-ತಹಸೀಲ್ದಾರ್ ಮೂಲಕ ನವದೆಹಲಿಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಿಗೆ ಎಸ್ಡಿಪಿಐ ಮನವಿ
ಕನ್ನಡಪ್ರಭ ವಾರ್ತೆ ಹಿರಿಯೂರು:
ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ್ ಸುಧಾರಣೆಗಳ ಹೆಸರಿನಲ್ಲಿ ಕೇಂದ್ರ ಸರ್ಕಾರ ವಕ್ಫ್ ಬಿಲ್ 2024 ಜಾರಿಗೆ ತಂದಿರುವುದು ಆತಂಕಕಾರಿ ವಿಷಯ. ಈ ಮಸೂದೆ ಕುರಿತು ನಮ್ಮ ಆಕ್ಷೇಪಣೆ ಇದೆಯೆಂದು ತಾಲೂಕು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ತಹಸೀಲ್ದಾರ್ ಕಚೇರಿ ಮೂಲಕ ನವದೆಹಲಿಯ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹಿಡನ್ ಅಜೆಂಡಾ ಬಿಜೆಪಿಯದ್ದಾಗಿದೆ. ಹಾಲಿ ಇರುವ ವಕ್ಫ್ ಕಾಯ್ದೆಗೆ 40 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಕಾಯ್ದೆಯನ್ನೇ ನಾಶಗೊಳಿಸಲು ಈ 2024 ವಕ್ಫ್ ಕಾಯ್ದೆಯನ್ನು ತರಲಾಗಿದೆ. ವಕ್ಫ್ ಮಸೂದೆಯು ನ್ಯಾಯಾoಗ ಮಂಡಳಿಯ ಅಧಿಕಾರವನ್ನು ಕಸಿಯುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ. ಈ ದುರುದ್ದೇಶಿತ ಮಸೂದೆಯೂ ಮುಸಲ್ಮಾನರನ್ನು ಎರಡನೇ ದರ್ಜೆಯ ನಾಗರಿಕ ರನ್ನಾಗಿ ಮಾಡುವ ಕಾನೂನುಗಳ ಸಂದೇಶ ಸಾರುತ್ತಿದೆ. ಆದ್ದರಿಂದ, ಸಮಾಜದ ಹಿತೈದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀನಿವಾಸ್, ನಯಾಜ್ ಶೇಖ್,ಕೆ.ಕೆ. ರಫೀಕ್,ಅಬಿದ್ ಹುಸೇನ್,ಮನ್ಸೂರ್, ಶೋಯಬ್ ಮುಂತಾದವರು ಹಾಜರಿದ್ದರು.----
ಚಿತ್ರ 1 ಕೇಂದ್ರ ಸರ್ಕಾರ ವಕ್ಫ್ ಬಿಲ್ 2024 ಜಾರಿಗೆ ತಂದಿರುವುದು ಆತಂಕಕಾರಿ ವಿಷಯ ಎಂದು ನಗರದ ತಹಸೀಲ್ದಾರ್ ಕಚೇರಿಗೆ ತಾಲೂಕು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ ವತಿಯಿಂದ ಮನವಿ ಸಲ್ಲಿಸಲಾಯಿತು.