ಇಂದು ದೋಟಿಹಾಳ ಶುಕಮುನಿ ಶ್ರೀಗಳ ಜಾತ್ರೆ

KannadaprabhaNewsNetwork |  
Published : Feb 17, 2026, 02:30 AM IST
ಶುಕಮುನಿ ಜಾತ್ರೆಯ ಮೆರವಣಿಗೆ | Kannada Prabha

ಸಾರಾಂಶ

ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯ ದೇವರಾದ ಶ್ರೀ ಅವಧೂತ ಶುಕಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆ. 17ರಂದು ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಪರಶಿವಮೂರ್ತಿ ದೋಟಿಹಾಳ

ಕುಷ್ಟಗಿ: ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯ ದೇವರಾದ ಶ್ರೀ ಅವಧೂತ ಶುಕಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆ. 17ರಂದು ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ.

ಜಾತ್ರಾ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರ, ಬಿಲ್ವಾರ್ಚನೆ, ಮಹಾಭಿಷೇಕ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಗಳ ಜತೆಗೆ ರಥದ ಮುಂದೆ ಹೋಮ-ಹವನಗಳು ನಡೆಯಲಿದ್ದು ಮಹಾರಥೋತ್ಸವಕ್ಕಾಗಿ ಸಲಕ ಸಿದ್ಧತೆ ಭರದಿಂದ ಸಾಗಿವೆ.

ಫೆ. 10ರಿಂದ ಆರಂಭಗೊಂಡಿರುವ ಸಪ್ತ ಭಜನೆ, ಪಲ್ಲಕ್ಕಿ ಉತ್ಸವ, ಅನ್ನದಾಸೋಹ ಕಾರ್ಯಕ್ರಮ ಮುಕ್ತಾಯಗೊಂಡು ಸಂಜೆ ಮಹಾರಥೋತ್ಸವ ಜರುಗಲಿದೆ. ಮಹಾ ರಥೋತ್ಸವದಲ್ಲಿ ಜನಪ್ರತಿನಿಧಿಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ.

ಜಾತ್ರೆಯಲ್ಲಿಂದು: ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅಭಿಮಾನಿ ಬಳಗದಿಂದ ದೋಟಿಹಾಳ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಚಿಕ್ಕಮಕ್ಕಳ ಆರೋಗ್ಯ ತಪಾಸಣೆ ಶಿಬಿ ನಡೆಯಲಿದೆ. ಸಂಜೆ 7.30ಕ್ಕೆ ಅವಧೂತ ಶ್ರೀ ಸಾಂಸ್ಕೃತಿಕ ಸಂಭ್ರಮ ರಸಮಂಜರಿ ಕಾರ್ಯಕ್ರಮವನ್ನು ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ವಿಪ ಸದಸ್ಯ ಶರಣೇಗೌಡ ಬಯ್ಯಾಪೂರ, ಮಾಜಿ ಸಂಸದ ಸಂಗಣ್ಣ ಕರಡಿ, ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಕಲಾವಿದರಾದ ಹನುಮಂತ ಲಮಾಣಿ, ಕಾಮಿಡಿ ಕಲಾವಿದರಾದ ಸಂಜು ಬಸಯ್ಯ ಮತ್ತು ಪಲ್ಲವಿ, ಸರಿಗಮಪ ಗಾಯಕಿ ಭೂಮಿಕಾ, ಸುಹಾನ ಸೈಯದ್, ಸುಸ್ಮಿತಾ ಹುಬ್ಬಳ್ಳಿ, ರಮೇಶ ಕುರಗಟ್ಟಿ.ಜ್ಯೂ. ರವೀಚಂದ್ರನ್, ಶ್ರುತಿ ರಾಠೋಡ, ಗೋಪಾಲ ಇ, ಗೋಪಾಲ ಹೂ, ಮುನೀರ್ ಸೇರಿದಂತೆ ಅನೇಕ ಕಲಾವಿದರು ಸಾಂಸ್ಕೃತಿಕ ಸಂಭ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂದಿಮನಿ ಸಂಗವ್ವ ನಾಟಕ: ಅವಧೂತ ಶುಕಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಅವಧೂತ ಶುಕಮುನಿ ಸ್ವಾಮಿಗಳ ಭಕ್ತರ ಬಳಗದ ಸಹಯೋಗದಲ್ಲಿ ಎನ್‌.ಎಸ್. ಜೋಶಿ ವಿರಚಿತ ಕಾಮಿಡಿ ಕಿಲಾಡಿ ಖ್ಯಾತಿಯ ದಯಾನಂದ ಬೀಳಗಿ ಹಾಗೂ ಶ್ವೇತಾ ಬೀಳಗಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಂದಿಮನಿ ಸಂಗವ್ವ ಎಂಬ ನಾಟಕ ಆಯೋಜಿಸಿದ್ದು ಶುಖಮುನಿ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾತ್ರಿ 9 ಗಂಟೆಗೆ ಪ್ರಾರಂಭವಾಗಲಿದೆ. ಶಾಸಕ ದೊಡ್ಡನಗೌಡ ಪಾಟೀಲ ನಾಟಕ ಉದ್ಘಾಟಿಸಲಿದ್ದು ಡಾ. ಬಸವರಾಜ ಕ್ಯಾವಟರ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಿಶಿನಕುಪ್ಪೆ: ಶಿವರಾತ್ರಿ ಉತ್ಸವ, ದೇವಳಕ್ಕೆ ಗೋದಾನ
ರೋಣವನ್ನು ಮಾದರಿ ಕ್ಷೇತ್ರ ಮಾಡಲು ಪಣ: ಮಿಥುನ ಜಿ. ಪಾಟೀಲ