ಡಾ.ಎಚ್.ಎನ್.ರವೀಂದ್ರರದ್ದು ನಿಂತಲ್ಲಿ ನೆಲೆ ಕಾಣದ ವ್ಯಕ್ತಿತ್ವ: ಆರೋಪ

KannadaprabhaNewsNetwork |  
Published : Mar 09, 2024, 01:32 AM IST
೮ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿದರು. | Kannada Prabha

ಸಾರಾಂಶ

ಕಳೆದ ಸ್ವಾಭಿಮಾನಿ ಚುನಾವಣೆಯಲ್ಲಿ ಹಲವು ನಾಯಕರು ಸುಮಲತಾರವರ ಬಗ್ಗೆ ಮಾತನಾಡಿದಾಗ ನನ್ನ ಅಣ್ಣ ನನ್ನ ಅಂಬಿ, ನನ್ನ ಜಿಲ್ಲೆ ನನ್ನ ಅತ್ತಿಗೆ, ನನ್ನ ತಮ್ಮ ಅಭಿಷೇಕ್, ನನ್ನ ಸ್ವಾಭಿಮಾನಿ ಜಿಲ್ಲೆಯ ಸೊಸೆಯಾದ ಸುಮಲತಾ ಎಂತಲೇ ಮಾತನಾಡಿ ಈಗ ಯಾರನ್ನೋ ಮೆಚ್ಚಿಸಲು ಸುಮಲತಾರವರ ಬಗ್ಗೆ ಅಸಭ್ಯ, ಅತಿರೇಕದ ಮಾತುಗಳನ್ನಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ.

ಕನ್ನಡಪ್ರಭ ವಾರ್ತೆ ಮಂಡ್ಯಡಾ.ಎಚ್.ಎನ್.ರವೀಂದ್ರ ಅವರದ್ದು ನಿಂತಲ್ಲಿ ನೆಲೆಕಾಣದ ವ್ಯಕ್ತಿತ್ವ. ಸುಸಂಸ್ಕೃತ ಮನೆತನದಿಂದ ಬೆಳೆದುಬಂದು ಉತ್ತಮ ವ್ಯಕ್ತಿತ್ವವನ್ನು ಹೊಂದದೆ ವಿಕೃತ ಮನಸ್ಸನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಟೀಕಿಸಿದರು.

ಅವರಲ್ಲಿರುವ ಕೆಲವು ಗುಣಗಳನ್ನು ನಾನು ಒಪ್ವುತ್ತೇನೆ. ಒಳ್ಳೆಯ ಸಂಘಟಕ. ಅದ್ಭುತ ಮಾತುಗಾರ. ಆದರೆ, ಬಾಯಿ ಚಪಲಕ್ಕಾಗಿ ತಾನು ಬೆಳೆದು ಬಂದ ಸುಸಂಸ್ಕೃತ ಮನೆತನದ ವ್ಯಕ್ತಿತ್ವವನ್ನು ಮರೆತಿದ್ದಾರೆ. ಸ್ವತಃ ಅಂಬರೀಶ್‌ರವರ ಒಡನಾಡಿಯಾಗಿದ್ದ ಎನ್.ನರಸಿಂಹೇಗೌಡರ ಮಗನಾಗಿ ಸುಶಿಕ್ಷಿತ ಪದವೀಧರ ಕ್ಷೇತ್ರದಿಂದ ಒಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರವೀಂದ್ರ ಅವರು, ತಮ್ಮ ಪಕ್ಷದ ಧೋರಣೆ ಖಂಡಿಸುವ ಭರದಲ್ಲಿ ಸಂಸದೆ ಸುಮಲತಾ ಅವರ ಬಗ್ಗೆ ಕೀಳು ಮಟ್ಟದ ಪದ ಪ್ರಯೋಗ ಮಾಡುವುದು ಎಷ್ಟು ಸರಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಕಳೆದ ಸ್ವಾಭಿಮಾನಿ ಚುನಾವಣೆಯಲ್ಲಿ ಹಲವು ನಾಯಕರು ಸುಮಲತಾರವರ ಬಗ್ಗೆ ಮಾತನಾಡಿದಾಗ ನನ್ನ ಅಣ್ಣ ನನ್ನ ಅಂಬಿ, ನನ್ನ ಜಿಲ್ಲೆ ನನ್ನ ಅತ್ತಿಗೆ, ನನ್ನ ತಮ್ಮ ಅಭಿಷೇಕ್, ನನ್ನ ಸ್ವಾಭಿಮಾನಿ ಜಿಲ್ಲೆಯ ಸೊಸೆಯಾದ ಸುಮಲತಾ ಎಂತಲೇ ಮಾತನಾಡಿ ಈಗ ಯಾರನ್ನೋ ಮೆಚ್ಚಿಸಲು ಸುಮಲತಾರವರ ಬಗ್ಗೆ ಅಸಭ್ಯ, ಅತಿರೇಕದ ಮಾತುಗಳನ್ನಾಡಿರುವುದನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದರು.

ಒಂದು ಪಕ್ಷದಲ್ಲಿ ಇದ್ದುಕೊಂಡು ಅದೇ ಪಕ್ಷದ ಧೋರಣೆ ಖಂಡಿಸುವ ನಿಮ್ಮ ಛಲಗಾರಿಕೆಯನ್ನು ಶ್ಲಾಘಿಸುತ್ತೇನೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ಇವರನ್ನು ಕಾಂಗ್ರೆಸ್ ಪಕ್ಷವೇ ದೂರ ಇಟ್ಟಿತಾ ಅಥವಾ ಪಕ್ಷ ದೂರ ತಳ್ಳುವ ಭಯದಿಂದ ತಾವಾಗಿಯೇ ದೂರ ಹೋಗುತ್ತಿದ್ದಾರಾ. ಅದು ಅವರಿಗೆ ಸೇರಿದ ವಿಚಾರ. ರಾಜಕೀಯ ನೆಲೆಗಾಗಿ ಇನ್ನೊಬ್ಬರನ್ನು ಮೆಚ್ಚಿಸುವ ರಾಜಕೀಯ ಮಾತುಗಳು ಡಾ.ರವೀಂದ್ರರವರಿಗೆ ಶೋಭೆ ತರುವುದಿಲ್ಲ. ಸುಮಲತಾ ಅವರ ಬೆನ್ನಿಗೆ ನಿಲ್ಲಲು ಲಕ್ಷಾಂತರ ಅಂಬರೀಶ್ ಅಭಿಮಾನಿಗಳಿದ್ದಾರೆ. ನೀವು ಆಡಿರುವ ಮಾತುಗಳ ಬಗ್ಗೆ ಒಮ್ಮೆ ನೀವೇ ಆತ್ಮಾವಲೋಕನ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''