ಭದ್ರಾ ನದಿ ಪಾತ್ರದಲ್ಲಿ ಎದುರಾಗಿದ್ದ ಪ್ರವಾಹದ ಭೀತಿ ಕಡಿಮೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ, ಸ್ವಲ್ಪ ಪ್ರಮಾಣದಲ್ಲಿ ಇಳಿಮುಖವಾಗಿದೆ. ತುಂಗಾ, ಭದ್ರಾ ನದಿ ಪಾತ್ರದಲ್ಲಿ ಎದುರಾಗಿದ್ದ ಪ್ರವಾಹದ ಭೀತಿ ಕಡಿಮೆಯಾಗಿದೆ.
ಕಳೆದ ಶುಕ್ರವಾರದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿತ್ತು. ಇದರಿಂದ ತುಂಬಾ ಮತ್ತು ಭದ್ರಾ ನದಿಗಳು ಅಪಾಯ ಮಟ್ಟದ ಮೀರಿ ಹರಿಯುತ್ತಿದ್ದವು. ಸೋಮವಾರ ಮಧ್ಯಾಹ್ನ ಬಳಿಕ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ.ಇನ್ನೂ ಮಳೆ ಪ್ರಮಾಣವೂ ಶೃಂಗೇರಿ, ಕೊಪ್ಪ ಹಾಗೂ ಕಳದ ತಾಲೂಕು ಹೊರತು ಪಡಿಸಿದರೆ, ಉಳಿದ ತಾಲೂಕಿನಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬುಧವಾರ ಮತ್ತಷ್ಟು ಮಳೆಯಾವ ಸಾಧ್ಯತೆ ಇದೆ ಎಂದುಹವಾಮಾನ ಇಲಾಖೆ ತಿಳಿಸಿದೆ.
ಶೃಂಗೇರಿ ಮುಂದುವರಿದ ಮಳೆಯ ಅಬ್ಬರ: ತಾಲೂಕಿನಾದ್ಯಂತ ಮಂಗಳವಾರವೂ ಮಯ ಅಬ್ಬರ ಮುಂದುವರಿರೆದಿತ್ತು. ಸೋಮವಾರ ರಾತ್ರಿಯಿಡೀ ಸುರಿದ ಮಳೆ ಮಂಗಳವಾರವೂ ಬಿಡುವಿಲ್ಲದೇ ಅಬ್ಬರಿಸಿತು. ತುಂಗಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದರೂ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ತಗ್ಗು ಪ್ರದೇಶಗಳು ಇನ್ನೂ ಜಲಾವೃತಗೊಂಡಿದೆ.ಶ್ರೀಮಠದ ತುಂಗಾನದಿ ತೀರದಲ್ಲಿರುವ ಕಪ್ಪೆಶಂಕರ ದೇವಾಲಯ ಮುಳುಗಡೆಯಾಗಿಯೇ ಇದೆ.ಶಾಲಾ ಕಾಲೇಜುಗಳಿಗೆ ರಜೆ ಇರಲಿಲ್ಲಎಂದಿನಂತೆ ನಡೆಯಿತು. ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ.ರಾತ್ರಿವರೆಗೂ ಮಳೆ ಆರ್ಭಟ ಮುಂದುವರಿದಿತ್ತು.-- ಬಾಕ್ಸ್---
ಮಳೆ ಪ್ರಮಾಣ
ತಾಲೂಕುಪ್ರಮಾಣಶೃಂಗೇರಿ 5.2 ಸೆಂ.ಮಿ.
ಕೊಪ್ಪ2.7 ಸೆಂ.ಮಿಕಳಸ19 ಸೆಂ.ಮಿ
ನರಸಿಂಹರಾಜಪುರ0.5 ಸೆಂ.ಮಿಮೂಡಿಗೆರೆ0.4 ಸೆಂ.ಮಿ
ತರೀಕೆರೆ0.3 ಸೆಂ.ಮೀಚಿಕ್ಕಮಗಳೂರು0.2 ಸೆಂ.ಮೀ
ಕಡೂರು0.ಸೆಂ.ಮೀಅಜ್ಜಂಪುರ0. ಸೆಂ.ಮೀ
ಸರಾಸರಿ0.7 ಸೆಂ.ಮೀ