ಟ್ಯಾಪ್ಮಿ ನೂತನ ನಿರ್ದೇಶಕ ಡಾ. ದೇಬಸಿಸ್ ಪ್ರಧಾನ್

KannadaprabhaNewsNetwork |  
Published : Jun 13, 2026, 02:30 AM IST
12ಪ್ರಧಾನ್ | Kannada Prabha

ಸಾರಾಂಶ

ಮಾಹೆ ವಿವಿಯ ಅಂಗ ಸಂಸ್ಥೆ ಟಿ. ಎ. ಪೈ ಮ್ಯಾನೇಜ್‌ ಮೆಂಟ್ ಇನ್‌ ಸ್ಟಿಟ್ಯೂಟ್ (ಟ್ಯಾಪ್ಮಿ) ನೂತನ ನಿರ್ದೇಶಕರಾಗಿ ಡಾ. ದೇಬಸಿಸ್ ಪ್ರಧಾನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಮಣಿಪಾಲ: ಮಾಹೆ ವಿವಿಯ ಅಂಗ ಸಂಸ್ಥೆ ಟಿ. ಎ. ಪೈ ಮ್ಯಾನೇಜ್‌ ಮೆಂಟ್ ಇನ್‌ ಸ್ಟಿಟ್ಯೂಟ್ (ಟ್ಯಾಪ್ಮಿ) ನೂತನ ನಿರ್ದೇಶಕರಾಗಿ ಡಾ. ದೇಬಸಿಸ್ ಪ್ರಧಾನ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.ಡಾ. ಪ್ರಧಾನ್ ಜಮ್‌ಶೆಡ್‌ಪುರದ ಪ್ರತಿಷ್ಠಿತ ಎಕ್ಸ್‌ಎಲ್‌ಆರ್‌ಐ ಸಂಸ್ಥೆಯಲ್ಲಿ 20 ವರ್ಷ ಮಾರ್ಕೆಟಿಂಗ್ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ, ಅಸೋಸಿಯೇಟ್ ಡೀನ್ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅಪಾರ ಅನುಭವ ಹೊಂದಿದ್ದಾರೆ.

ಮಾರ್ಕೆಟಿಂಗ್ ಮತ್ತು ಗ್ರಾಹಕ ನಡವಳಿಕೆ ವಿಷಯದಲ್ಲಿ ಡಾ. ಪ್ರಧಾನ್ ವಿಶ್ವ ಮುಂಚೂಣಿಯ 30ಕ್ಕೂ ಹೆಚ್ಚು ಜರ್ನಲ್‌ಗಳ ಲೇಖನಗಳನ್ನು ಬರೆದಿದ್ದಾರೆ. ಗ್ರಾಹಕರ ಯೋಗಕ್ಷೇಮ ಮತ್ತು ತಂತ್ರಜ್ಞಾನ, ಗ್ರಾಹಕರು-ಬ್ರ್ಯಾಂಡ್‌ಗಳು ಮತ್ತು ಯಂತ್ರಗಳ ನಡುವಿನ ಪರಸ್ಪರ ಸಂವಹನ, ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್, ಬ್ರ್ಯಾಂಡ್ ಆಕ್ಟಿವಿಸಂ ಹಾಗೂ ಗ್ರಾಹಕರೊಂದಿಗಿನ ಒಡನಾಟ ಇವರ ಪ್ರಮುಖ ಸಂಶೋಧನಾ ಕ್ಷೇತ್ರಗಳಾಗಿವೆ.ಅವರು ಪ್ರಸ್ತುತ ಸೇಜ್ ಪಬ್ಲಿಕೇಷನ್ಸ್ ಪ್ರಕಟಿಸುವ ಮ್ಯಾನೇಜ್‌ ಮೆಂಟ್ ಆಂಡ್ ಲೇಬರ್ ಸ್ಟಡೀಸ್ ಜರ್ನಲ್‌ ನ ಪ್ರಧಾನ ಸಂಪಾದಕರಾಗಿಯೂ, ಸ್ಪ್ರಿಂಗರ್ ನೇಚರ್ ಪ್ರಕಟಿಸುವ ಹ್ಯುಮಾನಿಟೀಸ್ ಆಂಡ್ ಸೋಶಿಯಲ್ ಸೈನ್ಸಸ್ ಕಮ್ಯುನಿಕೇಷನ್ಸ್ ಜರ್ನಲ್‌ ನ ಪ್ರಾದೇಶಿಕ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಅವರು ಸಿಡ್ನಿ ವಿವಿ, ಸಿಂಗಾಪುರ್ ಮ್ಯಾನೇಜ್‌ ಮೆಂಟ್ ವಿವಿ, ಮಿಚಿಗನ್ ವಿವಿ, ಲಂಡನ್ ಬಿಸಿನೆಸ್ ಸ್ಕೂಲ್ ಮತ್ತು ಜಾನ್ಸ್ ಹಾಪ್ಕಿನ್ಸ್ ವಿವಿ ಸೇರಿದಂತೆ ವಿಶ್ವದ ಹಲವಾರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ ಹಾಗೂ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಅವರು ಪ್ರಸ್ತುತ ಹಲವು ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾಲಿಬೆಟ್ಟ ವರ್ತಕರ ಸಂಘ ವಿಶ್ವ ಪರಿಸರ ದಿನಾಚರಣೆ
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಸುಧಾರಣೆ ಆಗ್ರಹ