ಜಗತ್ತಿಗೆ ಜ್ಞಾನ ನೀಡಿದ ಮಹಾನ್ ಚಿಂತಕ ಡಾ. ಅಂಬೇಡ್ಕರ್‌: ಎಸ್.ಡಿ. ಮುಡೆಣ್ಣನವರ

KannadaprabhaNewsNetwork |  
Published : Apr 26, 2026, 03:15 AM IST
ಮುಂಡಗೋಡದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಹಿಳೋತ್ಸವ ಕಾರ್ಯಕ್ರಮದ ಜಾಥಾ ನಡೆಯಿತು. | Kannada Prabha

ಸಾರಾಂಶ

ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಮುಂಡಗೋಡ ಪಟ್ಟಣದಲ್ಲಿ ವಿವಿಧ ಸಂಘಟನೆ ನೇತೃತ್ವದಲ್ಲಿ ಮಹಿಳೋತ್ಸವ ಕಾರ್ಯಕ್ರಮದ ಜಾಥಾ ನಡೆಯಿತು.

ಮುಂಡಗೋಡ: ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಮೂಲಕ ಜಗತ್ತಿಗೆ ಜ್ಞಾನ ನೀಡಿದ ಮಹಾನ್ ಚಿಂತಕ ಎಂದು ಶಿರಸಿ ಶೈಕ್ಷಣಿಕ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಡಿ. ಮುಡೆಣ್ಣನವರ ಹೇಳಿದರು.

“ನೀಡಿ ಮತ್ತು ಗಳಿಸಿ ಲಿಂಗ ಸಮಾನತೆಗಾಗಿ ಪರಸ್ಪರ ಬೆಂಬಲ, ಜ್ಞಾನ ಹಂಚಿಕೆ ಹಾಗೂ ಅವಕಾಶಗಳನ್ನು ಹೆಚ್ಚಿಸುವ ಮೂಲಕ ಮಹಿಳೆಯರ ಸಬಲೀಕರಣ” ಎಂಬ ೨೦೨೬ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾಕ್ಯದೊಂದಿಗೆ ಸಿಸಿಎಫ್ ಲೊಯೋಲ ಜನಸ್ಫೂರ್ತಿ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಲೊಯೋಲ ವಿಕಾಸ ಕೇಂದ್ರದ ಆಶ್ರಯದಲ್ಲಿ ಅಂಬೇಡ್ಕರ್ ಜಯಂತಿ ಪ್ರಯುಕ್ತ ಮಹಿಳೋತ್ಸವ ಕಾರ್ಯಕ್ರಮದ ಜಾಥಾ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರಿಗೆ ಸಮಾನ ಹಕ್ಕು ನೀಡಿದ ಹಿಂದು ಕೋಡ್ ಬಿಲ್, ಹಾಗೂ ಒಬ್ಬೊಬ್ಬರಿಗೂ ಸಮಾನ ಮತದಾನದ ಹಕ್ಕು ದೊರೆಯುವಲ್ಲಿ ಅಂಬೇಡ್ಕರ್ ಅವರ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು.

ರಾಜ್ಯಮಟ್ಟದ ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಮಾತನಾಡಿ, ಮಹಿಳಾ ದಿನಾಚರಣೆ ಅಲಂಕಾರಕ್ಕಾಗಿ ಅಲ್ಲ, ಅದು ಹಕ್ಕು, ಸಮಾನತೆ ಮತ್ತು ಸಂವಿಧಾನ ಮೌಲ್ಯಗಳ ಅರಿವಿಗಾಗಿ ಎಂಬುದನ್ನು ಮನಮುಟ್ಟುವಂತೆ ವಿವರಿಸಿದರು. ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗಮಯ ಜೀವನ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣ ಹೋರಾಟವನ್ನು ಉದಾಹರಿಸಿ, ಮಹಿಳಾ ಸಂಘಟನೆಗಳ ಮಹತ್ವವನ್ನು ವಿವರಿಸಿದರು. ಸಂವಿಧಾನಿಕ ಹಕ್ಕುಗಳನ್ನು ಅರಿತುಕೊಳ್ಳುವಂತೆ ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಮಾತನಾಡಿ, ಸಂವಿಧಾನದಿಂದ ದೇಶದ ಸ್ಥಿರತೆ ಸಾಧ್ಯವಾಗಿದೆ. ಮಹಿಳೆಯರು ಸಮಾಜದ ಪ್ರಗತಿಗೆ ಮೂಲಶಕ್ತಿ ಎಂಬ ಹೇಳಿದರು.

ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಫಾ. ಅನಿಲ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಚಿಂತಕಿ ವೈಷ್ಣವಿ, ಅಂಬೇಡ್ಕರ್ ಅವರ ಹೋರಾಟ ಮತ್ತು ಮಹಿಳಾ ಹಕ್ಕುಗಳ ಕುರಿತು ಮಾತನಾಡಿದರು.

ಫಾ. ಮೆಲ್ವಿನ್ ಲೊಬೊ, ಸರೋಜಾ ಡಿ. ಚೌಹಾಣ, ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ರೂಪಾ ಅಂಗಡಿ, ಜೂಲಿಯಾನಾ ಪೆದ್ರು ಫರ್ನಾಂಡಿಸ್ ಸಿದ್ದಿ, ಡಾ. ಸಿಸ್ಟರ್ ಗ್ಲ್ಯಾಡಿಸ್ ಮೆನೆಜಸ್, ಫಾ. ಜೈಸನ್ ಪಾಯ್ಸ, ಫಾ. ಅಲ್ವಿನ್ ಡಿಸೋಜಾ, ಕಾರ್ಮಿಕ ಇಲಾಖೆ ನಿರೀಕ್ಷಕಿ ಅನುರಾಧಾ ಕಾಕತ್ಕರ್ ಉಪಸ್ಥಿತರಿದ್ದರು. ಸುನೀತಾ ಗೌಳಿ ಸ್ವಾಗತಿಸಿದರು. ಗಿರಿಜಾ ಭುಜಂಗಿ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ಲಮಾಣಿ ವಂದಿಸಿದರು.

ಸಂವಿಧಾನ ಜಾಗೃತಿ ಜಾಥಾ: ಜಾಥಾದಲ್ಲಿ ಮಹಿಳೆಯರು ಸ್ವಾತಂತ್ರ‍್ಯ ಹೋರಾಟಗಾರ್ತಿಯರು, ವೈದ್ಯೆ, ಶಿಕ್ಷಕಿ, ವಕೀಲರು, ರಾಜಕೀಯ ಕ್ಷೇತ್ರದ ಮಹಿಳೆಯರಂತೆ ವೇಷಭೂಷಣ ಧರಿಸಿ ಸ್ತಬ್ಧಚಿತ್ರ ಪ್ರದರ್ಶನ ನೀಡಿದರು. ಡಾ. ಅಂಬೇಡ್ಕರ್ ಹಾಗೂ ಸಂವಿಧಾನ ಭಾವಚಿತ್ರಗಳೊಂದಿಗೆ ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆ ನಡೆಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಾಯಿತು. ಶಿವಾಜಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಸಂವಿಧಾನ, ಮಹಿಳಾ ಹಕ್ಕುಗಳು ಹಾಗೂ ಸಮಾನತೆ ಕುರಿತು ಘೋಷಣೆ ಕೂಗಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದರ್ಶನದಲ್ಲಿ ಮೇ ೨ರಂದು ಬೃಹತ್ ಉದ್ಯೋಗ ಮೇಳ
ಪ್ರಾಮಾಣಿಕ ಶ್ರಮದಿಂದ ಸಿಕ್ಕ ಗೆಲುವು ನಿಜವಾದುದು: ರಾಜೇಶ್ ಧನವಾಡಕರ್