ಕುರುಗೋಡು: ಅಂಗವಿಕಲರಿಗೆ ಅನುಕಂಪ ಬೇಡ, ಸೌಲಭ್ಯ ಕೊಡಿ ಎಂದು ಡಿಡಿಆರ್ಸಿ ಸಂಯೋಜಕ ನಾಗೇಂದ್ರ ಹೇಳಿದರು.
ಬುದ್ದಿಮಾಂದ್ಯ ಮಕ್ಕಳಲ್ಲಿ ೪ ವಿಧದ ಮಕ್ಕಳಿವೆ. ಈ ಎಲ್ಲ ಮಕ್ಕಳಿಗೆ ಫಿಜಿಯೋಥೆರಪಿ ಅತ್ಯಂತ ಅವಶ್ಯಕತೆಯಿದೆ ಎಂದು ಮಕ್ಕಳು ಸಮಾಜದಲ್ಲಿ ಎಲ್ಲರಂತೆ ಜೀವನ ನಡೆಸಲು ಶಾಲೆಯಲ್ಲಿ ನೀಡುವ ಚಿಕಿತ್ಸೆಯ ಜೊತೆಗೆ ಮನೆಯಲ್ಲಿ ಪೋಷಕರು ಸಹ ಕಾಳಜಿಯಿಂದ ಮಕ್ಕಳನ್ನು ನೋಡಿಕೊಂಡಾಗ ಮಾತ್ರ ಶೇ.೫೦ರಷ್ಟು ಮಕ್ಕಳು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಬದಲಾವಣೆಯಾಗುತ್ತಾರೆ ಎಂದು ತಿಳಿಸಿದರು.
ಸಮುದಾಯ ಸಂಘಟನಾ ಅಧಿಕಾರಿ ಪ್ರೇಮ್ ಚಾರ್ಲ್ಸ್ ಮಾತನಾಡಿ, ನಮ್ಮ ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ವಿಶೇಷ ಮಕ್ಕಳ ಶಾಲೆಗಳಿಗೆ ಒಂದು ತರಹದ ಯೋಜನೆ, ವಿಕಲಚೇತನರಿಗೆ ವೈಯಕ್ತಿವಾದ ಯೋಜನೆ ಬೇರೆಯಾಗಿದೆ. ನಾವು ಸರ್ಕಾರದ ನಿಯಮಾವಳಿಗಳ ಪ್ರಕಾರ ಬರುವಂತಹ ಅನುದಾನವನ್ನು ಸಾಮಾಜಿಕ ಸೇವೆಗೆ ಒದಗಿಸಲು ಅವಕಾಶ ಮಾಡಿಕೊಡುತ್ತೇ ಎಂದು ತಿಳಿಸಿದರು.ಫಿಜಿಯೋಥೆರಪಿಸ್ಟ್ ದೇವರಾಜ ಮಾತನಾಡಿ, ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಯಾವ ಯಾವ ವಿಧದ ಚಿಕಿತ್ಸೆಗಳನ್ನು ಯಾವ ಯಾವ ಸಲಕರಣೆಗಳ ಮೂಲಕ ನೀಡಬೇಕೆಂದು ಶಿಬಿರದಲ್ಲಿ ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ಉಮಾಪತಿಗೌಡ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಸ್ಥಳೀಯ ಎಲ್ಲ ಇಲಾಖೆಗಳು ಸಹಕರಿಸಿದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ. ಜೊತೆಗೆ ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ಬದಲಾವಣೆ ತರುವಲ್ಲಿ ಶಾಲೆಯ ವಾತಾವರಣದ ಜೊತೆಗೆ ಪೋಷಕರ ಕಾಳಜಿ ಕೂಡ ಅತಿ ಮುಖ್ಯವಾದದ್ದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ್ ಮಾತನಾಡಿ, ವಿಶೇಷ ಮಕ್ಕಳ ಪ್ರತಿಯೊಂದು ಕಾರ್ಯಕ್ರಮಕ್ಕೂ ನಮ್ಮ ಪುರಸಭೆ ವ್ಯಾಪ್ತಿಯಲ್ಲಿ ಬರುಂತಹ ಎಲ್ಲ ಯೋಜನೆಗಳಲ್ಲಿ ಸಹಕಾರ ನೀಡುವುದರ ಜೊತೆಗೆ ನಿಮ್ಮ ಶಾಲೆಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದು ತಿಳಿಸಿದರು.
ಜೊತೆಗೆ ಪ್ರತಿವರ್ಷವೂ ನಮ್ಮ ಪುರಸಭೆ ವತಿಯಿಂದ ಆಗುವಂತಹ ಸಹಾಯ ಮತ್ತು ಸಹಕಾರ ನೀಡುತ್ತೇವೆಂದು ಭರವಸೆ ನೀಡುತ್ತೇವೆಂದು ತಿಳಿಸಿದರು.ತಹಶೀಲ್ದಾರ್ ನರಸಪ್ಪ, ಕ್ಲಿನಿಕಲ್ ಸೈಕಾಲಾಜಿಸ್ಟ್ ಆಶಾ, ಮುಖ್ಯ ಶಿಕ್ಷಕಿ ಗೀತಾ, ಶಾಲೆಯ ಸಂಯೋಜಕ ಫಣಿರಾಜ್ ಇದ್ದರು.
ಕುರುಗೋಡು ದೊಡ್ಡಬಸವೇಶ್ವ ಬುದ್ದಿಮಾಂದ್ಯ ಮಕ್ಕಳ ವಿಶೇಷ ಶಾಲೆಯಲ್ಲಿ ಫಿಜಿಯೋಥೆರಪಿ ತಪಾಸಣಾ ಶಿಬಿರ ಹಾಗೂ ಫಿಜಿಯೋಥೆರಪಿ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿತು.