ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವಕೋಶವಿದ್ದಂತೆ: ಸುಜಾತಾ ದೊಡ್ಡಮನಿ

KannadaprabhaNewsNetwork |  
Published : Apr 26, 2026, 03:15 AM IST
ಅಂಬೇಡ್ಕರ್ ನಗರದಲ್ಲಿ ಏರ್ಪಡಿಸಿದ್ದ ಡಾ. ಬಾಬ ಸಾಹೇಬ್ ಅಂಬೇಡ್ಕರ್ ಅವರ ೧೩೫ನೇ ಜಯಂತಿ ಹಾಗೂ ಹಸಿರು ಕ್ರಾಂತಿ ಹರಿಹಾರ ಬಾಬು ಜಗಜೀವನ್‌ರಾವ್ ಅವರ ೧೧೯ನೇ ಜಯಂತಿ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು. | Kannada Prabha

ಸಾರಾಂಶ

ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಂದು ವಿಶ್ವಕೋಶ. ಅವರ ವಿಚಾರವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚು ಹೆಚ್ಚು ಓದಿಕೊಳ್ಳಬೇಕು ಎಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.

ಶಿರಹಟ್ಟಿ: ಬಾಬಾ ಸಾಹೇಬ ಅಂಬೇಡ್ಕರ್ ಅವರು ಒಂದು ವಿಶ್ವಕೋಶ. ಅವರ ವಿಚಾರವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅವರ ಬಗ್ಗೆ ಹೆಚ್ಚು ಹೆಚ್ಚು ಓದಿಕೊಳ್ಳಬೇಕು ಎಂದು ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಹೇಳಿದರು.

ಶನಿವಾರ ಪಟ್ಟಣದ ಅಂಬೇಡ್ಕರ್ ನಗರದ ಮುಂಭಾಗದಲ್ಲಿ ಏರ್ಪಡಿಸಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೫ನೇ ಜಯಂತಿ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನ್‌ರಾಮ್ ಅವರ ೧೧೯ನೇ ಜಯಂತಿಯಲ್ಲಿ ಮಾತನಾಡಿದರು.

ಅಂಬೇಡ್ಕರ್ ಕೇವಲ ಒಂದು ವ್ಯಕ್ತಿಯಾಗಿರಲಿಲ್ಲ. ಅವರು ಈ ದೇಶದ ಒಂದು ಶಕ್ತಿಯೇ ಆಗಿದ್ದರು ಎಂದು ಹೇಳಿದರು.

ಅವರು ಈ ದೇಶದ ಧ್ವನಿಯಾಗಿ ಶ್ರಮ ಪಟ್ಟವರು. ಎಲ್ಲ ಜಾತಿ ಜನಾಂಗಕ್ಕೆ ಸಮಾನವಾದ ಅವಕಾಶಗಳು ಸಿಗಬೇಕೆಂದು ಬಯಸಿ ದುಡಿದವರು. ಈ ಕಾರಣದಿಂದಲೇ ಎಲ್ಲ ಸಮುದಾಯಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನೆಯುವಂತಹ ಕೆಲಸ ಮಾಡಬೇಕು. ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕು. ಕಾನೂನು ಮತ್ತು ಮೀಸಲಾತಿಯನ್ನು ಕೇವಲ ಒಂದೇ ಜಾತಿ, ಧರ್ಮಕ್ಕೆ ಮಾಡಿಲ್ಲ. ಇಡೀ ದೇಶದ ಅಭಿವೃದ್ಧಿಗಾಗಿ ಮಾಡಿದ್ದಾರೆ. ಆದರೆ, ಅಂತಹ ಮಹಾನ್ ಜ್ಞಾನಿಯನ್ನು ಕೇವಲ ಒಂದೇ ಸಮುದಾಯಕ್ಕೆ ಸೀಮಿತ ಮಾಡಿ ನೋಡುವುದು ಈ ದೇಶದ ವಿಪರ್ಯಾಸವೇ ಸರಿ ಎಂದರು.

ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಿಗೆ ಸಿಗುವ ಸೌಲಭ್ಯದಲ್ಲಿ ಲೋಪ-ದೋಷಗಳಿವೆ. ಸರಕಾರಿ ಯೋಜನೆಗಳು ಪೂರ್ಣವಾಗಿ ದಲಿತರಿಗೆ ಸಿಗುತ್ತಿಲ್ಲ. ಇಡೀ ಮಾನವ ಜನಾಂಗಕ್ಕೆ ಶೋಷಿತರ ಸಲುವಾಗಿ ಅಂಬೇಡಕರ್‌ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಕನಸು ನನಸಾಗಬೇಕು ಎಂದರೆ ದಲಿತರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು.

ಅಂಬೇಡ್ಕರ್‌ರು ದಲಿತರಲ್ಲಿ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ದಿಯ ಆಸೆ ಹೊಂದಿದ್ದರು. ವಿದ್ಯಾವಂತರಿಗೆ ಮೀಸಲಾತಿಯಿಂದ ಅನುಕೂಲವಾಯಿತು. ಅಂಬೇಡ್ಕರ್‌ ಅವರು ಸಂವಿಧಾನ ರಚಿಸುವ ಮೂಲಕ ಶೋಷಿತರ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರ ಜನಪರ ಕಾಳಜಿ ಚಿರಸ್ಮರಣೀಯ. ದಲಿತರು ಅವರ ವಿಚಾರ ಧಾರೆಗಳನ್ನು ಅರಿತುಕೊಂಡು ಕನಸನ್ನು ನನಸು ಮಾಡಬೇಕು. ಸರ್ಕಾರ ನೀಡುವ ಸಹಾಯ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ, ಸಾಮಾಜಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಗೌರವಾಧ್ಯಕ್ಷ ಎಸ್.ಎನ್. ಬಳ್ಳಾರಿ ಮಾತನಾಡಿ, ಸಮಾಜದ ಶೋಷಿತ ವರ್ಗದವರ ಶ್ರೇಯೋಭಿವೃದ್ದಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಡುವ ಮೂಲಕ ಅಂಬೇಡ್ಕರ್ ಅವರು ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ತತ್ವಾದರ್ಶಗಳನ್ನು ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಾಮಾಜಿಕ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ತಮ್ಮ ಮಕ್ಕಳನ್ನು ಭಾರತದ ಸತ್ಪ್ರಜೆಗಳನ್ನಾಗಿ ರೂಪಿಸುವ ಮೂಲಕ ಶೋಷಣೆ ರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಮುಖಂಡರಾದ ಗುರುನಾಥ ದಾನಪ್ಪನವರ, ನಾಗರಾಜ ಲಕ್ಕುಂಡಿ, ಫಕ್ಕೀರೇಶ ಮ್ಯಾಟಣ್ಣವರ, ಪಿಎಸ್‌ಐ ಚನ್ನಯ್ಯ ದೇವೂರ ಮಾತನಾಡಿದರು. ರವಿ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಮಾಜಿ ಅಧ್ಯಕ್ಷೆ ದೇವಕ್ಕ ಗುಡಿಮನಿ, ನಾಗರಾಜ ಪೋತರಾಜ, ಫಕ್ಕೀರೇಶ ನಡುವಿನಕೇರಿ, ಚಂದ್ರಶೇಖರ ಹರಿಜನ, ಎ. ಶ್ರೀನಿವಾಸ್, ಶಿವು ಮಠದ, ಸಿಪಿಐ ಬಿ.ವಿ. ನೇಮಗೌಡ, ಪಿಎಸ್‌ಐ ಈರಪ್ಪ ರಿತ್ತಿ, ಮುತ್ತುರಾಜ ಭಾವಿಮನಿ, ಪರಮೇಶ ಪರಬ, ಹೊನ್ನಪ್ಪ ಶಿರಹಟ್ಟಿ, ರಂಗಪ್ಪ ಗುಡಿಮನಿ, ಶಶಿ ಪೂಜಾರ, ಅಜ್ಜುಗೌಡ್ರ ಪಾಟೀಲ, ದುರ್ಗಪ್ಪ ಗುಡಿಮನಿ, ಬಸವರಾಜ ತುಳಿ, ರಾಜು ಶಶಿಯಣ್ಣವರ, ಯಲ್ಲಪ್ಪ ಕಂಟೆಮ್ಮನವರ, ಜೆಟ್ಟೆಪ್ಪ ಮರ್ಚಣ್ಣವರ, ಹುಚ್ಚಪ್ಪ ಪೂಜಾರ, ಯಲ್ಲಪ್ಪ ಕಂಟೆಮ್ಮನವರ, ಹನಮಂತ ಬಡ್ಡೆಪ್ಪನವರ, ಉಡಚಪ್ಪ ನೀಲಣ್ಣವರ, ಚಂದ್ರು ಗೋಡೆಣ್ಣವರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಶ್ವದರ್ಶನದಲ್ಲಿ ಮೇ ೨ರಂದು ಬೃಹತ್ ಉದ್ಯೋಗ ಮೇಳ
ಪ್ರಾಮಾಣಿಕ ಶ್ರಮದಿಂದ ಸಿಕ್ಕ ಗೆಲುವು ನಿಜವಾದುದು: ರಾಜೇಶ್ ಧನವಾಡಕರ್