ಸೆ.೧೩ರಂದು ಡಾ.ಪಿ.ಬೋರೇಗೌಡ ಕೃತಿಗಳ ಲೋಕಾರ್ಪಣೆ

KannadaprabhaNewsNetwork |  
Published : Sep 04, 2025, 01:00 AM IST
(ಡಾ.ಪಿ.ಬೋರೇಗೌಡ- ಅವರ ಹೆಸರಿನಲ್ಲೇ ಫೋಟೋ ಇದೆ) | Kannada Prabha

ಸಾರಾಂಶ

ಮಾಣಿಕ್ಯ ಫಾರ್ಮ್ ಆಶ್ರಯದಲ್ಲಿ ಸರ್ಕಾರದ ವಿಶ್ರಾಂತ ವಿಶೇಷ ಕಾರ್ಯದರ್ಶಿ ಡಾ.ಪಿ.ಬೋರೇಗೌಡ ಅವರು ರಚಿಸಿರುವ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಸೆ.೧೩ರಂದು ಬೆಳಗ್ಗೆ ೧೦.೩೦ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಣಿಕ್ಯ ಫಾರ್ಮ್ ಆಶ್ರಯದಲ್ಲಿ ಸರ್ಕಾರದ ವಿಶ್ರಾಂತ ವಿಶೇಷ ಕಾರ್ಯದರ್ಶಿ ಡಾ.ಪಿ.ಬೋರೇಗೌಡ ಅವರು ರಚಿಸಿರುವ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಸೆ.೧೩ರಂದು ಬೆಳಗ್ಗೆ ೧೦.೩೦ಕ್ಕೆ ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನಾ ಸಮಿತಿಯ ಪ್ರೊ.ಜಿ.ಟಿ.ವೀರಪ್ಪ ತಿಳಿಸಿದರು.

ಅಧ್ಯಕ್ಷತೆಯನ್ನು ಕರ್ನಾಟಕ ಮುಕ್ತ ವಿವಿ ಮಾಜಿ ಕುಲಪತಿ ಡಾ.ಎನ್.ಎಸ್.ರಾಮೇಗೌಡ ಅಧ್ಯಕ್ಷತೆ ವಹಿಸುವರು. ವಿಧಾನಸಭೆ ಸಭಾಪತಿ ಯು.ಟಿ.ಖಾದರ್ ಅತಿಥಿಗಳಾಗಿ ಆಗಮಿಸುವರು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೋರೇಗೌಡರು ರಚಿಸಿದ ಗ್ರೌಂಡ್ ಟು ಗೌರ್ನೆನ್ಸ್, ಶೂನ್ಯದಿಂದ ಶಿಖರದೆಡೆಗೆ, ಮಾಣಿಕ್ಯ ಫಾರ್ಮ್, ಮಾಣಿಕ್ಯ ಗ್ರೀನ್ ಪಾಥ್‌ವೇಸ್, ಹಣ್ಣುಗಳ ತೋಟ ಕೃತಿಗಳನ್ನು ಬಿಡುಗಡೆಗೊಳಿಸಲಾಗುವುದು. ಕೃತಿಗಳ ಕುರಿತು ಎಚ್‌ಸಿಜಿ ಆಸ್ಪತ್ರೆಗಳ ಸಮೂಹ ಛೇರ್ಮನ್ ಡಾ.ಬಿ.ಎಸ್.ಅಜಯ್‌ಕುಮಾರ್, ಹೃದಯತಜ್ಞ ಡಾ.ಜಾವೆದ್ ನಯೀಮ್, ಜೆಎಸ್‌ಎಸ್ ವಿವಿ ಪ್ರೊಚಾನ್ಸಲರ್ ಡಾ.ಸುರೇಶ್, ಆದಿ ಚುಂಚನಗಿರಿ ವಿವಿ ಮಾಜಿ ಉಪಕುಲಪತಿ ಡಾ.ಎಂ.ಎ.ಶೇಖರ್, ತೋಟಗಾರಿಕೆ ವಿವಿ ಮಾಜಿ ಕುಲಪತಿ ಡಾ.ಎಂ.ಎಲ್.ಮಹೇಶ್ವರ್, ಕುಲಪತಿ ಡಾ.ವಿಷ್ಣುವರ್ಧನ, ಸಾವಯವ ಕೃಷಿಕ ಸ್ವಾಮಿ ಆನಂದ್ ಮಾತನಾಡುವರು ಎಂದರು.

ಡಾ.ಪಿ.ಬೋರೇಗೌಡರು ಬನ್ನೂರು ತಾಲೂಕು ಕೇತುಪುರದವರು. ೧೯೮೦ರಲ್ಲಿ ಪಿಎಚ್‌.ಡಿ ಪದವಿ ಗಳಿಸಿ ಮೈಸೂರು ವಿವಿಯಲ್ಲಿ ಅಧ್ಯಾಪಕರಾದರು. ೧೯೮೩ರಲ್ಲಿ ಕೆಎಎಸ್ ಪದವಿ ಪಡೆದು ಸರ್ಕಾರಿ ಸೇವೆಗೆ ಸೇರಿದರ. ಗುಲ್ಬರ್ಗ ವಿವಿ ಕುಲಸಚಿವರಾಗಿ ಶೈಕ್ಷಣಿಕ೦ ಅಭಿವೃದ್ಧಿ ಕಾರ್ಯ ಮಾಡಿದರು. ಸುವರ್ಣ ಆರೋಗ್ಯ ಟ್ರಸ್ಟ್ ನಿರ್ದೇಶಕರಾಗಿ ಹಿಂದುಳಿದ ವರ್ಗದ ಜನರಿಗೆ ಗುಣಮಟ್ಟದ ಆರೋಗ್ಯ ದೊರಕುವಂತೆ ಮಾಡಿದರು. ಆಯುಷ್ಮಾನ್ ಭಾಗ್ಯ ಕಾರ್ಯದಲ್ಲಿ ಕೆಲಸ ಮಾಡಿದರು. ವಾಜಪೇಯಿ ಆರೋಗ್ಯ ಯೋಜನೆ ತಂದು ದೇಶದ ಬೇರೆ ರಾಜ್ಯಗಳೂ ಅದನ್ನು ಅನುಸರಿಸುವಂತೆ ಮಾಡಿದರು ಎಂದು ಬಣ್ಣಿಸಿದರು.

ನಿವೃತ್ತಿಯ ನಂತರವೂ ಕೇತುಪುರ ಗ್ರಾಮೀಣ ಪ್ರದೇಶದಲ್ಲಿ ಮರನೆಟ್ಟು ಜಲಮೂಲ ಸಂರಕ್ಷಣೆಯೊಂದಿಗೆ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಕೇತುಪುರ ಗ್ರಾಮೀಣ ಅಭಿವೃದ್ಧಿ ಸಮಿತಿ ರಚಿಸಿ ಗ್ರಾಮದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಿವೃತ್ತಿ ಕಾಲದಲ್ಲಿ ತಮ್ಮ ಅನುಭವವನ್ನು ಬರಹ ರೂಪದಲ್ಲಿ ಕೃತಿಗಳನ್ನು ರಚಿಸಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕೆ.ಬೋರಯ್ಯ, ಧನುಕುಮಾರ್, ಗೋವಿಂದರಾಜು, ಕೆ.ಎಂ.ಕೃಷ್ಣೇಗೌಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುದುರೆಗಳಲ್ಲಿ ಗ್ಲ್ಯಾಂಡರ್ಸ್ ರೋಗ ಪತ್ತೆ: ಟರ್ಫ್ ಕ್ಲಬ್‌ ಸುತ್ತ ಪ್ರಾಣಿ ಸಂಚಾರ ನಿರ್ಬಂಧ
ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ