, ನಾಗರಾಜ ಸೌತಿಕಾಯಿ, ನಾಗರಾಜ್‌ ಹುರಕಡ್ಡಿ ಇದ್ದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ