ಕಾಲೋನಿಗಳಿಗೆ ಡಾ.ಅಂಬೇಡ್ಕರ್‌ ಸೀಮಿತರಲ್ಲ

KannadaprabhaNewsNetwork |  
Published : May 11, 2025, 01:16 AM IST
9ಕೆಬಿಪಿಟಿ.1.ಬಂಗಾರಪೇಟೆ ಕೋಡಗುರ್ಕಿ ಗ್ರಾಮದಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿಯನ್ನು ಶಾಸಕ ನಾರಾಯಣಸ್ವಾಮಿ ಉದ್ಘಾಟಿಸಿದರು. | Kannada Prabha

ಸಾರಾಂಶ

ಡಾ.ಅಂಬೇಡ್ಕರ್ ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಅಂಬೇಡ್ಕರ್ ಎಂದರೆ ಕೇವಲ ಎಸ್.ಸಿ ಎಸ್.ಟಿ ಸಮುದಾಯಕ್ಕೆ ಮಾತ್ರ ಸೀಮಿತ ಎಂದು ಜನರು ತಪ್ಪು ಗ್ರಹಿಕೆಯಲ್ಲಿದ್ದಾರೆ. ಅವರು ಬರೆದಂತಹ ಸಂವಿಧಾನ ಕೇವಲ ಎಸ್.ಸಿ ಎಸ್.ಟಿ ಸಮುದಾಯಕ್ಕೋಸ್ಕರ ಬರೆದಿಲ್ಲ. ಒಂದು ವೇಳೆ ಅಂಬೇಡ್ಕರ್ ಸಂವಿಧಾನವನ್ನು ಬರೆಯದಿದ್ದರೆ ದೇಶದಲ್ಲಿ ಸಮಾನತೆಯೇ ಇರುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಡಾ. ಅಂಬೇಡ್ಕರ್ ಕೇವಲ ಕಾಲೋನಿಗಳಿಗೆ ಸೀಮಿತಗೊಳಿಸಲಾಗುತ್ತಿದ್ದು, ಸರ್ವ ಧರ್ಮ ಹಾಗೂ ಜನಾಂಗಗಳ ನಾಯಕ ಎಂಬುದನ್ನು ಸಮಾಜದಲ್ಲಿ ಅರಿವನ್ನು ಮೂಡಿಸಬೇಕಿದೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಕೋಡಗುರ್ಕಿ ಕಾಲೋನಿಯಲ್ಲಿ ನೂತನ ಅಂಬೇಡ್ಕರ್ ಪುತ್ಥಳಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಂಬೇಡ್ಕರ್‌ರ ಆಶಯಗಳನ್ನು ಮತ್ತು ಆದರ್ಶಗಳನ್ನು ಪಾಲಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನೆ ಮಾಡಬೇಕು ಎಂದರು.

ಸಮಾನತೆ ಕಲ್ಪಿಸಿದ ಸಂವಿಧಾನ

ಡಾ.ಅಂಬೇಡ್ಕರ್ ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಅಂಬೇಡ್ಕರ್ ಎಂದರೆ ಕೇವಲ ಎಸ್.ಸಿ ಎಸ್.ಟಿ ಸಮುದಾಯಕ್ಕೆ ಮಾತ್ರ ಸೀಮಿತ ಎಂದು ಜನರು ತಪ್ಪು ಗ್ರಹಿಕೆಯಲ್ಲಿದ್ದಾರೆ. ಅವರು ಬರೆದಂತಹ ಸಂವಿಧಾನ ಕೇವಲ ಎಸ್.ಸಿ ಎಸ್.ಟಿ ಸಮುದಾಯಕ್ಕೋಸ್ಕರ ಬರೆದಿಲ್ಲ. ಒಂದು ವೇಳೆ ಅಂಬೇಡ್ಕರ್ ಸಂವಿಧಾನವನ್ನು ಬರೆಯದಿದ್ದರೆ ನಾವು ಈಗ ಇಲ್ಲಿ ಕೂರಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅವರು ಬರೆದಂತಹ ಸಂವಿಧಾನ ಇಡೀ ಪ್ರಪಂಚಕ್ಕೆ ಮಾದರಿಯಾಗಿದ್ದು, ಪ್ರಪಂಚವೇ ಕೊಂಡಾಡುತ್ತಿದೆ ಎಂದರು.

ಬಂಗಾರಪೇಟೆಯಲ್ಲಿ ಎಲ್ಲಾ ಸಮುದಾಯವನ್ನು ಒಗ್ಗೂಡಿಸಿಕೊಂಡು ಗ್ರಾಮದ ಹಬ್ಬ ಮಾದರಿಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಬಹಳ ಅ ವಿಶೇಷವಾಗಿ ಎಲ್ಲಾ ಸಮುದಾಯದವರೂ ಪಲ್ಲಕ್ಕಿಯನ್ನು ಕರೆತರುವ ಮೂಲಕ ವಿಶೇಷ ಮೆರುಗನ್ನು ತಂದರು. ಅಂಬೇಡ್ಕರ್‌ ಪ್ರತಿ ವರ್ಗಕ್ಕೂ ಒಳ್ಳೆಯದನ್ನು ಮಾಡುವ ಮೂಲಕ ಇತರೆ ಸಮುದಾಯಗಳಿಗೆ ಶೇ. ೧೦ರಷ್ಟು ಮೀಸಲಾತಿಯನ್ನು ಕಲ್ಪಿಸಿ ಸರ್ವ ಜನಾಂಗದ ನಾಯಕರಾಗಿ ಗುರ್ತಿಸಿಕೊಂಡಿದ್ದಾರೆ. ಅಂಬೇಡ್ಕರ್ ಕೇವಲ ಕಾಲೋನಿಗಳಿಗೆ ಸೀಮಿತಗೊಳಿಸಲಾಗುತ್ತಿದ್ದು, ಸರ್ವ ಧರ್ಮಗಳ ನಾಯಕ ಎಂಬುದನ್ನು ಸಮಾಜದಲ್ಲಿ ಅರಿವನ್ನು ಮೂಡಿಸಬೇಕಿದೆ ಎಂದರು.

ಯೋಧರೊಂದಿಗೆ ನಾವಿದ್ದೇವೆ

ಈಗ ಭಾರತ ಪಾಕಿಸ್ತಾನದ ವಿರುದ್ದ ಯೋಧರು ಯುದ್ದವನ್ನು ಸಾರಿ ದೇಶ ದ್ರೋಹಿಗಳನ್ನು ಸದೆಬಡಿಯಲಿಕ್ಕೆ ಹೋರಾಟ ಮಾಡುತ್ತಿರುವುದು ಸಹ ಡಾ.ಅಂಬೇಡ್ಕರ್‌ರ ಸಂವಿಧಾನವೇ ಕಾರಣ. ಇಡೀ ಭಾರತ ದೇಶ ಪ್ರಜೆಗಳಾದ ನಾವು ಯೋಧರೊಟ್ಟಿಗೆ ಇದ್ದೇವೆ ಎಂಬುದನ್ನು ಹೇಳಿದರು. ಈ ವೇಳೆ ಪುರಸಭೆ ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಗ್ರಾ.ಪಂ ಅಧ್ಯಕ್ಷೆ ಸುಲೋಚನಾ ಶ್ರೀನಿವಾಸ್, ಸಮಾಜ ಸೇವಕ ಎ.ಬಾಬು, ನಟ ಚೇತನ್, ಜಿ.ಪಂ ಮಾಜಿ ಸದಸ್ಯರಾದ ಬಿವಿ.ಮಹೇಶ್, ಬಿವಿ.ಕೃಷ್ಣ, ತಾ.ಪಂ ಮಾಜಿ ಸದಸ್ಯ ಮಹದೇವ್, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ವಿಜಯಕುಮಾರ್, ಗ್ರಾಪಂ ಮಾಜಿ ಸದಸ್ಯ ಮುನಿಯಪ್ಪ ಮುಖಂಡರಾದ ರಾಜಾರೆಡ್ಡಿ, ಎಚ್.ಕೆ ನಾರಾಯಣಸ್ವಾಮಿ ಇತರರು ಇದ್ದರು.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ