ಡಾ.ಕೈಲಾಸನಾಥ ಶ್ರೀಗಳ ಸೇವೆ ವಿಶ್ವ ದಾಖಲೆ

KannadaprabhaNewsNetwork |  
Published : Sep 18, 2024, 01:59 AM IST
 ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನ ಸಾಂಸ್ಕೃತಿಕ ಭವನದಲ್ಲಿ ಜರುಗಿದ ರಿಯಾಲಿಟಿ ಬುಕ್ ಆಫ್ ವರ್ಡರಿಕಾರ್ಡನಲ್ಲಿ ಗಿನ್ನಿಸ್ ದಾಖಲೆ ಸಮಾರಂಭದಲ್ಲಿ ಡಾ.ಕೈಲಾಸನಾಥ ಶ್ರೀಗಳಿಗೆ ಗಿನ್ನಿಸ್ ದಾಖಲೆ ಪ್ರಶಸ್ತಿಯನ್ನು ಡಾ.ಹರ್ಷವರ್ಧನ,ಡಾ.ವಂದನಾ ಡಿಸೋಜ,ಡಾ.ಮಹೆಶಾನಂದಜಿ,ಡಾ. ನಂಬಿ ರಾಜ್, ಡಾ ವೇದಾ ದಿಕ್ಷಿತ,ಡಾ.ರುಭೇರಿ ಇಮ್ಮನ್ವಾಯಿಲ್,ಡೆಪ್ಯುಟಿ ಕಮಿಷನರ್ ಡಾ ಶ್ರೀನಿವಾಸ ನೀಡಿ ಗೌರವಿಸಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕೊಲ್ಹಾರಹಳೆ ಕೊಲ್ಹಾರ ಬಳಿಯ ಕೃಷ್ಣಾ ನದಿ ತಟದಲ್ಲಿರುವ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳ ಆಧ್ಯಾತ್ಮಿಕ ಸಮಾಜ ಸೇವೆಯು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಶನಿವಾರ ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನ ಸಾಂಸ್ಕೃತಿಕ ಭವನದಲ್ಲಿ ಜರುಗಿದ ರಿಯಾಲಿಟಿ ಬುಕ್ ಆಫ್ ವರ್ಲ್ಡ್‌ ರಿಕಾರ್ಡ್‌ನಲ್ಲಿ ಗಿನ್ನಿಸ್ ದಾಖಲೆ ಸಮಾರಂಭದಲ್ಲಿ ಶ್ರೀಗಳಿಗೆ ಗಿನ್ನಿಸ್ ದಾಖಲೆ ಸಮಿತಿ ಪದಾಧಿಕಾರಿಗಳಾದ ಡಾ.ಹರ್ಷವರ್ಧನ, ಡಾ.ವಂದನಾ ಡಿಸೋಜ, ಡಾ.ಮಹೇಶಾನಂದಜಿ, ಡಾ.ನಂಬಿ ರಾಜ್, ಡಾ.ವೇದಾ ದೀಕ್ಷಿತ, ಡಾ.ರುಭೇರಿ ಇಮ್ಯಾನುಯೆಲ್‌, ಡೆಪ್ಯುಟಿ ಕಮಿಷನರ್ ಡಾ.ಶ್ರೀನಿವಾಸ, ಡಾ.ಎ.ಪಿ.ಶ್ರೀನಾಥ, ಡಾ.ಅನಂತಮೂರ್ತಿ ಕುಪ್ಪುಸ್ವಾಮಿ, ಡಾ.ಸೆಲ್ವನ್ ಸೇರಿದಂತೆ ಅನೇಕ ಗಿನ್ನಿಸ್ ದಾಖಲೆಯ ಪ್ರಶಸ್ತಿ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಕೊಲ್ಹಾರ

ಹಳೆ ಕೊಲ್ಹಾರ ಬಳಿಯ ಕೃಷ್ಣಾ ನದಿ ತಟದಲ್ಲಿರುವ ಶೀಲವಂತ ಹಿರೇಮಠದ ಡಾ.ಕೈಲಾಸನಾಥ ಶ್ರೀಗಳ ಆಧ್ಯಾತ್ಮಿಕ ಸಮಾಜ ಸೇವೆಯು ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದೆ. ಶನಿವಾರ ಬೆಂಗಳೂರು ಮಲ್ಲೇಶ್ವರಂನ ಸೇವಾ ಸದನ ಸಾಂಸ್ಕೃತಿಕ ಭವನದಲ್ಲಿ ಜರುಗಿದ ರಿಯಾಲಿಟಿ ಬುಕ್ ಆಫ್ ವರ್ಲ್ಡ್‌ ರಿಕಾರ್ಡ್‌ನಲ್ಲಿ ಗಿನ್ನಿಸ್ ದಾಖಲೆ ಸಮಾರಂಭದಲ್ಲಿ ಶ್ರೀಗಳಿಗೆ ಗಿನ್ನಿಸ್ ದಾಖಲೆ ಸಮಿತಿ ಪದಾಧಿಕಾರಿಗಳಾದ ಡಾ.ಹರ್ಷವರ್ಧನ, ಡಾ.ವಂದನಾ ಡಿಸೋಜ, ಡಾ.ಮಹೇಶಾನಂದಜಿ, ಡಾ.ನಂಬಿ ರಾಜ್, ಡಾ.ವೇದಾ ದೀಕ್ಷಿತ, ಡಾ.ರುಭೇರಿ ಇಮ್ಯಾನುಯೆಲ್‌, ಡೆಪ್ಯುಟಿ ಕಮಿಷನರ್ ಡಾ.ಶ್ರೀನಿವಾಸ, ಡಾ.ಎ.ಪಿ.ಶ್ರೀನಾಥ, ಡಾ.ಅನಂತಮೂರ್ತಿ ಕುಪ್ಪುಸ್ವಾಮಿ, ಡಾ.ಸೆಲ್ವನ್ ಸೇರಿದಂತೆ ಅನೇಕ ಗಿನ್ನಿಸ್ ದಾಖಲೆಯ ಪ್ರಶಸ್ತಿ ನೀಡಿ ಗೌರವಿಸಿದರು.ಶ್ರೀಗಳ ದಾಖಲೆ ಏನು?..ಶ್ರೀಗಳು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸಂತರ ಸಮಾವೇಶದಲ್ಲಿ ಸಂಪೂರ್ಣ ಶರಣರ ಚರಿತ್ರೆಯನ್ನೊಳಗೊಂಡ ಜಗಜ್ಯೋತಿ ಬಸವ ಪುರಾಣ 48 ನಿಮಿಷದಲ್ಲಿ ಪಾರಾಯಣ ಮಾಡಿದ್ದು ವಿಶ್ವ ದಾಖಲೆಯಾಗಿದೆ. ವಿಶ್ವ ಶಾಂತಿಗಾಗಿ ಹಾಗೂ ನಾಡ ಸಮೃದ್ಧಿಗಾಗಿ ಪ್ರತಿದಿನ ಒಂದು ಕೋಟಿ ಜಪಾರಾಧನೆ ಅನುಷ್ಠಾನ 32 ದಿನ ಆಧ್ಯಾತ್ಮಿಕ ಸಾಧನೆ ಮಾಡಿದ್ದು ಗಿನ್ನಿಸ್ ದಾಖಲೆಯಾಗಿದೆ.

ಪ್ರಶಸ್ತಿಗಳು: ಇವರ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆಯನ್ನು ಗುರ್ತಿಸಿ ಐದು ರಾಷ್ಟ್ರೀಯ ಪ್ರಶಸ್ತಿ, ಹದಿನೈದು ರಾಜ್ಯ ಪ್ರಶಸ್ತಿ, ಇಂಡಿಯನ್ ಆಯ್ಕಾನ್ ಆವಾರ್ಡ್‌ ಸಿಕ್ಕಿವೆ. ಶ್ರೀಗಳ ಆಧ್ಯಾತ್ಮಿಕ ಸಾಮಾಜಿಕ ಸೇವೆಯನ್ನು ಪರಿಗಣಿಸಿ ರಿಯಾಲಿಟಿ ಬುಕ್ ಆಫ್‌ ವರ್ಲ್ಡ್‌ ರಿಕಾರ್ಡ್‌ನಲ್ಲಿ ಗಿನ್ನಿಸ್ ದಾಖಲೆಯಾಗಿದೆ. ಕೊಲ್ಹಾರ ಪಟ್ಟಣದ ಗುರು ಹಿರಿಯರ, ಸದ್ಭಕ್ತರು, ಪ್ರಜ್ಞಾವಂತರ ಮಾರ್ಗದರ್ಶನವೇ ನನಗೆ ದಾರಿ ದೀಪ ಎಂದು ಹರ್ಷವ್ಯಕ್ತಪಡಿಸಿದ್ದಾರೆ.ಡಾ.ಕೈಲಾಸನಾಥ ಶ್ರೀಗಳು ಪಟ್ಟಣದ ಶೀಲವಂತ ಹಿರೇಮಠದ ಮುರುಗಯ್ಯಸ್ವಾಮಿ, ಪಾರ್ವತಮ್ಮ ದಂಪತಿ ಒಂಬತ್ತನೇ ಮಗನಾಗಿ ಜನಿಸಿದರು. ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸವನ್ನು ಕೊಲ್ಹಾರದಲ್ಲಿ ಪಡೆದು ಪದವಿ ಶಿಕ್ಷಣವನ್ನು ಹುಬ್ಬಳ್ಳಿಯಲ್ಲಿ ಪೂರೈಸಿದ್ದಾರೆ. ಸಂಸ್ಕೃತದಲ್ಲಿ ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪಡೆದಿದ್ದು, ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...