ಡಾ. ಪಂಚಾಕ್ಷರಿ ಹಿರೇಮಠ ಪ್ರಾಮಾಣಿಕತೆಯ ಧ್ವನಿ

KannadaprabhaNewsNetwork |  
Published : Jan 09, 2026, 02:15 AM IST
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಪಂಚಾಕ್ಷರಿ ಹಿರೇಮಠ ಅವರ ದತ್ತಿಯಲ್ಲಿ ಆತ್ಮಸಖಿ ತುಂಬು ಹೃದಯ ಬಟ್ಟಲನ ಹಾಗೂ ಕಾಶ್ಮೀರದ ಮಹಾಯೋಗಿನಿ ಲಲ್ಲೇಶ್ವರಿ ಕೃತಿಗಳ ಲೋಕಾರ್ಪಣೆ. | Kannada Prabha

ಸಾರಾಂಶ

ಡಾ. ಪಂಚಾಕ್ಷರಿ ಹಿರೇಮಠ ಭಾವಜೀವಿ. ಸಂವೇದನಾಶೀಲರು. ಭಕ್ತಿಭಾವದಿಂದ ಬದುಕಿದವರು. ಪ್ರಬಂಧ, ಕಥೆ, ವಿಮರ್ಶೆ ಹಾಗೂ ಅನುವಾದ.. ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸಾಹಿತ್ಯ ಕೃಷಿ ಮಾಡಿದ ಮೇರು ವಿದ್ವಾಂಸರು.

ಧಾರವಾಡ:

ವಿದ್ಯಾವಾಚಸ್ಪತಿ ಎಂದೇ ಹೆಸರು ಗಳಿಸಿದ್ದ ಡಾ. ಪಂಚಾಕ್ಷರಿ ಹಿರೇಮಠ ಬಹುಭಾಷಾ ವಿಶಾರದರು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದ ಮಹಾವಿದ್ವಾಂಸರು. ಅವರು ಮಾನವೀಯತೆ ಹಾಗೂ ಪ್ರಾಮಾಣಿಕತೆಯ ಧ್ವನಿಯಾಗಿದ್ದರು ಎಂದು ಸಾಹಿತಿ ಡಾ. ಎಸ್.ಪಿ. ಪದ್ಮಪ್ರಸಾದ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಡಾ. ಪಂಚಾಕ್ಷರಿ ಹಿರೇಮಠ ಅವರ 93ನೇ ಜನ್ಮದಿನದ ಪ್ರಯುಕ್ತ ಡಾ. ಪಂಚಾಕ್ಷರಿ ಹಿರೇಮಠ ಅವರ “ಆತ್ಮಸಖಿ ತುಂಬು ಹೃದಯ ಬಟ್ಟಲನ” ಹಾಗೂ “ಕಾಶ್ಮೀರದ ಮಹಾಯೋಗಿನಿ ಲಲ್ಲೇಶ್ವರಿ” ಎರಡು ಕೃತಿ ಲೋಕಾರ್ಪಣೆ ಮಾಡಿದ ಅವರು, ಡಾ. ಪಂಚಾಕ್ಷರಿ ಹಿರೇಮಠ ಭಾವಜೀವಿ. ಸಂವೇದನಾಶೀಲರು. ಭಕ್ತಿಭಾವದಿಂದ ಬದುಕಿದವರು. ಪ್ರಬಂಧ, ಕಥೆ, ವಿಮರ್ಶೆ ಹಾಗೂ ಅನುವಾದ.. ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸಾಹಿತ್ಯ ಕೃಷಿ ಮಾಡಿದ ಮೇರು ವಿದ್ವಾಂಸರು. ಪ್ರೀತಿಯೇ ಅವರ ಸಾಹಿತ್ಯದ ಜೀವಾಳವಾಗಿತ್ತು. ಅವರು ಶರಣ್ಯ ಭಾವ ಹಾಗೂ ಶರಣ ಭಾವದವರು ಎಂದರು.

ಹೈದರಾಬಾದ್‌ ಕರ್ನಾಟಕದ ವಿಮೋಚನೆ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹಾನ್ ದೇಶಭಕ್ತರು ಹೌದು. ಅವರ ಬರಹಗಳಲ್ಲಿ ಪ್ರೀತಿ, ವಿನಯತೆ, ಸೌಹಾರ್ದತೆ, ನೋವು, ಕುಟುಂಬವತ್ಸಲತೆ, ಸರಳತೆ, ಸತ್ಯನಿಷ್ಠೆಗಳಿವೆ. ಅವರು ತಮ್ಮ ನಡೆ-ನುಡಿಗಳಲ್ಲಿ ಇನ್ನೂ ಜೀವಂತವಾಗಿದ್ದಾರೆ. ಸತ್ಯ ಹಾಗೂ ನೈತಿಕತೆಗಳೇ ಅವರ ಜೀವನದ ಉಸಿರಾಗಿದ್ದವು ಎಂದು ಹೇಳಿದರು. ಹಿರಿಯ ಕಥೆಗಾರ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಮಾನತಾಡಿದರು. ಮೃತ್ಯುಂಜಯ ಹಿರೇಮಠ ದತ್ತಿ ಕುರಿತು ಮಾತನಾಡಿದರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಶಂಕರ ಕುಂಬಿ, ಲಿಂಗಯ್ಯ ಹಿರೇಮಠ, ಡಾ. ಜಿನದತ್ತ ಹಡಗಲಿ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಸತೀಶ ತುರಮರಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಭಾಗ್ಯಗಳಿಗಿಂತ ಆರೋಗ್ಯ ಭಾಗ್ಯ ಬಹಳ ಮುಖ್ಯ-ಗಾಜೀಗೌಡ್ರ
ಮನರೇಗಾ ಮರುನಾಮಕರಣದಿಂದ ಬಡವರ ಅನ್ನದ ಬಟ್ಟಲಿಗೆ ಕನ್ನ