ಎಲ್ಲ ಜನಾಂಗಗಳ ಮಹಾ ನಾಯಕ ಡಾ.ಅಂಬೇಡ್ಕರ್‌

KannadaprabhaNewsNetwork | Published : Apr 19, 2025 12:33 AM

ಸಾರಾಂಶ

ಅಂಬೇಡ್ಕರ್ ರವರು ಬರೆದ ಉನ್ನತ ಸಂವಿಧಾನದಿಂದ ಇಂದು ಮಹಿಳೆಯರು ಕೂಡ ಪಾರ್ಲಿಮೆಂಟಿಗೆ ಹೋಗುವ ಅವಕಾಶ ಹಾಗೂ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರಲು ಸಾಧ್ಯವಾಗಿದೆ, ಆದ್ದರಿಂದ ಅವರನ್ನು ಒಂದು ಸಮುದಾಯಕ್ಕೆ ಮೀಸಲಾದವರಲ್ಲ. ಅವರು ಭಾರತದ ಸರ್ವ ಜನಾಂಗದ ಮಹಾನಾಯಕ

ಕನ್ನಡಪ್ರಭ ವಾರ್ತೆ ಚೇಳೂರು

ತಾಲೂಕಿನ ಚಾಕವೇಲು ಗ್ರಾಮದಲ್ಲಿ ದಲಿತ ಸಮುದಾಯದ ವತಿಯಿಂದ ಶುಕ್ರವಾರ ಸಂಜೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಗ್ರಾಮದ ದಲಿತ ಬೀದಿಯಲ್ಲಿ ಇರುವ ಅಂಬೇಡ್ಕರ್ ಪ್ರತಿಮೆಗೆ ಡಿಎಸ್‌ಎಸ್ ಜಿಲ್ಲಾ ಖಜಾಂಚಿ ಚಾಕವೇಲು ಅಂಜಿ ಹಾಗೂ ಜೀವಿಕಾ ಹರೀಶ್ ರವರು ಪುಷ್ಪರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ,ಅಂಬೇಡ್ಕರ್ ರವರು ಬರೆದ ಉನ್ನತ ಸಂವಿಧಾನದಿಂದ ಇಂದು ಮಹಿಳೆಯರು ಕೂಡ ಪಾರ್ಲಿಮೆಂಟಿಗೆ ಹೋಗುವ ಅವಕಾಶ ಹಾಗೂ ಸರ್ಕಾರದ ಉನ್ನತ ಹುದ್ದೆಗಳಲ್ಲಿ ಇರಲು ಸಾಧ್ಯವಾಗಿದೆ, ಆದ್ದರಿಂದ ಅವರನ್ನು ಒಂದು ಸಮುದಾಯಕ್ಕೆ ಮೀಸಲಾದವರಲ್ಲ. ಅವರು ಭಾರತದ ಸರ್ವ ಜನಾಂಗದ ಮಹಾನಾಯಕ ಇವರ ಹೆಸರು ಎಂದಿಗೂ ಅಜರಾಮರ ಎಂದು ತಿಳಿಸಿದರು.

ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆ

ನಂತರ ಗ್ರಾಮದ ದಲಿತ ಮುಖಂಡರಿಂದ ಅಂಬೇಡ್ಕರ್‌ ಭಾವಚಿತ್ರವನ್ನು ಟ್ರ‍್ಯಾಕ್ಟರ್ ನಲ್ಲಿ ಇರಿಸಿ ಪೂಜೆ ಸಲ್ಲಿಸಿದರು.ಬಾಬು ಜಗಜೀವನ್ ರಾಮ್ ಹಾಗೂ ಅಂಬೇಡ್ಕರ್ ಪ್ರತಿಮೆಯನ್ನು ಬಂಡಿಗಳಲ್ಲಿ ಹೊತ್ತ ಗ್ರಾಮದ ಪ್ರಮುಖ ರಸ್ತೆಗಳಲ್ಲಿ, ಮೆರವಣಿಗೆ ನಡೆಸಿದರು. ಈ ವೇಳೆ ಮಹಿಳೆಯರು ಕಲಶಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿದರು.ಮೆರವಣಿಗೆಯ ತುಂಬೆಲ್ಲ ಅಂಬೇಡ್ಕರರ ಭಾವ ಚಿತ್ರವಿರುವ ನೀಲಿ ಧ್ವಜಗಳು ರಾರಾಜಿಸುತ್ತಿದ್ದವು. ಭಾಗವಹಿಸಿದ ದಲಿತ ಸಮುದಾಯದವರೆಲ್ಲರಲ್ಲೂ ಕೊರಳಿಗೆ ಹಾಕಿರುವ ನೀಲಿ ಸ್ಕಾರ್ಫ್‌ಗಳು ಕಳೆ ಕಟ್ಟಿದ್ದವು. ಯುವಕರು ಜೈ ಭೀಮ್ ಜೈ ಭೀಮ್ ಎನ್ನುವ ಘೋಷಣೆಗಳೊಂದಿಗೆ ನೀಲಿ ಬಾವುಟಗಳನ್ನು ಹಿಡಿದು ರಥದ ಹಿಂದೆ ಸಾಗಿದರು. ಮಹಿಳೆಯರು ಹಾಗೂ ಮಕ್ಕಳು ಧ್ವನಿವರ್ದಕದ ರಾಗ ತಾಳಕ್ಕೆ ಹೆಜ್ಜೆ ಹಾಕಿದ್ದು ನೋಡುಗರಿಗೆ ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಕೆ.ಡಿ.ಎಸ್.ಎಸ್ ಜಿಲ್ಲಾ ಖಜಾಂಚಿ ಚಾಕವೇಲು ಅಂಜಿ,ಹರೀಶ್,ಚಿಕ್ಕ ಅಂಜಿನಪ್ಪ,ಪೆದ್ದ ನರಸಿಂಹಪ್ಪ,ಪೆದ್ದ ವೆಂಕಟರವಣಪ್ಪ,ಸಿವಿ ವೆಂಕಟರವಣ,ಎನ್ ವೆಂಕಟರವಣ,ಪೆದ್ದ ರವಣಪ್ಪ, ಬಿ ಎಸ್ ಶ್ರೀನಿವಾಸ್, ಯು ನರಸಿಂಹ, ಬಿ ಅಂಜಿನಪ್ಪ,ಕೆ ಲಕ್ಷ್ಮೀನಾರಾಯಣ,ಸಿ ಎಚ್ ಗಂಗುಲಪ್ಪ,,ಸಿ ಎನ್ ಈಶ್ವರಪ್ಪ,ವಿ ವೆಂಕಟೇಶ್ ,ಕದಿರಪ್ಪ ಗಾರಿ ಅಂಜಿನಪ್ಪ,ಎಲ್ ಮಂಜುನಾಥ, ಸದುಮ್ ಗಂಗುಲಪ್ಪ,ಜಿ ಎಂ ಗಂಗಾಧರ,ಎಂ. ಗಂಗುಲಪ್ಪ, ಹಾಗೂ ದಲಿತ ಮಹಿಳಾ ತಂಡದವರು ಹಾಗೂ ಚಾಕವೇಲು ಗ್ರಾಮದ ಅಂಬೇಡ್ಕರ್ ಯುವಕರ ಬಳಗದವರು ಇದ್ದರು.

Share this article