ನಾಮಪತ್ರ: ಇಂದು ಡಾ.ಪ್ರಭಾ ಭರ್ಜರಿ ರೋಡ್ ಶೋ- ಜಿಲ್ಲಾಧ್ಯಕ್ಷ ಮಂಜಪ್ಪ

KannadaprabhaNewsNetwork | Published : Apr 18, 2024 2:17 AM

ಸಾರಾಂಶ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಏ.18ರಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಏಕಕಾಲಕ್ಕೆ ಎರಡೂ ಕಡೆಯಿಂದ ಶುರುವಾಗುವ ಮೆರವಣಿಗೆಗಳು ಪಾಲಿಕೆ ಬಳಿ ಹಳೇ ಪಿ.ಬಿ. ರಸ್ತೆ ಸೇರಲಿದ್ದು, ಅಲ್ಲಿಂದ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ದಾವಣಗೆರೆಯಲ್ಲಿ ಹೇಳಿದ್ದಾರೆ.

- ದಾವಣಗೆರೆ ದುರ್ಗಾಂಬಿಕೆ, ನಿಟುವಳ್ಳಿ ದುಗ್ಗಮ್ಮಗೆ ಪೂಜೆ ಸಲ್ಲಿಸಿ ಮೆರವಣಿಗೆ - ಎಸ್‌ಎಸ್‌, ಎಸ್ಎಸ್‌ಎಂ ರೋಡ್ ಶೋಗೆ ಚಾಲನೆ । ಲಕ್ಷಾಂತರ ಮಂದಿ ಭಾಗಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಏ.18ರಂದು ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಏಕಕಾಲಕ್ಕೆ ಎರಡೂ ಕಡೆಯಿಂದ ಶುರುವಾಗುವ ಮೆರವಣಿಗೆಗಳು ಪಾಲಿಕೆ ಬಳಿ ಹಳೇ ಪಿ.ಬಿ. ರಸ್ತೆ ಸೇರಲಿದ್ದು, ಅಲ್ಲಿಂದ ಡಿಸಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಉಭಯ ದೇವಸ್ಥಾನಗಳಲ್ಲಿ ಶ್ರೀ ದುರ್ಗಾಂಬಿಕಾದೇವಿಗೆ ಪೂಜೆ ಸಲ್ಲಿಸಿ, ಉತ್ತರ ಮತ್ತು ದಕ್ಷಿಣ ಭಾಗಗಳಿಂದ ರೋಡ್ ಶೋ ಆರಂಭಿಸಲಾಗುವುದು. ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಭಾಗವಹಿಸುವರು ಎಂದರು.

ಶಾಸಕರಾದ ಕೆ.ಎಸ್. ಬಸವಂತಪ್ಪ, ಡಿ.ಜಿ.ಶಾಂತನಗೌಡ, ಶಿವಗಂಗಾ ವಿ.ಬಸವರಾಜ, ಬಿ.ದೇವೇಂದ್ರಪ್ಪ, ಎಂ.ಪಿ.ಲತಾ ಮಲ್ಲಿಕಾರ್ಜುನ, ಮಾಜಿ ಶಾಸಕರಾದ ವಡ್ನಾಳ ರಾಜಣ್ಣ, ಎಸ್.ರಾಮಪ್ಪ, ಟಿ.ಗುರುಸಿದ್ದನಗೌಡ, ನಂದಿಗಾವಿ ಶ್ರೀನಿವಾಸ, ಅರಸೀಕೆರೆ ಕೊಟ್ರೇಶ, ಬಿ.ಎಂ.ವಾಗೀಶ ಸ್ವಾಮಿ, ಡಾ.ಟಿ.ಜಿ.ರವಿಕುಮಾರ ಇತರರು ಭಾಗವಹಿಸುವರು. ದಕ್ಷಿಣದ ಹಳೆ ಭಾಗದ ದೇವಸ್ಥಾನ ಬಳಿ ಡಾ. ಶಾಮನೂರು ಶಿವಶಂಕರಪ್ಪ, ನಿಟುವಳ್ಳಿ ಬಳಿ ರೋಡ್ ಶೋಗೆ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಚಾಲನೆ ನೀಡುವರು ಎಂದು ಹೇಳಿದರು.

ಪಕ್ಷದ ಎಲ್ಲ ವಿಭಾಗಗಳ ಪದಾಧಿಕಾರಿಗಳು, ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ, ಅಲ್ಪಸಂಖ್ಯಾತರ, ಅಂಗವಿಕಲರ, ಕಿಸಾನ್, ಕಾರ್ಮಿಕ, ವೈದ್ಯ, ವಕೀಲರ ಘಟಕ, ಎನ್ಎಸ್‌ಯುಐ, ಮಹಿಳಾ ಘಟಕಗಳು ಸೇರಿದಂತೆ ಎಲ್ಲ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಭಾಗವಹಿಸುವಂತೆ ಎಚ್‌.ಬಿ.ಮಂಜಪ್ಪ ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ದಕ್ಷಿಣ ಅಧ್ಯಕ್ಷ ಅಯೂಬ್‌ ಪೈಲ್ವಾನ್, ಉತ್ತರ ಅಧ್ಯಕ್ಷ ಕೆ.ಜಿ.ಶಿವಕುಮಾರ, ಸುರೇಶ ಉತ್ತಂಗಿ, ಡಿ.ವಿ.ಮಲ್ಲಿಕಾರ್ಜುನ ಸ್ವಾಮಿ ಇತರರು ಇದ್ದರು.

- - -

-17ಕೆಡಿವಿಜಿ1, 2:

ದಾವಣಗೆರೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article