ಗದಗದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ, ಪುತ್ಥಳಿಗೆ ಗೌರವ ನಮನಕನ್ನಡಪ್ರಭ ವಾರ್ತೆ ಗದಗ
ನಗರದ ನಗರಸಭೆ ಆವರಣದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿ ಅವರು ಮಾತನಾಡಿದರು. ಇತಿಹಾಸದ ಉದ್ದಕ್ಕೂ ಕಾಂಗ್ರೆಸಿಗರ ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು. ಆದರೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೆನಪಿಗೆ ಬರಲಿಲ್ಲ. ದೇಶ, ವಿದೇಶಗಳಲ್ಲಿ ೩೨ ಪದವಿಗಳನ್ನು ಗಳಿಸಿದ ಡಾ. ಅಂಬೇಡ್ಕರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ಅವರಿಗೆ ಗೌರವ ಸಲ್ಲಿಸಬೇಕಾಗಿತ್ತು. ಹಿಂದುಳಿದ, ದೀನದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಟ್ಟ ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತೀಯರ ಪಾಲಿಗೆ ಪ್ರಾಥಸ್ಮರಣೀಯರು. ೧೯೭೨ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಎಸಗಿ ರಾಜನಾರಾಯಣ ವಿರುದ್ಧ ಇಂದಿರಾ ಗಾಂಧಿ ಗೆದ್ದಿದ್ದಾರೆಂದು ಅಲಹಾಬಾದ್ ಉಚ್ಚ ನ್ಯಾಯಾಲಯ ತೀರ್ಪು ನೀಡಿತು. ತೀರ್ಪಿಗೆ ತಲೆಬಾಗದೆ ದೇಶದ ಪ್ರಮುಖ ರಾಜಕಾರಣಿಗಳಾದ ಜಯಪ್ರಕಾಶ ನಾರಾಯಣ, ಅಟಲ್‌ಬಿಹಾರಿ ವಾಜಪೇಯಿ, ಲಾಲಕೃಷ್ಣ ಅಡ್ವಾಣಿ, ಮುರಾರ್ಜಿ ದೇಸಾಯಿಯಂಥ ನಾಯಕರನ್ನು ಜೈಲಿಗೆ ಕಳುಹಿಸಿ ತುರ್ತುಪರಿಸ್ಥಿತಿ ಘೋಷಿಸಿ ಅಪರಾಧಗೈದರು. ಜಗತ್ತಿನಲ್ಲಿಯೇ ಶ್ರೇಷ್ಠವಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವನ್ನು ತಿದ್ದಿದ ಕೀರ್ತಿ ಇಂದಿರಾ ಗಾಂಧಿ ಅವರಿಗೆ ಸಲ್ಲುತ್ತದೆ ಎಂದರು.
ಇಂದು ಕಾಂಗ್ರೆಸ್‌ನವರು ನಾವೇ ದಲಿತರ ಉದ್ಧಾರಕರೆಂದು ಬಿಂಬಿಸಿಕೊಂಡು ವೋಟಿನ ರಾಜಕಾರಣ ಮಾಡಿದ್ದು ದೇಶದ ದಲಿತರೆಲ್ಲರಿಗೂ ಮನವರಿಕೆಯಾಗಿದೆ. ದಲಿತರೆಲ್ಲರೂ ನರೇಂದ್ರ ಮೋದಿ ಅವರು ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ. ಮುಂಬರುವ ೨೦೨೪ ಲೋಕಸಭೆ ಚುನಾವಣೆಯಲ್ಲಿ ನಾವೆಲ್ಲರೂ ಮತ್ತೆ ೩ನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡೋಣ ಎಂದರು.ಡಾ. ವಿ.ಎಸ್. ಹೊಸಮಠ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಅನಿಲ ಅಬ್ಬಿಗೇರಿ, ರಮೇಶ ಸಜ್ಜಗಾರ, ಬಸವಣ್ಣೆಪ್ಪ ಚಿಂಚಲಿ, ಉಡಚಪ್ಪ ಭದ್ರೇಶ ಅಡ್ನೂರ, ಚಾಂದಸಾಬ್ ಕೊಟ್ಟೂರ ಇದ್ದರು.