ಇನ್ನು ಮೂರು ದಿನಗಳಲ್ಲಿ, ಮೂರನೇ ಹಂತದಲ್ಲಿ ಇನ್ನೂ 52 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗುವುದು. ನನ್ನ ಪ್ರಕಾರ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ದಾವಣಗೆರೆ: ಇನ್ನು ಮೂರು ದಿನಗಳಲ್ಲಿ, ಮೂರನೇ ಹಂತದಲ್ಲಿ ಇನ್ನೂ 52 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಲಾಗುವುದು. ನನ್ನ ಪ್ರಕಾರ ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಲಿವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಬರಪೀಡಿತವಾದ ಹಲವಾರು ತಾಲೂಕುಗಳನ್ನು ಕೈಬಿಟ್ಟ ಬಗ್ಗೆ ರೈತರು ಆಕ್ರೋಶ

ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಬರಪೀಡಿತವಾದ ಹಲವಾರು ತಾಲೂಕುಗಳನ್ನು ಕೈಬಿಟ್ಟ ಬಗ್ಗೆ ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ನಿಯಮಗಳಡಿ ಬರಪೀಡಿತ ಪ್ರದೇಶಗಳ ಘೋಷಣೆ ಆಗಲಿದೆ. ಮೂರನೇ ಹಂತದಲ್ಲಿ ಇನ್ನೂ 52 ತಾಲೂಕುಗಳು ಬರಪೀಡಿತ ತಾಲೂಕಾಗಿ ಘೋಷಣೆಯಾಗಲಿವೆ ಎಂದರು.

ಸ್ಯಾಟ್‌ಲೈಟ್ ಚಿತ್ರಗಳು, ಡೇಟಾ ಸಂಗ್ರಹ

ಸ್ಯಾಟ್‌ಲೈಟ್ ಚಿತ್ರಗಳು, ಡೇಟಾ ಸಂಗ್ರಹಿಸಿ ಬರಪೀಡಿತ ಪ್ರದೇಶಗಳ ಘೋಷಣೆ ಮಾಡುತ್ತಾರೆ. ನಿಯಮಗಳಡಿ 10 ಪ್ಯಾರಾಮೀಟರ್ಸ್ ಸ್ಪಂದಿಸಿದ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗುತ್ತವೆ. ಇದು ಹಂತ, ಹಂತವಾಗಿ ಮಾಡುವಂತಹದ್ದು. ಮುಂದಿನ ಒಂದು ವಾರದೊಳಗಾಗಿ ಜಗಳೂರು ತಾಲೂಕು ಸಹ ಬರಪೀಡಿತ ತಾಲೂಕು ಎಂಬುದಾಗಿ ಘೋಷಣೆಯಾಗಲಿವೆ ಎಂದು ಭರವಸೆ ನೀಡಿದರು.

ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿತ್ತು. ಬಳಿಕ 2ನೇ ಹಂತದಲ್ಲಿ ಮತ್ತೆ 24 ತಾಲೂಕುಗಳನ್ನು ಇದೇ ಪಟ್ಟಿಗೆ ಸೇರಿಸಿತ್ತು.