ಡಂಬಳ: ದೇಶದಲ್ಲಿ ಹಲವು ಧರ್ಮ, ಹಲವು ಜಾತಿ ಇದ್ದರೂ ದೇಶದ ಅಖಂಡತೆ, ಏಕತೆ ಕಾಪಾಡಿಕೊಂಡು ಒಗ್ಗಟ್ಟಿನಿಂದ ಇದ್ದೇವೆ ಎಂದರೆ ಅದಕ್ಕೆಲ್ಲ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೊಡಮಾಡಿರುವ ಸಂವಿಧಾನವೆ ಕಾರಣ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಮುಂಡರಗಿಯ ಬೈಲೂರ ನಿಷ್ಕಲಮಂಟಪ ಜಗದ್ಗುರು ತೋಂಟದ ನಿಜಗುಣಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಬದುಕು-ಬರಹ, ಅವರ ಜ್ಞಾನ ನಮಗೆ ಬೆಳಕಾಗಬೇಕು. ಬುದ್ಧ ತನುವಾಗಬೇಕು, ಬಸವಣ್ಣನವರ ಪ್ರಾಣವಾಗಬೇಕು, ಡಾ. ಬಿ.ಆರ್. ಅಂಬೇಡ್ಕರ್ ಆತ್ಮವಾಗಬೇಕು. ಅಂದಾಗ ಸಮ ಸಮಾಜವಾಗಲು ಸಾಧ್ಯ. ಸಂವಿಧಾನ ದೇಶದ ಪ್ರತಿಯೊಬ್ಬರ ಜೀವಾಳ. ರಾಷ್ಟ್ರದಲ್ಲಿ ಎರಡು ಸಂವಿಧಾಗಳು ಗಟ್ಟಿ ಇವೆ. 12ನೇ ಶತಮಾನದಲ್ಲಿ ಗಟ್ಟಿ ಬೆಳೆಸಿದ ಬಸವಣ್ಣನವರ ಧಾರ್ಮಿಕ ಸಂವಿಧಾನ, ಇನ್ನೊಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ಸಂವಿಧಾನ. ಇವುಗಳ ಇರುವಿಕೆ ಉತ್ತಮ ಸಮಾಜಕ್ಕೆ ಕಾರಣವಾಗಿದೆ. ಸಮಾಜದಲ್ಲಿ ಸಜ್ಜನತೆಯನ್ನು ಅಳವಡಿಸಿಕೊಳ್ಳಬೇಕಾದರೆ ಬಸವಣ್ಣ, ಬುದ್ಧ, ಅಂಬೇಡ್ಕರ್ ಅವರ ಜೀವನ ಅನುಭಾವ ಆಗಬೇಕು ಎಂದರು. ಈ ಭಾಗದಲ್ಲಿ ಆರಂಭವಾಗಲಿರುವ ತೋಟಗಾರಿಕೆ ಕಾಲೇಜಿಗೆ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಹೆಸರು ಇಡಬೇಕು ಎಂದು ಸಲಹೆ ನೀಡಿದರು.
ಆಡತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ದಮನಿತರ, ಶೋಷಿತರ, ಪರ ಧ್ವನಿಯಾಗಿದ್ದರು. ಡಂಬಳ ಗ್ರಾಮ ಎಸ್ಸಿ ಕಾಲನಿಯವರು ಬದುಕು ಕಟ್ಟಿಕೊಳ್ಳಲು ಮಠದ ಜಮೀನನ್ನು ದಾನವಾಗಿ ನೀಡಿದರು. ಹೀಗೆ ಹಲವಾರು ಸಾಮಾಜಿಕ ಕಾರ್ಯಗಳು ಮಾಡಿದ ಶ್ರೇಯಸ್ಸು ಅವರದಾಗಿದೆ ಎಂದು ಹೇಳಿದರು.ಎಚ್.ಡಿ. ಪೂಜಾರ ಮಾತನಾಡಿ, ಅಂಬೇಡ್ಕರ್ ಅವರ ತತ್ವಗಳು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪಿಸಲು ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಶಿವಲೀಲಾ ಬಂಡಿಹಾಳ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ವೈ.ಎನ್. ಗೌಡರ, ಮಿಥುನಗೌಡ ಪಾಟೀಲ, ಮರತೇಮಪ್ಪ ಆದಮ್ಮನವರ, ಮೋಹನ ಆಲಮೇಲ್ಕರ್, ಎಸ್.ಎನ್. ಬಳ್ಳಾರಿ, ಡಿ.ಜಿ. ಪೂಜಾರ, ಎಚ್.ಡಿ. ಪೂಜಾರ, ಸತೀಶ ಪಾಸಿ, ರಾಮಣ್ಣ ಮೇಗಲಮನಿ, ಮಂಜಯ್ಯಸ್ವಾಮಿ ಅರವಟಗಿಮಠ, ಮಾರುತಿ ಜೋಗದಂಡಕರ, ಸೋಮು ಹೈತಾಪುರ, ಡಿ.ಡಿ. ಮೋರನಾಳ, ಉದಯಕುಮಾರ ಯಲಿವಾಳ, ಮಂಜುನಾಥ ಮೇಗಲಮನಿ, ಮಲ್ಲಪ್ಪ ಯರಾಶಿ, ಗವಿಸಿದ್ಧಪ್ಪ ಹಾದಿಮನಿ, ಗೋಣಿಬಸಪ್ಪ ಕೊರ್ಲಹಳ್ಳಿ, ಬಾಬುಸಾಬ ಮೂಲಿಮನಿ, ಗವಿಸಿದ್ಧಪ್ಪ ಬಿಸನಳ್ಳಿ, ಮಂಜುನಾಥ ಬಿಸನಳ್ಳಿ, ಮಲ್ಲಿಕಾರ್ಜುನ ಗೌಡಣ್ಣವರ, ಬಸವರಡ್ಡಿ ಬಂಡಿಹಾಳ, ಮುತ್ತು ಹಿರೇಮಠ, ಜಾಕೀರ ಮೂಲಿಮನಿ, ವೆಂಕಟೇಶ ದ್ವಸಲಕೇರಿ, ಬಾಲರಾಜ ಹಾರವರ, ಉಡಚಪ್ಪ ಹಳ್ಳಿಕೇರಿ, ಲಕ್ಷ್ಮಣ ತಗಡಿನಮನಿ ಇದ್ದರು.