ಮನೆಮನೆಗೆ ತೆರಳಿ ಡಿ.ಕೆ.ಸುರೇಶ್ ಪರ ಪ್ರಚಾರ

KannadaprabhaNewsNetwork |  
Published : Mar 24, 2024, 01:35 AM IST
23ಕೆಆರ್ ಎಂಎನ್ 2.ಜೆಪಿಜಿಹಾರೋಹಳ್ಳಿ ತಾಲೂಕಿನ ಗಾಣಾಳುದೊಡ್ಡಿ, ಭೀಮಸಂದ್ರ, ರಾಮಕೃಷ್ಣಪುರದೊಡ್ಡಿ, ಸಂಜೀವನಾಯಕನದೊಡ್ಡಿ ಗ್ರಾಮಗಳಲ್ಲಿನ ಪ್ರತಿ ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ರವರ ಪರವಾಗಿ ಪಕ್ಷದ ಕಾರ್ಯಕರ್ತರು ಮತಯಾಚಿಸಿದರು. | Kannada Prabha

ಸಾರಾಂಶ

ತಾಲೂಕಿನ ಗಾಣಾಳುದೊಡ್ಡಿ, ಭೀಮಸಂದ್ರ, ರಾಮಕೃಷ್ಣಪುರದೊಡ್ಡಿ, ಸಂಜೀವನಾಯಕನದೊಡ್ಡಿ ಗ್ರಾಮಗಳಲ್ಲಿನ ಪ್ರತಿ ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಕಾರ್ಯಕರ್ತರು ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ಹಾರೋಹಳ್ಳಿ

ತಾಲೂಕಿನ ಗಾಣಾಳುದೊಡ್ಡಿ, ಭೀಮಸಂದ್ರ, ರಾಮಕೃಷ್ಣಪುರದೊಡ್ಡಿ, ಸಂಜೀವನಾಯಕನದೊಡ್ಡಿ ಗ್ರಾಮಗಳಲ್ಲಿನ ಪ್ರತಿ ಮನೆಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಕಾರ್ಯಕರ್ತರು ಮತಯಾಚಿಸಿದರು.

ಪರಿಶಿಷ್ಟರ ಬ್ಲಾಕ್ ವಿಭಾಗದ ಅಧ್ಯಕ್ಷ ಕೋಟೆ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಮನೆಮನೆಗೆ ತಲುಪುತ್ತಿದೆ. ಇದರಿಂದ ಮಹಿಳೆಯರಿಗೆ ಅವರ ಕುಟುಂಬಸ್ಥರಿಗೆ ಹಾಗೂ ಎಲ್ಲರಿಗೂ ಅನುಕೂಲವಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಸಂಸದರ ಪರಿಚಯವಿದೆ. ಜನರ ಸಮಸ್ಯೆಗಳು ಅವರಿಗೆ ಅರಿವಿದೆ. ಮತದಾರರು ಡಿ.ಕೆ.ಸುರೇಶ್ ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ ಎಂದರು.

ನಾವು ಕೇಳದೆ ಹೋದರೂ ಹಾರೋಹಳ್ಳಿ, ಮರಳವಾಡಿ ಹಾಗೂ ಹಾರೋಹಳ್ಳಿ ಭಾಗಕ್ಕೆ ಕಾವೇರಿ ಕುಡಿಯುವ ನೀರಿನ ವ್ಯವಸ್ಥೆ, ಬೆಂಗಳೂರು ಮುಖ್ಯರಸ್ತೆಗೆ ಹಾರೋಹಳ್ಳಿ ಪಪಂ ವ್ಯಾಪ್ತಿಗೆ 150 ಕೋಟಿ ಅಭಿವೃದ್ಧಿಗೊಳಿಸಲು ಸರ್ಕಾರದಿಂದ ಅನುದಾನ ತಂದಿದ್ದಾರೆ. ಚರಂಡಿ ವ್ಯವಸ್ಥೆ, ವಸತಿ ಇಲ್ಲದ ಬಡವರಿಗೆ 1500 ನಿವೇಶನ ಹಂಚಲಿದ್ದಾರೆ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ ಎಂದರು.

ಈ ಹಿಂದೆ ಇದ್ದಂತಹ ಶಾಸಕರು ಐದು ವರ್ಷಕ್ಕೆ ಒಂದು ಬಾರಿ ಬಂದು ಹೋಗುತ್ತಿದ್ದರು. ಆದರೆ ಸುರೇಶ್‌ ಅವರಂತಹ ಸಂಸದರನ್ನು ಉಳಿಸಿಕೊಳ್ಳಬೇಕು. ಮನೆಮನೆಗೆ ತೆರಳಿ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ಸುರೇಶ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡುತ್ತಿದ್ದೇವೆ ಎಂದು ಕೋಟೆ ಕುಮಾರ್ ತಿಳಿಸಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಮೋಹನ್, ಬ್ಲಾಕ್ ಕಾಂಗ್ರೆಸ್ ಅಶೋಕ್, ಎಸ್.ಕೆ.ಸುರೇಶ್, ಎಚ್.ಸಿ.ಶೇಖರ್, ನಾಗರಾಜ್, ಸೋಮಶೇಖರ್, ಶಿವಣ್ಣ, ರಮೇಶ್, ಬಾಲಾಜಿ ಮತ್ತಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಎಸ್‌ ಹಾಸನ ಸಮಾವೇಶಕ್ಕೆ ಆಹ್ವಾನವಿಲ್ಲ : ಜಿ.ಟಿ.ದೇವೇಗೌಡ
ಅರಸು ದಾಖಲೆ ಸರಿಗಟ್ಟಲು ಜನರ ಆಶೀರ್ವಾದವೇ ಕಾರಣ: ಸಿದ್ದರಾಮಯ್ಯ