ದಾಬಸ್‍ಪೇಟೆ: ಕನ್ನಡ ನಾಡಿನ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೆ ಅನನ್ಯ ಸ್ಥಾನವಿದೆ. ಈ ವಚನ ಸಾಹಿತ್ಯ ಎಂಬ ಜ್ಞಾನದ ಭಂಡಾರವನ್ನು ಕಾಲದ ಗರ್ಭದಿಂದ ಹೊರತೆಗೆದು,ಇಂದಿನ ಆಧುನಿಕ ಸಮಾಜಕ್ಕೆ ಉಣಬಡಿಸಿದ ಕೀರ್ತಿ ವಚನ ಪಿತಾಮಹ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ (ಫ.ಗು.ಹಳಕಟ್ಟಿ) ಅವರಿಗೆ ಸಲ್ಲುತ್ತದೆ ಎಂದು ಕಂಚುಗಲ್ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ತಿಳಿಸಿದರು.
ಸಮಾಧಾನ ಮಠದ ಉಸ್ತುವಾರಿ ಮಹೇಶ್ ಮಾತನಾಡಿ, ಹಳಕಟ್ಟಿರವರು ವಚನಗಳನ್ನು ಮುದ್ರಿಸಿ ಜನರಿಗೆ ತಲುಪಿಸಲು ಅವರು ತಮ್ಮ ಸ್ವಂತ ಮನೆ, ಆಸ್ತಿಯನ್ನು ಮಾರಿದ ಮಹಾತ್ಮರು. ಆರ್ಥಿಕ ಸಂಕಷ್ಟದ ನಡುವೆಯೂ ‘ಹಿತೈಷಿ’ ಮುದ್ರಣಾಲಯ ಸ್ಥಾಪಿಸಿ, ಶರಣರ ವಚನ ಸಂಪುಟಗಳನ್ನು ಪ್ರಕಟಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದರು.
ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಗೋವಿಂದಯ್ಯ ಮಾತನಾಡಿ, ಹಳಕಟ್ಟಿಯವರು ಶರಣರ ತತ್ವ ಪ್ರಸಾರಕ್ಕಾಗಿ ‘ಶಿವಾನುಭವ’ ಎಂಬ ಸಂಶೋಧನಾತ್ಮಕ ಪತ್ರಿಕೆಯನ್ನು ದಶಕಗಳ ಕಾಲ ಯಶಸ್ವಿಯಾಗಿ ನಡೆಸಿ ಸಮಾಜದ ಏಳಿಗೆಗೆ ಬೇಳಕು ನೀಡಿದ ಧೀಮಂತರು ಎಂದು ಹೇಳಿದರು.ಶ್ರೀಮಠದ ಹಿರಿಯ ಭಕ್ತ ನಾಗರಾಜ ಕೋರಿಶೆಟ್ಟಿ ಮಾತನಾಡಿ, ಜುಲೈ ತಿಂಗಳು 29ರಂದು ಸಮಾಧಾನ ಮಠದಲ್ಲಿ ಗುರುಗಳ ಅಪ್ಪಣೆ ಮೇರೆಗೆ ಅರ್ಥಪೂರ್ಣ ಗುರುಪೂರ್ಣಿಮೆಯನ್ನು ಸಂಕಲ್ಪ ದೀಪೋತ್ಸವದ ಹೆಸರಿನಲ್ಲಿ ಆಚರಿಸಲಾಗುತ್ತಿದ್ದು ಶ್ರೀಮಠದ ಗುರು ಬಂಧುಗಳು ಮತ್ತು ಸುತ್ತಮತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸೋಂಪುರ ಹೋಬಳಿಯ ಕೆರೆಕತ್ತಿಗನೂರಿನ ಮೌನ ತಪಸ್ವಿ ಶ್ರೀ ಜಡೆಯ ಶಾಂತಲಿಂಗ ಸ್ವಾಮೀಜಿ ಸಮಾಧಾನ ಮಠದಲ್ಲಿ ಫ.ಗು.ಹಳಕಟ್ಟಿಯವರ ಜನ್ಮೋತ್ಸವ ಮತ್ತು ಗುರುಪೂರ್ಣಿಮೆ ಪೂರ್ವಭಾವಿ ಸಭೆಯಲ್ಲಿ ಕಂಚುಗಲ್ ಬಂಡೆಮಠದ ಶ್ರೀ ಮಹಾಲಿಂಗ ಸ್ವಾಮೀಜಿ ಮಾತನಾಡಿದರು.