ಕನ್ನಡಪ್ರಭ ವಾರ್ತೆ ವಿಜಯಪುರ
ಹಸಿವಿಗಿಂತ ಮಿಗಿಲಾಗಿದ್ದು ಜ್ಞಾನ. ಬಾಬಾ ಸಾಹೇಬರು ಜ್ಞಾನದ ಹಸಿವಿನ ಬೆನ್ನು ಹತ್ತಿದವರು. ಅವರು ಹಸಿವನ್ನು ನುಂಗಿಕೊಂಡು ಜ್ಞಾನಾರ್ಜನೆಗೆ ನಿಂತ ಮಹಾನ್ ವ್ಯಕ್ತಿ ಎಂದು ಶಂಕರ ಮಾವಳ್ಳಿ ಹೇಳಿದರು.ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಬಾಬಾಸಾಹೇಬ ಅಂಬೇಡ್ಕರ್ ಅವರು ಹಸಿವನ್ನು ಕುರಿತು ಚಿಂತನೆ ಮಾಡಿದರೆ ಇವತ್ತು ನಾವೆಲ್ಲರೂ ಇರುತ್ತಿರಲಿಲ್ಲ. ಇಂತಹ ಚಿಂತನ ಶೀಲ ವ್ಯಕ್ತಿತ್ವದ ನಾಯಕರಿಂದ ನಮ್ಮ ದೇಶ ಮುನ್ನೆಡೆಯುತ್ತಿದೆ. ಕಳೆದ ಹೊಸ ಸಂಸತ್ತಿನ ಭವನ ಉದ್ಘಾಟನೆ ಸಮಯದಲ್ಲಿ ಹಂಚಿದ ಸಂವಿಧಾನ ಪ್ರತಿಗಳಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಎರಡು ಪದ ತೆಗೆದುಹಾಕಿದ್ದಾರೆ. ಇದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಅಂಬೇಡ್ಕರ್ ಅವರು ಸಮಾಜವಾದ, ಧರ್ಮ ನಿರಪೇಕ್ಷತೆ ನಂಬಿದವರು ಎಂದು ಹೇಳಿದರು.ಮಹಿಳಾ ವಿರೋಧ, ಸಮುದಾಯದ ವಿರೋಧಿಗಳಾಗಿ ಇವತ್ತು ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವುದು ನೀವೆಲ್ಲರೂ ಗಮನಿಸಬೇಕು. ಸಂವಿಧಾನ ಜಾರಿಯಾದ ಮೇಲೆ ಹಿಂದೆ ಏನು ನಡೆದಿದೆ ಎಂಬುದು ನಾವೆಲ್ಲ ಅರಿತುಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಸಿದ್ಧನಗೌಡ ಪಾಟೀಲ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುವುದಕ್ಕೆ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆ ಹೇಳಿದ್ದಾರೆ. ಈ ವಾಕ್ಯ ದಂಡಯಾತ್ರೆ ಎಂಬುದು ಬಿಂಬಿಸುತ್ತದೆ. ಇಲ್ಲಿ ಬಾಬಾ ಸಾಹೇಬರ ಧ್ವಜವನ್ನು ಹಿಡಿದುಕೊಂಡು ದಿಂಡಿಯಾತ್ರೆ ನಡೆಸಿದ್ದಾರೆ. ಇದಕ್ಕಾಗಿ ನಾವೆಲ್ಲರೂ ಸಂವಿಧಾನ ಬದ್ಧವಾಗಿ ನಡೆದುಕೊಂಡು ಬೇರೆ ಸಮಾಜಕ್ಕೆ ನಮ್ಮ ಸಮಾಜದವರು ಮಾದರಿಯಾಬೇಕು ಎಂದರು.ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆಯ ಮುಖಾಂತರ ರಂಗಮಂದಿರಕ್ಕೆ ತೆರಳಲಾಯಿತು. ಚಿಗರಹಳ್ಳಿಯ ಮರುಳಶಂಕರ ದೇವರ ಗುರುಪೀಠದ ಸಿದ್ದಬಸವ ಕಬೀರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಜು ವೈ. ಕಂಬಾಗಿ, ನಾಗಣ್ಣ ಬಡಿಗೇರ, ರಾಮಣ್ಣ ಕಲದೇವನಹಳ್ಳಿ, ಯುವರಾಜ ಬಂಡಿ, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪೂರ, ಯವಾದಿಗಳಾದ ನಾಗರಾಜ ಲಂಬು, ರಾಹುಲ ಕುಬಕಡ್ಡಿ, ಆನಂದ ಔದಿ, ಅಭಿಷೇಕ ಚಕ್ರವರ್ತಿ, ಶಂಕರ ಚಲವಾದಿ, ಚೇತನ ತೊರವಿ, ಮಹಾಂತೇಶ ರಾಠೋಡ, ಶ್ರೀಧರ ವಾಗೊರೆ, ಯಲ್ಲಪ್ಪ ಕಾಂಬಳೆ, ಚಂದಪ್ಪ ಹರಿಜನ, ಚಂದ್ರು ದ್ಯಾಬೇರಿ, ಶಿವು ಮೇಲಿನಮನಿ, ಸಂಗಮೇಶ ಇರಸೂರ, ವಿಠಲ ಕಡೆಮನಿ, ಚಂದ್ರಶೇಖರ ಮಲಕಣ್ಣವರ, ಭೀಮು ಉತ್ನಾಳ, ವಿಶ್ವನಾಥ ಬನಸೂಡೆ, ದೇವರಾಜ ಹಂಗರಗಿ, ಮಂಜು ಚಲವಾದಿ, ಮಹಿಳಾ ಒಕ್ಕೂಟದ ಸಂಚಾಲಕಿ ಸವಿತಾ ವಗ್ಗರ, ಸುವರ್ಣ ಮಾನಕರ, ಸುನಂದ ದೊಡಮನಿ, ಸಂಗೀತಾ ಮರಾಠಿ, ನಕುಶಾ ಕಾಂಬಳೆ ಅನೇಕರು ಇದ್ದರು.