ಕನ್ನಡಪ್ರಭ ವಾರ್ತೆ ಕೋಲಾರವೈದ್ಯಕೀಯ ವೃತ್ತಿಯೊಂದಿಗೆ ಹಲವಾರು ಸಂಘ ಸಂಸ್ಥೆಗಳೊಂದಿಗೆ ಒಡನಾಟದಿಂದ ಇದ್ದವರು ಡಾ.ಮೌನಿ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಜೆ.ಬಾಬು ಮೌನಿ ಅಭಿಪ್ರಾಯಪಟ್ಟರು.ನಗರದ ರೋಟರಿ ಭವನದಲ್ಲಿ ಡಾ.ಮೌನಿ ೮೧ನೇ ಜನ್ಮ ದಿನದ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ಕವಿ ಕಾವ್ಯ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.ಸಾಹಿತ್ಯದ ಬಗ್ಗೆ ಅಭಿರುಚಿ
ಡಾ.ಮೌನಿ ಯವರಿಗೆ ಸಾಹಿತ್ಯದ ಆಸಕ್ತಿ ಬಹಳ ಇತ್ತು. ವೈದ್ಯಕೀಯ ವೃತ್ತಿಯೊಂದಿಗೆ ಬಿಡುವಿನ ವೇಳೆಯಲ್ಲಿ ಪ್ರವೃತ್ತಿಯಾಗಿ ಸಾಹಿತ್ಯದ ಪ್ರಕಾರಗಳನ್ನು ಗುರುತಿಸುವಲ್ಲಿ ಮಾಡಿದ ಸಾಧನೆ ಶ್ಲಾಘನೀಯ. ಜೊತೆಗೆ ಇರುವವರನ್ನು ಬೆಳೆಸುವ ಒಳ್ಳೆಯ ಗುಣದ ವ್ಯಕ್ತಿತ್ವವನ್ನು ಪಡೆದಿದ್ದರು. ನಾನು ನೋಡಿದಂತೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡು ಯುವಕರನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯೋನ್ಮುಖರಾಗುತ್ತಿದ್ದರು ಎಂದರು. ಹಿರಿಯ ಉಪನ್ಯಾಸಕ ಡಾ.ನಾಗಾನಂದ ಕೆಂಪರಾಜ್ ಮಾತಾನಾಡಿ, ಮೌನಿ ಶಿಸ್ತಿನ ಸಿಪಾಯಿಯಾಗಿದ್ದವರು. ಸಮಯದ ಪ್ರಜ್ಞೆ ಅವರಲ್ಲಿ ಯಾವಾಗಲೂ ಜಾಗೃತವಾಗಿತ್ತು. ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಬಹುದೊಡ್ಡ ಸಾಹಿತಿಗಳಾದ ದೊಡ್ಡ ರಂಗೇಗೌಡ, ಎಚ್.ಎಸ್.ವೆಂಕಟೇಶ್ ಮೂರ್ತಿ, ಡುಂಡಿರಾಜ, ಬಿ.ಆರ್.ಲಕ್ಷ್ಮಣರಾವ್‌ರನ್ನು ಕರೆಸಿ ಅಖಿಲ ಭಾರತ ಮಟ್ಟದ ಕಾರ್ಯಕ್ರಮ ಮಾಡಿದ್ದು ಅವರ ಸಾಹಿತ್ಯದ ಕೊಡುಗೆಗೆ ಹಿಡಿದ ಕೈಗನ್ನಡಿ ಎಂದು ಬಣ್ಣಿಸಿದರು.ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ನಾರಾಯಣಪ್ಪ, ಪ್ರಸಾದ್ ಮೌನಿ, ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ರಾಮಚಂದ್ರಪ್ಪ, ಜಿ.ಶ್ರೀನಿವಾಸ್, ಟಿ ಸುಬ್ಬರಾಮಯ್ಯ, ಅ.ಕೃ ಸೋಮಶೇಖರ್ ಇದ್ದರು.ಕವಿಗಳಿಂದ ಕಾವ್ಯ ವಾಚನ
ಕವಿ ಕಾವ್ಯ ಸಂಭ್ರಮದಲ್ಲಿ ಕವಿಗಳಾದ ರಾಧ ಡಾ.ಪ್ರಕಾಶ್, ಜಿ.ಟಿ ರಾಮಚಂದ್ರ, ವೆಂಕಟೇಶ್ ಕುಂದರಸನಹಳ್ಳಿ, ಮಲ್ಲಿಕಾರ್ಜುನ ಶೆಟ್ಟರ್, ಮುರುಳಿ ಗಾಜಗ, ಶಾರದಮ್ಮ ಮುದಿಮಡುಗು, ಅಶೋಕ್ ಚಿಂತಾಮಣಿ, ಚಂದ್ರಶೇಖರ್ ಶ್ರೀನಿವಾಸಪುರ, ಬೆಮೆಲ್ ಶ್ರೀನಿವಾಸ, ಮಾಚಿ ನಾಗರಾಜು, ಪಿ.ಎಂ ಕೃ?ಪ್ಪ, ವಿಕ್ರಂ ಶ್ರೀನಿವಾಸ್, ರಾಜಕುಮಾರ್ ಕಾವ್ಯ ವಾಚನ ಮಾಡಿದರು. ನಿವೃತ್ತ ಎ.ಎಸ್‌ಐ ರವೀಂದ್ರನಾಥ್ ಇದ್ದರು. ಡಾ.ಮೌನಿ ಸ್ಮರಣಾರ್ಥ ಜಿಕೆವಿಕೆಯ ಪ್ರಾಧ್ಯಾಪಕ ಡಾ.ಎಸ್.ಎನ್.ಉದಯಕುಮಾರ್ ಹಾಗೂ ಕೋಲಾರ ಸರ್ಕಾರಿ ಬಾಲಕರ ಕಾಲೇಜಿನ ಪ್ರಾಧ್ಯಾಪಕ ಡಾ.ಮುನಿರಾಜ್ ಅವರನ್ನು ಸನ್ಮಾನಿಸಲಾಯಿತು. ಡಾ.ಶರಣಪ್ಪ ಗಬ್ಬೂರು, ಬಿ.ಶಿವಕುಮಾರ್ ಸ್ವಾಗತಿಸಿ, ಟಿ ಸುಬ್ಬರಾಮಯ್ಯ ಪ್ರಸ್ತಾವಿಕವಾಗಿ ಮಾತನಾಡಿದರು.