ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ದೀಪಾವಳಿ ಹಾಗೂ ಅಗ್ರಿಲೀಫ್ ಉತ್ಸವದ ಅಂಗವಾಗಿ ತನ್ನ ಉದ್ಯೋಗಿಗಳಿಗೆ ₹1 ಕೋಟಿ ರು.ಮೌಲ್ಯದ ವಿವಿಧ ಕೊಡುಗೆಗಳನ್ನು ನೀಡಿದೆ.
ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ದೀಪಾವಳಿ ಹಾಗೂ ಅಗ್ರಿಲೀಫ್ ಉತ್ಸವದ ಅಂಗವಾಗಿ ತನ್ನ ಉದ್ಯೋಗಿಗಳಿಗೆ ₹1 ಕೋಟಿ ರು.ಮೌಲ್ಯದ ವಿವಿಧ ಕೊಡುಗೆಗಳನ್ನು ನೀಡಿದೆ.
ನಿಡ್ಲೆಯ ಕಾರ್ಖಾನೆಯಲ್ಲಿ ಗುರುವಾರ ದೀಪಾವಳಿ ಸಂಭ್ರಮ
ನಿಡ್ಲೆಯ ಕಾರ್ಖಾನೆಯಲ್ಲಿ ಗುರುವಾರ ದೀಪಾವಳಿ ಸಂಭ್ರಮ, ಅಗ್ರಿಲೀಫ್ ಉತ್ಸವ ನಡೆಯಿತು. ಈ ವೇಳೆ, ಅತ್ಯುತ್ತಮ ಸಾಧನೆ ಮಾಡಿದ ಐವರು ಉದ್ಯೋಗಿಗಳಿಗೆ 5 ಟಾಟಾ ನೆಕ್ಸಾನ್ ಇವಿ ಕಾರುಗಳನ್ನು ನೀಡಲಾಯಿತು. ಇಬ್ಬರಿಗೆ 2 ಲಕ್ಷ ಮೌಲ್ಯದ ಎರಡು ದ್ವಿಚಕ್ರವಾಹನಗಳನ್ನು ನೀಡಲಾಯಿತು.
ಅಗ್ರಿಲೀಫ್, ದೇಶದ ಪ್ರಮುಖ ಅಡಿಕೆ ಹಾಳೆ ತಟ್ಟೆಗಳ ತಯಾರಕ ಕಂಪನಿ
ಅಗ್ರಿಲೀಫ್, ದೇಶದ ಪ್ರಮುಖ ಅಡಿಕೆ ಹಾಳೆ ತಟ್ಟೆಗಳ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿ, ತನ್ನ ರೈತ ಜಾಲದ ಮೂಲಕ ಸುಮಾರು 10,000 ರೈತ ಕುಟುಂಬಗಳಿಗೆ ಪರ್ಯಾಯ ಆದಾಯದ ಅವಕಾಶಗಳನ್ನು ಒದಗಿಸಿದೆ. ಅಲ್ಲದೆ 20ಕ್ಕೂ ಹೆಚ್ಚು ದೇಶಗಳಿಗೆ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.
