ಆಧುನಿಕ ಜಗತ್ತಿನಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕು-ಖಾದ್ರಿ

KannadaprabhaNewsNetwork |  
Published : Feb 08, 2025, 12:30 AM IST
ಪೊಟೋ ಪೈಲ್ ನೇಮ್ ೨ಎಸ್‌ಜಿವಿ೧   ತಾಲೂಕಿನ  ಇಬ್ರಾಹಿಂಪೂರ ಸರಕಾರಿ ಪ್ರಾಥಮಿಕ ಕನ್ನಡ ಶಾಲೆಯ ವಿವಿಧ ಉದ್ಘಾಟನೆಯ ಕಾರ್ಯಕ್ರಮಗಳ ವೇದಿಕೆಯಲ್ಲಿ ಹೆಸ್ಕಾಂ ನಿಗಮದ ಅಧ್ಯಕ್ಷ ಅಜಂಪೀರ್ ಎಸ್ ಖಾದ್ರಿ ದೀಪ ಬೆಳಗಿಸಿದರು.   | Kannada Prabha

ಸಾರಾಂಶ

ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಮ್ಮ ಗ್ರಾಮೀಣ ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ಪೂರಕ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು. ಸರ್ಕಾರದ ಯೋಜನೆಗಳ ಜೊತೆಗೆ ನಮ್ಮ ಮಕ್ಕಳು ಪ್ರತಿಭಾಶಾಲಿಗಳಾಗಿ, ಉನ್ನತ ಮಟ್ಟದ ವಿಜ್ಞಾನಿಗಳು, ತಂತ್ರಜ್ಞರು ಮೇಧಾವಿಗಳಾಗಬೇಕೆಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಗ್ಗಾಂವಿ: ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಮ್ಮ ಗ್ರಾಮೀಣ ಮಕ್ಕಳ ಪ್ರತಿಭೆಗೆ ತಕ್ಕ ಪುರಸ್ಕಾರ ಪೂರಕ ಶಿಕ್ಷಣ ವ್ಯವಸ್ಥೆಯೂ ಬದಲಾಗಬೇಕು. ಸರ್ಕಾರದ ಯೋಜನೆಗಳ ಜೊತೆಗೆ ನಮ್ಮ ಮಕ್ಕಳು ಪ್ರತಿಭಾಶಾಲಿಗಳಾಗಿ, ಉನ್ನತ ಮಟ್ಟದ ವಿಜ್ಞಾನಿಗಳು, ತಂತ್ರಜ್ಞರು ಮೇಧಾವಿಗಳಾಗಬೇಕೆಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗ್ರಾಮಸ್ಥರ ಹಾಗೂ ದಾನಿಗಳ ಸಹಾಯದಿಂದ ನವೀಕರಣವಾದ ವಿವಿಧ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರಕಾರಿ ಶಾಲೆಯನ್ನು ದಾನಿಗಳ ಮೂಲಕ ಅಭಿವೃದ್ಧಿಪಡಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ವ್ಯವಸ್ಥೆಯನ್ನು ಸರಿಪಡಿಸಿದ್ದಕ್ಕೆ ಮಾಜಿ ಜಿಪಂ ಸದಸ್ಯ ಶಶಿಧರ ಮಾಡಿದ ಕಾರ್ಯಕ್ಕೆ ಅಭಿನಂದನೆ ತಿಳಿಸಿದರು. ನಮ್ಮ ಗ್ರಾಮೀಣ ಶಾಲಾ ಮಕ್ಕಳು ೧೦೦% ಪ್ರತಿಭಾಶಾಲಿಗಳಾಗಬೇಕು. ರಾಜ್ಯಕ್ಕೆ ಶಾಲೆ ಮಾದರಿಯಾಗಬೇಕು ಎಂದರು.ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ಮಾತನಾಡಿ, ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಸರ್ಕಾರ ಮಾಡಲಾಗದು. ಗ್ರಾಮ ಮಟ್ಟದಲ್ಲಿ ಸರಕಾರಿ ಶಾಲೆ ಅಭಿವೃದ್ದಿ ಪಡಿಸಿದ್ದು ಸರಕಾರಿ ಶಾಲೆ ಹೀಗೂ ಇರುತ್ತಾ ಎನ್ನುವ ಶೀರ್ಷಿಕೆ ಕಾರ್ಯಕ್ರಮದ ಪ್ರಸ್ತುತ ಅಭಿವೃದ್ಧಿ ಕಂಡು ಎಲ್ಲರ ಗಮನ ಸೆಳೆಯುವಂತಾಯಿತು. ಗ್ರಾಮೀಣ ಶಾಲೆಗಳ ಆಧುನೀಕರಣ, ನವೀಕರಣ, ಎಲ್ಲ ಕಲಿಕಾದೃಷ್ಟಿ ಮಕ್ಕಳ ಶಿಕ್ಷಣಕ್ಕೆ ಹೊಸತನ ನೀಡಿದೆ. ಗಾಂಧೀಜಿ ತತ್ವ ಆದರ್ಶಗಳನ್ನು ಮಕ್ಕಳ ಮನದಲ್ಲಿ ಮೂಡಿಸಲು ಯುವಪೀಳಿಗೆಯಲ್ಲಿ ಬಿತ್ತಲು ಮೈದಾನದಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ್ದು ಕಂಡು ಮೆಚ್ಚುಗೆಯಾಯಿತು ಎಂದರು.ಡಿಡಿಪಿಐ ಸುರೇಶ ಹುಗ್ಗಿ ಭೂದಾನಿಗಳ ಫಲಕ ಅನಾವರಣಗೊಳಿಸಿ ಮಾತನಾಡಿ, ಜ್ಞಾನ ಯಾರೊಬ್ಬರ ಸ್ವತ್ತೂ ಅಲ್ಲ. ಪ್ರತಿವರ್ಷವೂ ಇಬ್ರಾಹಿಂಪುರ ಸರಕಾರಿ ಶಾಲೆ ತನ್ನ ಕ್ರಿಯಾಶೀಲ ಪ್ರತಿಭೆಯಿಂದ ಪ್ರಶಸ್ತಿಗಳನ್ನು ಬಾಚುತ್ತಲೇ ಇದೆ. ನುರಿತ ಆಸಕ್ತ ಶಿಕ್ಷಕರು ಕೆಲಸ ಮಾಡಿದ್ದಾರೆ. ಅಧ್ಯಯನಕ್ಕೆ ಶಾಲೆ ಪರಿಸರ, ಪಾಲಕರ ಕಾಳಜಿ, ಸ್ವಚ್ಛತೆ, ಕಲಿಕೆಗೆ ಪ್ರೇರಣೆಯ ಶಿಕ್ಷಕರ ಪಠ್ಯಕ್ರಮ ಮಕ್ಕಳ ಪ್ರತಿಭೆಗೆ ಅನುಕೂಲತೆ ನೀಡುತ್ತಿದೆ. ಶಿಕ್ಷಣಕ್ಕೆ ಇನ್ನಷ್ಟು ಮೆರುಗು ನೀಡುತ್ತಿದೆ. ಶಿಕ್ಷಕರು ಹಾಗೂ ಪಾಲಕರ ಹೊಣೆಗಾರಿಕೆಯಿದ್ದಲ್ಲಿ ಗ್ರಾಮೀಣ ಪರಿಸರದ ಮಕ್ಕಳೂ ಉತ್ತಮ ಸಾಧನೆ ಮಾಡುತ್ತಾರೆನ್ನುವುದು ಇಲ್ಲಿ ಸಾಬೀತಾಗಿದೆ.ಎಂದರು.ಮಾಜಿ ಜಿಪಂ ಸದಸ್ಯ ಶಶಿಧರ ಹೊನ್ನಣ್ಣವರ ಕಾರ್ಯಕ್ರಮದ ಪ್ರಾಸ್ತಾವಿಕ ಮಾತನಾಡಿದರು. ಶಿವದೇವ ಶರಣರ ಸಾನಿಧ್ಯದ ಎಸ್‌ಡಿಎಂಸಿ ಅಧ್ಯಕ್ಷ ಸಹದೇವಪ್ಪ ಗುಳೇದಕೇರಿ ಅಧ್ಯಕ್ಷತೆಯ ಕಾರ್ಯಕ್ರಮದಲ್ಲಿ ನಿವೃತ್ತರಿಗೆ ಗುರುವಂದನೆ, ದಾನಿಗಳಿಗೆ, ಗ್ರಾಮೀಣ ಪ್ರತಿಭೆಗಳಿಗೆ ಸನ್ಮಾನ ಗೌರವ ಸಮರ್ಪಣೆ ಅಭಿನಂದನೆ ನಡೆಯಿತು. ಧಾರವಾಡ ಶಿಕ್ಷಣ ಆಯುಕ್ತೆ ಜಯಶ್ರೀ ಸಿಂತ್ರಿ, ಜಿಪಂ ಕಾರ್ಯನಿರ್ವಾಹಕ ಅಭಿಯಂತರ ದಿಲ್‌ಶಾದ್ ಬೇಗಂ ಮೂಗನೂರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹಾಗೂ ಎಂಎಚ್. ಪಾಟೀಲ, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಪಂ ಸದಸ್ಯರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!
ಬಂಗಾಳಕ್ಕೆ ದೀದಿ, ತಮಿಳ್ನಾಡಿಗೆ ಅಣ್ಣಾ, ಅಸ್ಸಾಂಗೆ ಮಾಮಾ, ಕೇರಳಕ್ಕೆ ದಾದಾ!