ಐಐಎಸ್ಸಿಸಿಯಲ್ಲಿ ಡಾ.ಅಮಿತ ಮಿರ್ಜಿ ಸಂಶೋಧನಾ ಲೇಖನ ಮಂಡನೆ

KannadaprabhaNewsNetwork |  
Published : Dec 27, 2023, 01:32 AM IST
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಮದಾಪುರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಅಮಿತ ಮಿರ್ಜಿ ಅವರು ತಮ್ಮ ಸಂಶೋಧನೆ ಪ್ರಬಂಧವನ್ನು ಮಂಡಿಸಿದರು. | Kannada Prabha

ಸಾರಾಂಶ

ಬಬಲೇಶ್ವರ ತಾಲೂಕಿನ ಮಮದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅಮಿತ ಮಿರ್ಜಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ ಸಂಶೋಧನೆ ಲೇಖನ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿಜಯಪುರ: ಬಬಲೇಶ್ವರ ತಾಲೂಕಿನ ಮಮದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಅಮಿತ ಮಿರ್ಜಿ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ಯಲ್ಲಿ ಸಂಶೋಧನೆ ಲೇಖನ ಮಂಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ದೇಶದ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಥ ಅವಕಾಶ ಪಡೆದ ರಾಜ್ಯದ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಮೊದಲ ಪ್ರಾಚಾರ್ಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಡಿ.18 ರಿಂದ20ರ ವರೆಗೆ ಆಪರೇಶನಲ್ ರಿಸರ್ಚ್ ಸೊಸಾಯಿಟಿ ಆಫ್ ಇಂಡಿಯಾ- ಕರ್ನಾಟಕ ವತಿಯಿಂದ 56ನೇ ಎನಿವಲ್ ಕನ್ವೆನ್ಶನ್ ಆಫ್ ಆಪರೇಶನಲ್ ರಿಸರ್ಚ್ ಸೊಸಾಯಿಟಿ ಆಫ್ ಇಂಡಿಯಾ ಮತ್ತು 10ನೇ ಇಂಟರನ್ಯಾಶನಲ್ ಕಾನ್ಫರೆನ್ಸ್ ಆನ್ ಬ್ಯುಸಿನೆಸ್ ಎನಲೈಟಿಕ್ಸ್ ಆ್ಯಂಡ್ ಇಂಟಲಿಜನ್ಸ್ ಕಾರ್ಯಕ್ರಮದಲ್ಲಿ ಡಿ.18ರಂದು ಸಂಶೋಧನಾ ಲೇಖನ ಮಂಡಿಸಿದ್ದಾರೆ.

ಇಂಫ್ಯಾಕ್ಟ್ ಆಫ್ ಟೆಕ್ನಾಲಾಜಿಕಲ್ ಅಡ್ವಾನ್ಸಮೆಂಟ್ ಆನ್ ಪ್ರೊಡಕ್ಟವಿಟಿ ಆಫ್ ಪಬ್ಲಿಕ್ ಆ್ಯಂಡ್ ಪ್ರೈವೆಟ್ ಸೆಕ್ಟರ್ ಬ್ಯಾಂಕ್ಸ್: ಎ ಸ್ಟಾಟಿಸ್ಟಿಕಲ್ ಸ್ಟಡಿ ವಿಷಯದ ಮೇಲೆ 2005 ರಿಂದ 2021ರ ವರೆಗೆ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಸಾರ್ವಜನಿಕ ವಲಯ) ಮತ್ತು ಐಸಿಐಸಿಐ (ಖಾಸಗಿ ವಲಯ)ಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಕುರಿತು ಬ್ಯಾಂಕುಗಳಲ್ಲಿ ಅಳವಡಿಸಿಕೊಳ್ಳಲಾದ ತಂತ್ರಜ್ಞಾನ, ಸಾರ್ವಜನಿಕರಿಗೆ ಅದರಿಂದಾದ ಲಾಭ ಸೇರಿದಂತೆ ನಾನಾ ಅಂಶಗಳ ಕುರಿತು ಡಾ. ಅಮಿತ ಮಿರ್ಜಿ ಮತ್ತು ಡಾ. ಸೀಮಾ ತ್ರಿಪಾಠಿ ಅವರು ನಡೆಸಿದ ಸಂಶೋಧನಾ ಲೇಖನವನ್ನು ಡಾ. ಅಮಿತ ಮಿರ್ಜಿ ಮಂಡಿಸಿದರು.

ಇವರು ಮಂಡಿಸಿರುವ ಈ ಲೇಖನ ಅಮೆರಿಕಾದ ಪ್ರತಿಷ್ಠಿತ ಆಪಸರ್ಜ್ ಜರ್ನಲ್ ನಲ್ಲಿ ಪ್ರಕಟವಾಗಲಿದೆ. ಈ ಮೂಲಕ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಲೇಖನ ಮಂಡಿಸಿದ ವಿಜಯಪುರದ ಮೊದಲ ಸಂಶೋದಕ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ. ಮಮದಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ. ಪಾಟೀಲ ಅವರು ಡಾ. ಅಮಿತ ಮಿರ್ಜಿ ಅವರನ್ನು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!