ಸಂಸದರಾಗಿ ಡಾ.ಪ್ರಭಾ ವರ್ಷ ಪೂರೈಕೆ: ವಿಜನ್ ದಾವಣಗೆರೆ-2030 ಕಾರ್ಯಕ್ರಮ

KannadaprabhaNewsNetwork |  
Published : May 22, 2025, 12:49 AM IST
(ದಾವಣಗೆರೆ ಸಂಸದೆ ಡಾ.ಪ್ರಭಾ-20ಕೆಡಿವಿಜಿ2) | Kannada Prabha

ಸಾರಾಂಶ

ಸಂಸದರಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಕ್ಷೇತ್ರದ ನಾಗರೀಕರಿಗಾಗಿ ಟೀಂ ಪ್ರಭಾ ವಿಕಾಸ್ ತಂಡದಿಂದ ದಾವಣಗೆರೆ- 2030 ನನ್ನ ಕನಸು, ನನ್ನ‌ ನಗರ ಥೀಮ್‌ನಲ್ಲಿ ಆನ್‌ಲೈನ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

- "ನನ್ನ ಕನಸು, ನನ್ನ‌ ನಗರ " ಥೀಮ್‌ನಲ್ಲಿ ಆನ್‌ಲೈನ್ ಚಿತ್ರಕಲಾ ಸ್ಪರ್ಧೆ

- - -

ದಾವಣಗೆರೆ: ಸಂಸದರಾಗಿ ಡಾ.ಪ್ರಭಾ ಮಲ್ಲಿಕಾರ್ಜುನ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆ ಕ್ಷೇತ್ರದ ನಾಗರೀಕರಿಗಾಗಿ ಟೀಂ ಪ್ರಭಾ ವಿಕಾಸ್ ತಂಡದಿಂದ ದಾವಣಗೆರೆ- 2030 ನನ್ನ ಕನಸು, ನನ್ನ‌ ನಗರ ಥೀಮ್‌ನಲ್ಲಿ ಆನ್‌ಲೈನ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.

ಸಂಸದೆ ಡಾ.ಪ್ರಭಾ ಅವರ ಒಂದು ವರ್ಷದ ಸಾರ್ವಜನಿಕ ಸೇವೆ ಸಂಭ್ರಮ ಸಾರ್ವಜನಿಕರ ದೃಷ್ಟಿಕೋನದಲ್ಲಿ ದಾವಣಗೆರೆ ಹೇಗಿರಬೇಕು, ಅಭಿವೃದ್ಧಿ ‌ಪಥದತ್ತ ದಾವಣಗೆರೆ ಹೇಗೆ ಬದಲಾಗಬೇಕೆಂಬುದಕ್ಕೆ ಸ್ಪರ್ಧೆ ನಡೆಯಲಿದೆ. ವಯೋಮಿತಿ 7–14 ವರ್ಷ, 15–20 ವರ್ಷ, 21–24 ವರ್ಷ, 25 ವರ್ಷ ಮತ್ತು ಮೇಲ್ಪಟ್ಟವರು ಸ್ಪರ್ಧೆಯಲ್ಲಿ ಭಾಗಿಯಾಗಬಹುದು. ಪ್ರತಿ ವಿಭಾಗದಲ್ಲಿ ಮೊದಲ ಬಹುಮಾನ ₹5 ಸಾವಿರ ಹಾಗೂ ಪ್ರಮಾಣಪತ್ರ, 2ನೇ ಬಹುಮಾನ ₹3 ಸಾವಿರ ಮತ್ತು ಪ್ರಮಾಣ ಪತ್ರ ಒಳಗೊಂಡಿರುತ್ತದೆ.

ಚಿತ್ರ ರಚನೆಗೆ ನಿಯಮಿತ ಪೆನ್ಸಿಲ್‌, ಕ್ರಯೋನ್‌ಗಳು, ಜಲವರ್ಣಗಳು, ಸ್ಕೆಚ್ ಪೆನ್ನುಗಳು, ಅಕ್ರಾಲಿಕ್ ಬಣ್ಣಗಳು, ಆಯಿಲ್ ಪೇಂಟ್, ಗ್ರಾಫೈಟ್ ಪೆನ್ಸಿಲ್‌ಗಳು, ಸ್ವರೂಪ ಮತ್ತು ಗಾತ್ರ ಪೇಪರ್ ಅಥವಾ ಕ್ಯಾನ್ವಾಸ್‌ನಲ್ಲಿ ಚಿತ್ರಕಲೆ ರಚಿಸಬೇಕಿದೆ. ತಮ್ಮ ಕಲಾಕೃತಿಯನ್ನು ಉತ್ತಮ ಗುಣಮಟ್ಟದಲ್ಲಿ ಸ್ಕ್ಯಾನ್ ಮಾಡಬೇಕು.

ಅಲ್ಲದೇ, ಪ್ರತಿ ಸ್ಪರ್ಧಿಯು ತಮ್ಮ ಪೂರ್ಣ ಹೆಸರು, ಹುಟ್ಟಿದ ದಿನಾಂಕ, ವಯೋಮಿತಿ, ಶಾಲೆ, ಕಾಲೇಜು ಹೆಸರು, 25 ಮೇಲ್ಪಟ್ಟವರಿಗೆ ಶೈಕ್ಷಣಿಕ ಅರ್ಹತೆ, ಸಂಪರ್ಕ ಸಂಖ್ಯೆ, ಕಲಾಕೃತಿಯ ಶೀರ್ಷಿಕೆಯೊಂದಿಗೆ ನಿಮ್ಮ ರೇಖಾಚಿತ್ರದ ಸಂಕ್ಷಿಪ್ತ ವಿವರಣೆಯು 300 ಪದ ಮೀರದಂತೆ ಇರಬೇಕು. ಸಿದ್ಧವಾದ ಚಿತ್ರದ ಛಾಯಾಚಿತ್ರ ತೆಗೆಯಬೇಕು. ಕನಿಷ್ಠ 200 ಪಿಕ್ಸೆಲ್‌ ಒಳಗೊಂಡ ಚಿತ್ರವನ್ನು ಇ-ಮೇಲ್ ಸಲ್ಲಿಸಬೇಕು. ತೀರ್ಪುಗಾರರ ನಿರ್ಧಾರವೇ ಅಂತಿಮ.

ಯಾವುದೇ ಆಫ್‌ಲೈನ್ ಸಲ್ಲಿಕೆ ಸ್ವೀಕರಿಸುವುದಿಲ್ಲ. ಸ್ಪರ್ಧಿಗಳು ಜೂ.4ರಂದು ರಾತ್ರಿ 11.59 ರೊಳಗಾಗಿ ಕಲಾಕೃತಿಯನ್ನು ** drprabhacoloursdavangere@gmail.com **ಇಲ್ಲಿಗೆ ಇ-ಮೇಲ್ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಮೊ: 9980769117ಕ್ಕೆ ಸಂಪರ್ಕಿಸಲು ಕೋರಲಾಗಿದೆ.

- - -

(ಫೋಟೋ: ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!