ಕನ್ನಡಪ್ರಭ ವಾರ್ತೆ ಕೋಲಾರಒಂದು ವರ್ಷದ ಹಿಂದೆ ಗಂಡಿನ ಮನೆಯವರು ಕೇಳಿದ್ದನ್ನೆಲ್ಲ ಕೊಟ್ಟು ಮದುವೆ ಮಾಡಲಾಗಿತ್ತು. ಆದರೆ ವರದಕ್ಷಿಣೆ ದಾಹದಿಂದ ೬ ತಿಂಗಳು ಸಹ ನ್ಯಾಯವಾಗಿ ಸಂಸಾರ ಮಾಡದ ಅವರಿಬ್ಬರ ಸಂಸಾರದಲ್ಲಿ ಬಿರುಕು ಮೂಡಿತ್ತು. ಹಾಗಾಗಿ ನವವಿವಾಹಿತ ಯುವತಿ ಡೆತ್ ನೋಟ್ ಬರೆದಿಟ್ಟು ಆಕೆ ಆತ್ಮಹತ್ಯೆ ಮಾಡಿಕೊಂಡಿಡ ಘಟನೆ ಕೋಲಾರ ಸಮೀಪ ಶನಿವಾರ ನಡೆದಿದೆ.
ಶನಿವಾರ ನ್ಯಾಯಾಲಯದಿಂದ ನೋಟಿಸ್ ಬಂದಿರುವ ಹಿನ್ನೆಲೆಯಲ್ಲಿ ಮಾನಸ ರಾತ್ರಿ ಡೆತ್‌ನೋಟ್ ಬರೆದಿಟ್ಟು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಮಗಳ ಸಾವಿಗೆ ಆಕೆಯ ಪತಿ ಉಲ್ಲಾಸ್‌ಗೌಡ ಹಾಗು ಆತನ ಪೋಷಕರೇ ಕಾರಣ ಎಂದು ಮಾನಸಳ ಪೋಷಕರು ಆರೋಪಿಸಿದ್ದಾರೆ.ಪತಿಯ ಮನೆ ಮುಂದೆ ಸಂಸ್ಕಾರಕ್ಕೆ ಯತ್ನ
ಕೋಲಾರದ ಹೊರವಲಯದ ಜಾಲಪ್ಪ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಸೀದಾ ತೂರಾಂಡಹಳ್ಳಿಗೆ ಅಂತ್ಯ ಸಂಸ್ಕಾರಕ್ಕೆ ಹೊತ್ತೊಯ್ದ ಮಾನಸ ಪೋಷಕರು ಉಲ್ಲಾಸ್‌ಗೌಡ ಮನೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರಲ್ಲದೆ, ಮಾನಸ ಸಾವಿಗೆ ಕಾರಣಳಾದ ಪತಿ ಉಲ್ಲಾಸ್ ಮನೆ ಎದುರು ಅಂತ್ಯ ಸಂಸ್ಕಾರಕ್ಕೆ ಮುಂದಾಗಿದರು. ಈ ವೇಳೆ ಮಾನಸ ಸಂಬಂಧಿಕರ ಮನವೊಲಿಸಿ ಪತಿಯ ಮನೆಯ ಪಕ್ಕದಲ್ಲಿ ಅಂತ್ಯಸಂಸ್ಕಾರ ಮಾಡಿದರು.ಇಷ್ಟೆಲ್ಲಾ ಅವಾಂತರಕ್ಕೆ ಕಾರಣರಾದ ಉಲ್ಲಾಸ್ ಹಾಗೂ ತಂದೆ ಗೋಪಾಲ್ ಗೌಡ ತಾಯಿ ಜಯಮ್ಮ, ಮಾವಂದಿರ ವಿರುದ್ದ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.