ಮನೆ ಮನೆಗೆ ಪೊಲೀಸ್‌ ಯೋಜನೆ ಸಮಾಜಕ್ಕೆ ದಾರಿದೀಪ: ಎಎಸ್‌ಪಿ ಪರಮೇಶ್ವರ ಹೆಗಡೆ

KannadaprabhaNewsNetwork |  
Published : Aug 09, 2025, 02:06 AM IST
ಹೊನ್ನಾಳಿ ಫೋಟೋ 7ಎಚ್.ಎಲ್.ಐ2.  ದಾವಣಗೆರೆಗೆ ನೂತನವಾಗಿ ವರ್ಗಾವಣೆಗೊಂಡು ಬಂದಿರುವ ಜಿಲ್ಲಾ ಹೆಚ್ಚುವರಿ ಪೊಲಿಸ್ ವರೀಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೊನ್ನಾಳಿ ಪೊಲೀಸ್‌ಠಾಣೆಗೆ ಆಗಮಿಸಿ ಪೊಲೀಸ್‌ಇನ್ಸ್ಪೆಕ್ಟರ್ ಸುನಿಲ್‌ಕುಮಾರ್ ಅವರ   ಹೊನ್ನಾಳಿ ತಾಲೂಕಿನ ಕಾನೂನು ಸುವ್ಯವಸ್ಥೆಗಳ ಕುರಿತು ಚರ್ಚಿಸುತ್ತಿರುವುದು | Kannada Prabha

ಸಾರಾಂಶ

ಜನತೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ಸಮಾಜಕ್ಕೆ ದಾರಿದೀಪ ಆಗಲಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೇಳಿದ್ದಾರೆ.

- ಹೊನ್ನಾಳಿ ಪೊಲೀಸ್‌ ಠಾಣೆಯಲ್ಲಿ ಕಾನೂನು ಸುವ್ಯವಸ್ಥೆ ಚರ್ಚೆ

- - -

ಹೊನ್ನಾಳಿ: ಜನತೆಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಜಾರಿಗೊಳಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ಸಮಾಜಕ್ಕೆ ದಾರಿದೀಪ ಆಗಲಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೇಳಿದರು.

ಹೊನ್ನಾಳಿ ಪೊಲೀಸ್‌ ಠಾಣೆಗೆ ಮೊದಲ ಬಾರಿಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮನೆ ಮನೆಗೆ ಪೊಲೀಸ್ ಭೇಟಿ ನೀಡುವ ಈ ವಿನೂತನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹೆಚ್ಚು ಮಹತ್ವ ಪಡೆಯಲಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಮನೆ ಮನೆಗೆ ಪೊಲೀಸರು ಭೇಟಿ, ರಕ್ಷಣೆಗೆ ಸಂಬಂಧಿಸಿದಂತೆ ಕುಂದುಕೊರತೆ ಆಲಿಸಿ, ಸಲಹೆ ಪಡೆದುಕೊಳ್ಳವರು. ಈ ಕಾರ್ಯಕ್ರಮ ಬಗ್ಗೆ ಸ್ವತಃ ಸಾರ್ವಜನಿಕರೇ ಎಸ್‌ಪಿ ಮೇಡಂ ಅವರಿಗೆ ಕರೆ ಮಾಡಿ ಈ ಯೋಜನೆ ಸರಿಯಾಗಿದೆ. ಇದರಿಂದ ಪೊಲಿಸರ ಮೇಲೆ ಮತ್ತಷ್ಟು ಗೌರವ, ನಂಬಿಕೆ ಹಾಗೂ ವಿಶ್ವಾಸ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದರು.

ತಮ್ಮ ಮನೆಗಳಿಗೆ ಪೊಲಿಸರು ಭೇಟಿ ನೀಡುವುದರಿಂದ ವಿಶೇಷವಾಗಿ ಕೌಟಂಬಿಕ ಕಲಹಗಳು ಕಡಿಮೆಯಾಗಲಿವೆ. ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತವೆ. ಪೊಲಿಸರು ತಮ್ಮ ಬಳಿ ಬಂದಾಗ ತಮ್ಮ ಮನೆಗಳ ಸುತ್ತಮುತ್ತಲಿನಲ್ಲಿ ಅಪರಾಧಗಳು ನಡೆಯುತ್ತಿದ್ದರೆ ಅಥವಾ ನಡೆದಿದೆ ಎಂಬುದು ನಿಮಗೆ ತಿಳಿದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಮುಂದಾಗುವ ಯಾವುದೇ ಅವಘಡಗಳನ್ನು ತಪ್ಪಿಸಬಹುದು ಎಂದರು.

- - -

-7ಎಚ್.ಎಲ್.ಐ2:

ದಾವಣಗೆರೆಗೆ ವರ್ಗಾವಣೆಗೊಂಡಿರುವ ನೂತನ ಜಿಲ್ಲಾ ಹೆಚ್ಚುವರಿ ಪೊಲಿಸ್ ವರೀಷ್ಠಾಧಿಕಾರಿ ಪರಮೇಶ್ವರ್ ಹೆಗಡೆ ಹೊನ್ನಾಳಿ ಠಾಣೆಗೆ ಆಗಮಿಸಿ, ಪಿಐ ಸುನೀಲ್‌ಕುಮಾರ್ ಜತೆ ತಾಲೂಕಿನ ಕಾನೂನು ಸುವ್ಯವಸ್ಥೆಗಳ ಕುರಿತು ಚರ್ಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ