ಕನ್ನಡಪ್ರಭ ವಾರ್ತೆ ಬೆಳಗಾವಿ
ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ಭೀಮಶಿ ಎಲ್.ಜಾರಕಿಹೊಳಿ, ಉಪಾಧ್ಯಕ್ಷರಾಗಿ ಕುಂತಿನಾಥ ಕಲಮನಿ, ತಾನಾಜಿರಾವ್ ಮುರಂಕರ, ಭೀಮಪ್ಪ ಕಿಚಡಿ, ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಪ್ರಭ ಪ್ರಧಾನ ವರದಿಗಾರ ಶ್ರೀಶೈಲ ಮಠದ, ಕಾರ್ಯದರ್ಶಿಯಾಗಿ ಸದಾಶಿವ ಸಂಕಪ್ಪಗೋಳ, ರವಿ ಹುಲಕುಂದ, ರಾಜಕುಮಾರ ಬಾಗಲಕೋಟಿ, ಖಜಾಂಚಿ ಬಸವರಾಜ ಹೊಂಗಲ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಲ್ಲಿಕಾರ್ಜುನರಡ್ಡಿ ಗೊಂದಿ ಹಾಗೂ ಸಂಘಧ ರಾಜ್ಯ ಕಾರ್ಯದರ್ಶಿಯಾಗಿ ಪುಂಡಲೀಕ ಬಾಳೋಜಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಸವರಾಜ ಚಮಕೇರಿ, ಈರಣ್ಣ ಬುಡ್ಡಾಗೋಳ, ಮಹಾವೀರ ಚಿಂಚಣಿ, ಉಳವಯ್ಯ ಹಿರೇಮಠ, ಮಹಾದೇವ ಪೂಜೇರ, ಸನತ ಜಾರಕಿಹೊಳಿ, ಸೂರ್ಯಕಾಂತ ಪಾಟೀಲ, ಸುಕುಮಾರ ಬನ್ನೂರೆ, ರುದ್ರೇಶ ಇಟಗಿ, ಕೃಷ್ಣಪ್ಪ ಗಿರೆನ್ನವರ, ಮಹೇಶ ಗಡಕರಿ, ಈರನಗೌಡ ಪಾಟೀಲ, ಗಿರೀಶಪ್ರಸಾದ ರೇವಡಿ, ಸಿದ್ದಲಿಂಗಯ್ಯ ಪೂಜಾರ, ಲಕ್ಷ್ಮೀ ಆರಿಬೆಂಚಿ, ಅವಿರೋಧ ಆಯ್ಕೆಯಾಗಿದ್ದಾರೆ.