ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಜಗನ್ಮೋಹನ ಅರಮನೆಯ ಭಾನುವಾರ ನಡೆದ ಆಲನಹಳ್ಳಿ ಬಡಾವಣೆಯ ಯುರೋಕಿಡ್ಸ್ ಶಾಲೆಯ ಪ್ರಥಮ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ವಾತಾವರಣಕ್ಕೂ ಮೊದಲು ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮನೆಯನ್ನು ಬಿಟ್ಟು, ಶಾಲೆಗೆ ಬಂದ ಮಕ್ಕಳಿಗೆ ಸ್ವಾವಲಂಬನೆ, ಆಸಕ್ತಿ, ಕಲಿಕೆ, ವಿವಿಧ ಆಟೋಟಗಳು, ಸಹಪಾಠಿ ಮಕ್ಕಳ ಜೊತೆ ಬೆರೆಯುವುದು ಹೀಗೆ ಹತ್ತು ಹಲವು ಕುತೂಹಲಕಾರಿ ವಿಷಯಗಳನ್ನು ಮನವರಿಕೆ ಮಾಡಿಕೊಡುವುದು ಬಹಳ ಮುಖ್ಯವಾದ ಉದ್ದೇಶ ಹಾಗೂ ಲಕ್ಷಣವಾಗಿದೆ ಎಂದರು.
ಇಂದು ಸ್ಪರ್ಧಾ ಪ್ರಪಂಚದಲ್ಲಿ ಶಿಕ್ಷಣ ಸಂಸ್ಥೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೈಪೋಟಿಯನ್ನುಂಟು ಮಾಡುತ್ತಿದೆ. ಆದ್ದರಿಂದ ವಿಷಯ ಜ್ಞಾನದ ಜೊತೆಗೆ ನಾವು ಬದುಕುವ ಕಲೆಯನ್ನು ಕಲಿಸುವುದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ಕ್ರಿಯಾಶೀಲತೆಯನ್ನು ಉಂಟು ಮಾಡುವುದು ಅತ್ಯಗತ್ಯ ಎಂದು ಅವರು ಹೇಳಿದರು.ಡಾ. ಯೋಗಿತಾ, ಯುರೋಕಿಡ್ ಮುಖ್ಯಸ್ಥ ಕೃಷ್ಣೇಗೌಡ, ವ್ಯವಸ್ಥಾಪಕಿ ಶಿಲ್ಪಾ ಕೃಷ್ಣೇಗೌಡ, ಮುಖ್ಯ ಶಿಕ್ಷಕಿ ಚೈತ್ರಾ ಇದ್ದರು. ಮೌರ್ಯ ಕೃಷ್ಣೇಗೌಡ ಸ್ವಾಗತಿಸಿದರು.