ಮೈಸೂರು ವಿಭಾಗ ಬಿಜೆಪಿ ಸಹ ಪ್ರಭಾರಿಯಾಗಿ ಡಾ.ಈ.ಸಿ.ನಿಂಗರಾಜ್‌ಗೌಡ ನೇಮಕ

KannadaprabhaNewsNetwork |  
Published : Mar 05, 2026, 01:30 AM IST
4ಕೆಎಂಎನ್‌ಡಿ-5ಡಾ.ಈ.ಸಿ.ನಿಂಗರಾಜ್‌ಗೌಡ | Kannada Prabha

ಸಾರಾಂಶ

ಬಿಜೆಪಿ ನಿಷ್ಠಾವಂತ ನಾಯಕರೆಂದೇ ಗುರುತಿಸಿಕೊಂಡಿರುವ ಡಾ.ಈ.ಸಿ.ನಿಂಗರಾಜ್‌ಗೌಡರ ಸಂಘಟನಾ ಸಾಮರ್ಥ್ಯ, ಕ್ರಿಯಾಶೀಲ ನಾಯಕತ್ವವನ್ನು ಗುರುತಿಸಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ ಸಹ ಪ್ರಭಾರಿ ಹುದ್ದೆಯನ್ನು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಭಾರತೀಯ ಜನತಾ ಪಕ್ಷದ ಮೈಸೂರು ವಿಭಾಗ ಸಹ ಪ್ರಭಾರಿಯಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅವರನ್ನು ನೇಮಕ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ನೇಮಕ ಮಾಡಿದ್ದಾರೆ.

ಬಿಜೆಪಿ ನಿಷ್ಠಾವಂತ ನಾಯಕರೆಂದೇ ಗುರುತಿಸಿಕೊಂಡಿರುವ ಡಾ.ಈ.ಸಿ.ನಿಂಗರಾಜ್‌ಗೌಡರ ಸಂಘಟನಾ ಸಾಮರ್ಥ್ಯ, ಕ್ರಿಯಾಶೀಲ ನಾಯಕತ್ವವನ್ನು ಗುರುತಿಸಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಜಿಲ್ಲೆಗಳ ಸಹ ಪ್ರಭಾರಿ ಹುದ್ದೆಯನ್ನು ನೀಡಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಪ್ರಬಲ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದ ಈ.ಸಿ.ನಿಂಗರಾಜ್‌ಗೌಡ ಪಕ್ಷದ ಸೂಚನೆ ಮೇರೆಗೆ ಕೊನೆಯ ಹಂತದಲ್ಲಿ ಕಣದಿಂದ ಹಿಂದೆ ಸರಿದಿದ್ದರು. ಅದನ್ನೂ ಗಮನದಲ್ಲಿಟ್ಟುಕೊಂಡು ಅವರಿಗೆ ಈ ಹುದ್ದೆ ನೀಡಲಾಗಿದೆ.

ಪಕ್ಷದ ಸಂಘಟನೆ, ಚುನಾವಣೆ ಕಾರ್ಯಚಟುವಟಿಕೆಗಳ ಬಗ್ಗೆ ತೀರ್ಮಾನಗಳನ್ನು ಕೈಗೊಂಡು ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಕಳೆದ ೩೭ ವಷರ್ಗಳಿಂದ ಸಂಘ-ಪರಿವಾರದ ಭಾರತೀಯ ಕಿಸಾನ್ ಸಂಘ, ವಿಶ್ವ ಹಿಂದೂ ಪರಿಷದ್, ವನವಾಸಿ ಕಲ್ಯಾಣ ಆಶ್ರಮ, ಸಂಸ್ಕೃತ ಭಾರತಿ, ಭಾರತೀಯ ಮಜ್ದೂರ್ ಸಂಘ ಸೇರಿದಂತೆ ಸಂಘ-ಪರಿವಾರದ ಹಲವಾರು ಸಂಘಟನೆಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.

ಎಬಿವಿಪಿ ಸಂಘಟನೆ ವೇಳೆ ನಿರಂತರವಾಗಿ ಹೋರಾಟ ರೂಪಿಸಿದವರು. ಎಡಪಂಥೀಯ ಸಂಘಟನೆಗಳು ಕಾಲೇಜಿನಲ್ಲಿ ಎಬಿವಿಪಿ ಸಂಘಟಿಸಲು ಅಡ್ಡಿಪಡಿಸಿದಾಗ ದಿಟ್ಟವಾಗಿ ಎದುರಿಸಿದರು. ಆ ಕಾರಣಕ್ಕೆ ರಾಜ್ಯಮಟ್ಟದ ನಾಯಕರ ಗಮನ ಸೆಳೆದಿದ್ದರು. ನಂತರ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾಮಿ ವಿವೇಕಾನಂದ ಜಯಂತಿ, ಸುಭಾಷ್‌ಚಂದ್ರ ಬೋಸ್ ಜಯಂತಿ ಆಚರಿಸಿ ಎಲ್ಲರ ಗಮನ ಸೆಳೆದರು. ಈ ವೇಳೆ ಗೌಡರ ಬೆಂಬಲಿಗರ ಮೇಲೆ ಹಲ್ಲೆ ನಡೆದಿತ್ತು. ಅಂದಿನ ಕೇಂದ್ರ ಗೃಹ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರೇ ಮೈಸೂರು ಪೊಲೀಸ್ ಕಮಿಷನರ್‌ಗೆ ಪೋನ್ ಮಾಡಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದರು.ಅನಂತರ ನಿಂಗರಾಜ್‌ಗೌಡರ ಹೋರಾಟ ಮತ್ತಷ್ಟು ಪ್ರಖರತೆ ಪಡೆದುಕೊಂಡಿತ್ತು.

ಸಂಘಟನೆ ಮೂಲಕವೇ ಮಂಡ್ಯ, ಮೈಸೂರು, ಹಾಸನ ಮತ್ತುಚಾಮರಾಜನಗರ ಜಿಲ್ಲೆಗಳ ಬಹುತೇಕ ಹಳ್ಳಿಗಳ ಮನೆ ಮನೆಗೆ ಬೇಟಿ ನೀಡುತ್ತೀದ್ದರು ಹಾಗೂ ಈ ನಾಲ್ಕು ಜಿಲ್ಲೆಗಳಲ್ಲೂ ಚಿರಪರಿಚಿತರಾದರು. ಅಲ್ಲಿಂದ ಇಲ್ಲಿಯವರೆಗೂ ತಮ್ಮದೇ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ಅಪಾರ ಸ್ನೇಹಿತರು, ಪದವೀಧರರು, ಶಿಕ್ಷಕರು, ಎಲ್ಲಾ ಸಂಘಟನೆಗಳ ಕಾರ್ಯಕರ್ತರು, ಮುಖಂಡರ ನಡುವೆ ಉತ್ತಮ ಒಡನಾಟ ಹೊಂದಿದ್ದಾರೆ. ದೊಡ್ಡ ಅಭಿಮಾನಿ ಪಡೆಯನ್ನೇ ಹೊಂದಿರುವ ನಿಂಗರಾಜ್‌ಗೌಡರನ್ನು ಈಗ ಬಿಜೆಪಿ ವರಿಷ್ಠರು ಮೈಸೂರು ವಿಭಾಗದ ಸಹ ಪ್ರಭಾರಿಯಾಗಿ ನೇಮಕ ಮಾಡಿದೆ. ಈ ನೇಮಕದಿಂದ ಮೈಸೂರು ವಿಭಾಗದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಗಳ ಸ್ಥಾಪನೆ ಮೂಲಕ ಶಿಕ್ಷಣಕ್ಕೆ ಒತ್ತು: ಕೆ.ಎಸ್.ಆನಂದ್
ರೈತರ ಮೇಲಿನ ಶೋಷಣೆ ಖಂಡಿಸಿ ೯ರಂದು ಧರಣಿ ಸತ್ಯಾಗ್ರಹ