ಅಂದರ ಬಾಳಿನ ಬೆಳಕಾದ ಡಾ.ಕನಕರಡ್ಡಿ

KannadaprabhaNewsNetwork | Published : Oct 9, 2024 1:42 AM

ಸಾರಾಂಶ

ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು, ಅದರ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ನಂದಗಾಂವ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಪ್ಪ ಹೊಸೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು, ಅದರ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ನಂದಗಾಂವ ಗ್ರಾಮ ಪಂಚಾಯತಿ ಅಧ್ಯಕ್ಷ ರಂಗಪ್ಪ ಹೊಸೂರ ಹೇಳಿದರು.

ನಂದಗಾಂವ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ವಿಶ್ವ ಕಣ್ಣಿನ ದಿನಾಚರಣೆ ಹಾಗೂ ದಿ.ತಂದೆ ಡಾ.ವೆಂಕಪ್ಪ ಕನಕರಡ್ಡಿ ಮತ್ತು ದಿ.ತಾಯಿ ರಾಜೇಶ್ವರಿ ಸ್ಮರಣಾರ್ಥ ಕನಕರಡ್ಡಿ ಪರಿವಾರದ ವಿರಿಂಚಿ ಆಸ್ಪತ್ರೆ ವತಿಯಿಂದ ಆಯೋಜಿಸಿದ ಉಚಿತ ನೇತ್ರ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಸಂದೀಪ ಕನಕರಡ್ಡಿ ಮತ್ತು ಡಾ.ಸೌಮ್ಯ ಕನಕರಡ್ಡಿಯವರು ಇಂಥ ಉಚಿತ ಶಿಬಿರಗಳ ಮೂಲಕ ಗ್ರಾಮೀಣ ಜನರ ಕಣ್ಣು ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಅಂದರ ಬಾಳಿನ ಬೆಳಕಾಗಿ ಪರಿಣಮಿಸುತ್ತಿದ್ದಾರೆ ಎಂದರು.ಡಾ.ಸಂದೀಪ ಕನಕರಡ್ಡಿ ಮತ್ತು ಶ್ರೀನಿವಾಸ ಕನಕರಡ್ಡಿಯವರು ತಮ್ಮ ತಂದೆಯ ಕನಸ್ಸನ್ನು ನನಸು ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅವರ ತಂದೆ-ತಾಯಿ ಸವಿನೆನಪಿಗಾಗಿ ಗ್ರಾಮೀಣ ಭಾಗದ ಜನರ ಸೇವೆ ಮಾಡುತ್ತ ಬಂದಿದ್ದು ಮತ್ತು ಪ್ರತಿ ವರ್ಷ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಉಚಿತ ನೇತ್ರ ಚಿಕಿತ್ಸೆ ಶಿಬಿರ ಏರ್ಪಡಿಸಿ ಜನರಿಗೆ ನೇರವಾಗುವುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದು ತಿಳಿಸಿದರು.ಶ್ರೀನಿವಾಸ ಕನಕರಡ್ಡಿ ಮಾತನಾಡಿ, ನಮ್ಮ ಮಾತೃ ಭೂಮಿ ನಂದಗಾಂವ ಗ್ರಾಮದ ಋಣ ತೀರಿಸುವ ಸಣ್ಣ ಪ್ರಯತ್ನವಾಗಿ ಸಾಗಿದ್ದೇವೆ. ಅದಕ್ಕೆ ನಮ್ಮ ಜನರ ಪ್ರೀತಿ, ವಿಶ್ವಾಸ ನಮ್ಮ ಮೇಲಿದೆ. ಇಂದು ವಿಶ್ವದಲ್ಲಿ ಸುಮಾರು 2.2 ಶತಕೋಟಿ ಕೋಟಿ ಜನ ಹಲವು ರೀತಿಯ ದೃಷ್ಟಿ ದೌರ್ಬಲ್ಯದಿಂದ ಬಳಲುತ್ತಿದ್ದಾರೆ. ದೃಷ್ಟಿ ದೌರ್ಬಲ್ಯವು ಎಲ್ಲ ವಯಸ್ಸಿನ ಜನರ ಮೇಲೆ ಪರಿಣಾಮ ಬಿರುತ್ತದೆ. ಬಡಜನರ ಒಳತಿಗಾಗಿ ನಮ್ಮ ಕುಟುಂಬ ಉಚಿತ ಶಿಬಿರ ಹಮ್ಮಿಕೊಳ್ಳುವ ಮೂಲಕ ನಮ್ಮ ಭಾಗದ ಜನರು ಕಣ್ಣಿನ ದೋಷದಿಂದ ಬಳಲಬಾರದು ಎಂಬುವುದು ನಮ್ಮ ಶಿಬಿರದ ಉದ್ದೇಶವಾಗಿದೆ ಎಂದರು. ಮಕ್ಕಳ ತಜ್ಞ ಡಾ.ಆನಂದ ಕನಕರಡ್ಡಿ ಮಾತನಾಡಿ, ಉಚಿತ ನೇತ್ರ ಚಿಕ್ಸಿತಾ ಶಿಬಿರವು ತಂದೆ ಹುಟ್ಟೂರಿನ ಮೇಲಿನ ಪ್ರೀತಿಯನ್ನು ಎತ್ತಿ ತೋರಿಸುತ್ತದೆ. ಈ ದಿನಮಾನಗಳಲ್ಲಿ ಇಂತಹ ನೇತ್ರ ಚಿಕಿತ್ಸಾ ಶಿಬಿರಗಳ ಅವಶ್ಯಕತೆಗಳಿದ್ದು, ಇದನ್ನು ಆಯೋಜಿಸಿದ ಕನಕರಡ್ಡಿ ಬಂಧುಗಳ ಕಾರ್ಯಕ್ರಮ ದೇವರ ಪ್ರೀತಿಗೂ ಪಾತ್ರವಾಗುವಂತಹದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಪಿಕೆಪಿಎಸ್ ಸಂಘದ ಮಾಜಿ ಅಧ್ಯಕ್ಷ ಸಂಜು ಬಾರಕೋಲ, ಭೀಮಶಿ ಹೊಸೂರು, ವೆಂಕಣ್ಣ ಗೊಬ್ಬರದ, ಯಲ್ಲಪ್ಪ ಉಪ್ಪಾರ, ಡಾ.ಸಂದೀಪ ಕನಕರಡ್ಡಿ, ಡಾ.ನೇತ್ರತಜ್ಞೆ ಡಾ.ಸೌಮ್ಯಾ ಕನಕರಡ್ಡಿ, ಮಲ್ಲಪ್ಪ ಗುರವ, ಬಸವರಾಜ ಹ್ಯಾಗಾಡಿ, ಯಲ್ಲಪ್ಪ ಉಪ್ಪಾರ, ಮಹೇಶ ಮಣ್ಣಯ್ಯನವರಮಠ, ಮಹೇಶ ಆರಿ, ಮಹಾದೇವ ಮಣ್ಣನ್ನನವರ, ಪುಟ್ಟಪ್ಪ ಪೂಜೇರಿ, ಮಹದೇವ ನಂದಿಗೋಣಿ, ಮಹಾಂತೇಶ ಬುರುಡ ಇದ್ದರು.ಸುಮಾರು 79ಕ್ಕೂ ಅಧಿಕ ಜನ ತಪಾಸಣೆಗೆ ಒಳಗಾಗಿ 19 ಜನರಗಿಗೆ ಶಸ್ತ್ರ ಚಿಕಿತ್ಸೆ ಮಾಡಲು ತಿಳಿಸಲಾಗಿದೆ. ಕಾರ್ಯಕ್ರಮವನ್ನು ಶಿಕ್ಷಕರಾದ ನರನಗೌಡ ಉತ್ತಂಗಿ ನಿರೂಪಿಸಿ, ವಂದಿಸಿದರು.

Share this article