ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡಬೇಕು

KannadaprabhaNewsNetwork | Published : Mar 20, 2025 1:17 AM

ಸಾರಾಂಶ

ಸ್ವತಂತ್ರ್ಯದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಉತ್ತಮವಾದ ಹಕ್ಕು, ಸ್ಥಾನಮಾನ ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರುಕಾನೂನು ವ್ಯವಸ್ಥೆಯ ಮೂಲಕ ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡುವುದು ಬಹಳ ಮುಖ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವಿಭಾಗೀಯ ಸಹ ನಿರ್ದೇಶಕ ಡಾ.ಕೆ.ಎಚ್‌. ಪ್ರಸಾದ್‌ ಹೇಳಿದರು.ತಾಲೂಕಿನ ಕೀಳನಪುರ ಗ್ರಾಪಂ ಮತ್ತು ಆರ್‌.ಎಲ್‌.ಎಚ್‌.ಪಿ ವತಿಯಿಂದ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.ಮಹಿಳೆಯರು ಕೇವಲ ಗೃಹ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದರು. ಸ್ವತಂತ್ರ್ಯದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಉತ್ತಮವಾದ ಹಕ್ಕು, ಸ್ಥಾನಮಾನ ನೀಡಿದೆ. ಕಾನೂನಿನ ವ್ಯವಸ್ಥೆಯ ಮೂಲಕ ದೌರ್ಜನ್ಯದ ವಿರುದ್ಧ ಮಹಿಳೆಯರು ಹೋರಾಡುವುದು ಬಹಳ ಮುಖ್ಯವಾಗಿದ್ದು, ಸಂವಿಧಾನದ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ಮಹಿಳೆಯರು ಕುಟುಂಬದಲ್ಲಿ ಕೆಲಸ ನಿರ್ವಹಿಸುವುದರೊಂದಿಗೆ ಸಮಾಜದಲ್ಲಿ ಕೆಲಸ ನಿರ್ವಹಿಸಿ, ಮನೆ ಮತ್ತು ಲೋಕದ ದೀಪ ಬೆಳಗಿಸುವ ಶಕ್ತಿಯಾಗಿದ್ದಾರೆ. ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡಿದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು ಎಂದರು.ಮಹಿಳೆ ಪ್ರಪಂಚದ ದೊಡ್ಡ ಶಕ್ತಿ ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ ಎಂದು ಅವರು ಹೇಳಿದರು.ಗಮನ ಮಹಿಳಾ ಸಮೂಹ ಮಮತಾ ಯಜಮಾನ್‌ ಮಾತನಾಡಿ, ಮಹಿಳಾ ಗ್ರಾಮ ಸಭೆ ಮತ್ತು ಅದರ ಮಹತ್ವ ಗ್ರಾಪಂ ಸ್ಥಾಯಿ ಸಮಿತಿಗಳು, ಒಕ್ಕೂಟವನ್ನು ಮಾಡಿಕೊಳ್ಳಿ ಆ ಮೂಲಕ ನಿಮ್ಮ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು, ಇಂದು ಆಟೋ ರಿಕ್ಷಾದಿಂದ ಅಂತರಿಕ್ಷಾ ತಲುಪುವ ರಾಕೆಟ್‌ ಅನ್ನು ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ಧೆ ಇದೆ ಎಂಬುದನ್ನು ಒತ್ತಿ ತೋರುತ್ತದೆ. ಹೆಣ್ಣು ಶಕ್ತಿಯ ಪ್ರತೀಕವಾಗಿದ್ದು, ಯಾರಲ್ಲಿಯೂ ಅವಲಂಬಿತವಾಗದೆ ಸ್ವತಂತ್ರ್ಯವಾಗಿ, ಆತ್ಮ ವಿಶ್ವಾಸದಿಂದ ಬದುಕುವ ಶಕ್ತಿ ಬೆಳಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆ ನಿರ್ದೇಶಕಿ ಸರಸ್ವತಿ, ಸಂಸ್ಥೆಯು ಕಳೆದ 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮಹಿಳೆಯರ, ಮಕ್ಕಳ, ಯುವಜನರ ಮತ್ತು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನೇರಳೆ ಬಣ್ಣವು ಮಹತ್ವದ ಬಣ್ಣವಾಗಿದ್ದು, ನ್ಯಾಯ ಘನತೆ ಮತ್ತು ನಿಷ್ಠೆಯನ್ನು ಸಂಕೇತಿಸುತ್ತದೆ ಎಂದರು.ಗ್ರಾಪಂ ಅಧ್ಯಕ್ಷೆ ನಂಜುಂಡಸ್ವಾಮಿ, ಮುಖಂಡ ಮಹದೇವಪ್ಪ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ಇಒ ಸಿ. ಕೃಷ್ಣ, ಪಿಡಿಒ ಮಾಯಪ್ಪ, ಡಾ. ಸುರೇಶ್‌, ಬಿ.ಆರ್‌. ನಾಗರಾಜು ಮೊದಲಾದವರು ಇದ್ದರು.

Share this article