ದೇವಸ್ಥಾನದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಕನ್ನಡಪ್ರಭ ವಾರ್ತೆ ಕುಷ್ಟಗಿ
ದೇವಸ್ಥಾನ ಕಮಿಟಿ ಅಧ್ಯಕ್ಷ ತಹಸೀಲ್ದಾರ ಅಶೋಕ ಶಿಗ್ಗಾಂವಿ ಮಾತನಾಡಿ, ಶುಖಮುನಿ ತಾತನವರು ಪವಾಡ ಪುರುಷರಾಗಿ ಅನೇಕ ಪವಾಡಗಳನ್ನು ಮಾಡುವ ಮೂಲಕ ಜನರ ಮನದಲ್ಲಿ ಇದ್ದಾರೆ. ಅಂತಹ ಮಹಾಪುರುಷರ ಜಾತ್ರೆಯನ್ನು ಸಡಗರದಿಂದ ಆಚರಿಸೋಣ ಎಂದರು.
ಕುಷ್ಟಗಿ ಪಿಎಸ್‌ಐ ಹನುಮಂತಪ್ಪ ತಳವಾರ ಮಾತನಾಡಿ, ಒಂದು ವಾರದ ಮುಂಚಿತವಾಗಿ ಆರಂಭವಾಗುವ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಹಿರಿಯರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು. ಮದ್ಯಪಾನ ಮಾಡಿ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಳ್ಳಬಾರದು, ಇನ್ನೊಬ್ಬರಿಗೆ ತೊಂದರೆ ಕೊಡಬಾರದು, ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ವಿಡಿಯೋ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಹತ್ತು ಗಂಟೆಯ ಒಳಗಡೆ ಪಲ್ಲಕ್ಕಿ ಉತ್ಸವ ಮುಗಿಸಬೇಕು ಎಂದರು.ದೋಟಿಹಾಳ ಗ್ರಾಪಂ ಅಧ್ಯಕ್ಷ ಮಹೇಶ ಕಾಳಗಿ ಮಾತನಾಡಿ, ಜಾತ್ರೆಗೆ ಬರುವಂತಹ ಭಕ್ತರಿಗೆ ಗ್ರಾಪಂ ವತಿಯಿಂದ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ದೇವಸ್ಥಾನದ ಆವರಣ ಹಾಗೂ ಗ್ರಾಮದ ಸ್ವಚ್ಛತೆ ಮಾಡಲಾಗುತ್ತದೆ ಎಂದರು.
ಫೆ. 20ರಿಂದ ಜಾತ್ರೆ ಆರಂಭ:
ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ ಮದಲಗಟ್ಟಿ, ಡಾ. ಸಂತೋಷಕುಮಾರ ಬಿರಾದಾರ, ದೋಟಿಹಾಳ ಪಿಡಿಒ ದಸ್ತಗೀರಸಾಬ್ ಬಡಿಗೇರ, ಕೇಸೂರು ಪಿಡಿಒ ಗಂಗಯ್ಯ ವಸ್ತ್ರದ, ಕಲ್ಲಯ್ಯಸ್ವಾಮಿ ಸರಗಣಚಾರಿ, ಶೇಖಪ್ಪ ದೊಡ್ಡಮನಿ, ಹನುಮಂತ ಪೂಜಾರ, ವಿಷ್ಣು ಅಂಗಡಿ, ರಾಮನಗೌಡ ಬಿಜ್ಜಲ, ಗುರುಸಿದ್ದಯ್ಯ ಮಳಿಮಠ, ದೊಡ್ಡನಗೌಡ ಮಾಟೂರು, ರಾಜಶೇಖರ ಹೊಕ್ರಾಣಿ, ನಾರಾಯಣಪ್ಪ ಕೊಳ್ಳಿ, ಶಾಮಿದಸಾಬ ಮುಜಾವರ, ಬಸವರಾಜ ಶೆಟ್ಟರ, ಬಾಳಪ್ಪ ಅರಳಿಕಟ್ಟಿ, ರಾಘವೇಂದ್ರ ಕುಂಬಾರ, ಉಮೇಶ ಮಡಿವಾಳರ, ಶಿವನಗೌಡ ಪಾಟೀಲ, ಬಾಲಾಜಿ ವಡ್ಡರ ಇದ್ದರು.