ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಅಂಬೇಡ್ಕರ್ ಹತ್ಯೆಗೆ 13 ಬಾರಿ ಯತ್ನ
ಅಂಬೇಡ್ಕರ್ ಸಮಾಜಕ್ಕಾಗಿ ಮಾಡಿದ ಹೋರಾಟಗಳಿಗೆ ಹೆದರಿದ ಕಿಡಿಕೇಡಿಗಳು ೧೩ ಬಾರಿ ಅವರನ್ನು ಕೊಲ್ಲಲು ಮುಂದಾದರು. ಅವರನ್ನು ಮಾನಸಿಕವಾಗಿ ಸೋಲಿಸಿದರೂ ಕುಗ್ಗದೆ ಧೈರ್ಯವಾಗಿ ಸವಾಲುಗಳನ್ನು ಎದುರಿಸಿದರು. ಅಂಬೇಡ್ಕರ್ ಅಗಲಿ ೬೮ ವರ್ಷವಾದರೂ ಜನರ ಮನಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆಂದರೆ ಅವರು ಸಮಾಜಕ್ಕೆ ನೀಡಿದ ಕೊಡಗೆ ಹಾಗೂ ಅವರು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ರೀತಿ ಸಾಕ್ಷಿಯಾಗಿದೆ, ಅವರು ಸಮಾಜದಲ್ಲಿ ಎದುರಿಸಿದ ಸವಾಲುಗಳನ್ನು ನೆನೆದು ಮುಂದಿನ ನಮ್ಮ ಸಮಾಜದ ಜನರು ಆ ಕಷ್ಟಗಳನ್ನು ಎದುರಿಸಬಾರದೆಂದು ಇಡೀ ವಿಶ್ವವೇ ಮೆಚ್ಚುವಂತಹ ಶ್ರೇಷ್ಠ ಸಂವಿಧಾನವನ್ನು ರಚಿಸಿದರು ಎಂದರು,ಶೋಷಿತರ ಉದ್ಧಾರಕ್ಕೆ ಹೋರಾಟ
ಈ ಸಂವಿಧಾನ ಬರೀ ದಲಿತರಿಗೆ ಮಾತ್ರ ರಚನೆ ಮಾಡದೆ ಸಮಾಜದಲ್ಲಿನ ಶೋಷಿತ ಸಮುದಾಯಗಳ ಆರ್ಥಿಕ ಅಭಿವೃದ್ದಿಗೆ ಹಾಗೂ ಸಮಾಜದ ಮುಖ್ಯವಾಹಿನಿಗೆ ಬರಲು ಶ್ರಮಿಸಿದ್ದಾರೆ, ಅಂಬೇಡ್ಕರ್ ರವರ ಹೋರಾಟದ ಮಾದರಿ ಹಾಗೂ ಅವರ ತತ್ವಗಳು ನಮಗೆ ಇಂದಿಗೂ ದಾರಿ ದೀಪವಾಗಿದೆ ಎಂದರು.ಗ್ರೇಡ್ ೨ ತಹಸಿಲ್ದಾರ್ ಗಾಯತ್ರಿ, ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್,ಸಿಡಿಪಿಒ ಮುನಿರಾಜು ಬಿಇಒ ಶಶಿಕಲಾ,ಲೋಕೋಪಯೋಗಿ ಎಇಇ ರವಿಕುಮಾರ್,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿಕುಮಾರ್,ಹಿಂದುಳಿದ ವರ್ಗದ ಅಧ್ಯಕ್ಷ ಕುಂಬಾರಪಾಳ್ಯ ಮಂಜುನಾಥ್,ಅಣ್ಣಾದೊರೆ ಮತ್ತಿತರರು ಇದ್ದರು.