ನಾಡಿದ್ದು ಡಾ.ಅಂಬೇಡ್ಕರ್‌ ಶತಮಾನೋತ್ಸವ ಸಮಾರಂಭ

KannadaprabhaNewsNetwork | Published : Apr 13, 2025 2:07 AM

ಸಾರಾಂಶ

ಡಾ.ಅಂಬೇಡ್ಕರ್ ಅವರು ನಿಪ್ಪಾಣಿಯಲ್ಲಿ ಪಾದಸ್ಪರ್ಶಕ್ಕೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏ.15 ರಂದು ಶತಮಾನೋತ್ಸವ ಸಮಾರಂಭ ಆಯೋಜಿಸಲಾಗಿದೆ. ಇದಕ್ಕಾಗಿ ಏ.11 ರಂದು ಬೆಂಗಳೂರಿನಿಂದ ಹೊರಟಿರುವ ಭೀಮರಥ ಏ.15 ರಂದು ನಿಪ್ಪಾಣಿಗೆ ತಲುಪಲಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವರಾದ ಚಿರಾಗ ಪಾಸ್ವಾನ್‌, ರಾಜ್ಯದ ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ಗಣ್ಯರು ಉಪಸ್ಥಿತ ಇರಲಿದ್ದಾರೆ ಎಂದು ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಕನ್ನಪಡ್ರಭ ವಾರ್ತೆ ನಿಪ್ಪಾಣಿ

ಶತಮಾನೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಡಾ.ಅಂಬೇಡ್ಕರ್‌

ಅವರ ಭವ್ಯ ಸ್ಮಾರಕವನ್ನು ಗವಾನಿಯಲ್ಲಿ ನಿರ್ಮಿಸಲು 10ಎಕರೆ ಜಾಗವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ.

ಆ ಸ್ಥಳದಲ್ಲಿ ಬಾಬಾಸಾಹೇಬ್ ಅವರ ಅಶ್ವಾರೂಢ ಪ್ರತಿಮೆಯ ಜೊತೆಗೆ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ, ವಿಪಶ್ಯನಾ ಕೇಂದ್ರ, ಕ್ರಾಂತಿಸ್ತಂಭ, ಬೌದ್ಧ ಸ್ತೂಪ, ಹಾಗೂ ಅತಿ ಎತ್ತರದ ಧ್ವಜ ಹಾರಿಸಲಾಗುವುದು, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅತೀ ಕಡಿಮೆ ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲಾಗುವುದು. ಈ ಸ್ಥಳವನ್ನು ಒಂದು ಧಾರ್ಮಿಕ ಕೇಂದ್ರವಾಗಿ ಮಾಡಲಾಗುವುದು ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.ಈ ವೇಳೆ ನಗರಾಧ್ಯಕ್ಷೆ ಸೋನಲ ಕೊಠಡಿಯಾ, ಮಾಜಿ ನಗರಾಧ್ಯಕ್ಷ ವಿಲಾಸ್ ಗಾಡಿವಡ್ಡರ, ಸುಭಾಷ ಮೆಹ್ತಾ, ಗೋಪಾಲ್ ನಾಯ್ಕ್, ಪ್ರಮೋದ ಕಾಂಬಳೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಸಿದ್ದು ನರಾಟೆ ಸ್ವಾಗತಿಸಿದರು. ಈ ವೇಳೆ ಪ್ರವೀಣ ಕಾಂಬಳೆ ಮತ್ತು ಮಹಾದೇವಿ ಗಟೆಕರಿ ಅವರಿಗೆ ಖಾಯಂ ಉದ್ಯೋಗದ ಹಕ್ಕು ಪತ್ರ ನೀಡಲಾಯಿತು. ಅಂತಿಮವಾಗಿ 100 ಸೆಕೆಂಡ್‌ಗಳ ಮೌನಾಚರಣೆ ಬಳಿಕ ಎಲ್ಲರೂ ಡಾ.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಾಲಶುಗರ ಅಧ್ಯಕ್ಷ ಎಂ.ಪಿ.ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ನಗರ ಸಭೆ ಉಪಾಧ್ಯಕ್ಷ ಸಂತೋಷ ಸಾಂಗಾವಕರ, ಸಭಾಪತಿ ಡಾ.ಜಸರಾಜ ಗಿರೆ, ಜಯವಂತ ಭಾಟ್ಲೆ, ಸುನೀಲ ಪಾಟೀಲ, ಯೋಗಿತಾ ಘೋರ್ಪಡೆ, ಅವಿನಾಶ ಮಾನೆ, ಗಣಪತಿ ಗಾಡಿವಾಡರ, ಸುರೇಶ ರಾಯಮಾನೆ, ನರೇಂದ್ರ ಶಾಹ, ಅಭಯ ಮಾನ್ವಿ, ಪ್ರಣವ ಮಾನ್ವಿ, ಶ್ರೀಕಾಂತ ಪರಮನೆ, ಪ್ರತಾಪ ಪಟ್ಟಣಶೆಟ್ಟಿ, ಸುರೇಶ ಶೆಟ್ಟಿ, ಡಾ.ಎಸ್.ಆರ್.ಪಾಟೀಲ, ವಿಜಯ ಕಾಂಬಳೆ, ಸುನೀಲ ಶೆವಾಳೆ, ಅರುಣ ಜಾವೇದ, ಪ್ರವೀಣ ತಾರಳೆ ಮೊದಲಾದವರು ಉಪಸ್ಥಿತರಿದ್ದರು.ನಿಪಾಣಿ ಕ್ಷೇತ್ರದಿಂದ 10 ಸಾವಿರ ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 15 ಸಾವಿರ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲಿದ್ದಾರೆ.

-ಶಶಿಕಲಾ ಜೊಲ್ಲೆ, ಮಾಜಿ ಸಚಿವೆ, ಶಾಸಕಿ.

Share this article