- ಜಗಳೂರಲ್ಲಿ ಕಾಂಗ್ರೆಸ್ ಸಮಾವೇಶ । ಪಕ್ಷಕ್ಕೆ ಬಿಜೆಪಿಗರು ಸೇರ್ಪಡೆ
ಕನ್ನಡ ಪ್ರಭವಾರ್ತೆ ಜಗಳೂರು
ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾವಂತೆ. ಶಾಸಕ ಬಿ.ದೇವೇಂದ್ರಪ್ಪ, ಸಚಿವರೊಂದಿಗೆ ಜಗಳೂರು ಕ್ಷೇತ್ರದ ಸಮಗ್ರ ನೀರು ತರುವುದು ಸೇರಿದಂತೆ ಜನರಿಗೆ ಸ್ಪಂದಿಸಲಿರುವ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಕ್ಷೇತ್ರದಿಂದ ಅತ್ಯಧಿಕ ಮತ ನೀಡಿ, ಗೆಲ್ಲಿಸುವಂತೆ ಗಣಿ ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮನವಿ ಮಾಡಿದರು.ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಬಿಜೆಪಿ ಮುಖಂಡರನ್ನು ಕಾಂಗ್ರೆಸ್‌ಗೆ ಬರ ಮಾಡಿಕೊಂಡು ಪ್ರಭಾ ಮಲ್ಲಿಕಾರ್ಜುನ್ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, 3 ಬಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆದವರಿಂದ ಕ್ಷೇತ್ರಕ್ಕೆ ಏನೂ ಕೊಡುಗೆಯಿಲ್ಲ. ಹೊಲಕ್ಕೆ ಫಸಲು ಬದಲಾವಣೆ ಮಾಡುವ ರೀತಿಯಲ್ಲಿ ಈ ಬಾರಿ ರಾಜಕೀಯ ಫಸಲು ಬದಲಾವಣೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಅವರನ್ನು ಅಧಿಕ ಮತ ನೀಡಿ ಗೆಲ್ಲಿಸೋಣ. ಜಗಳೂರು ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಮಾಡೋಣ ಎಂದರು.
ಟಿ.ಜಿ.ರವಿಕುಮಾರ್, ಬ್ರಾಹ್ಮಣ ನಿಗಮ ಅಧ್ಯಕ್ಷ ಅಸಗೋಡು ಜಯಸಿಂಹ, ಕೆ.ಪಿ.ಪಾಲಯ್ಯ, ಶಿವಕುಮಾರ್ ಒಡೆಯರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮ್ಮದ್ ಮಾತನಾಡಿದರು.
ಅರಸೀಕೆರೆ ಬ್ಲಾಕ್ ಅಧ್ಯಕ್ಷ ಮಂಜುಣ್ಣ, ಕಲ್ಲೇಶ್ ರಾಜ್ ಪಟೇಲ್, ಎಸ್.ಟಿ. ಶೆಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಪಿ.ಸುರೇಶ್ ಗೌಡ, ಯಶವಂತಗೌಡ, ಬಸಾಪುರ ರವಿಚಂದ್ರ, ಎಸ್.ಕೆ. ರಾಮರೆಡ್ಡಿ, ಶಿವನಗೌಡ, ವೈ.ಎನ್. ಮಂಜುನಾಥ, ಪ.ಪಂ. ಸದಸ್ಯರಾದ ಮಂಜುನಾಥ್, ಶಕೀಲ್ ಅಹಮ್ಮದ್, ಮುಖಂಡರು ಉಪಸ್ಥಿತರಿದ್ದರು.
-16ಜೆ.ಎಲ್.ಆರ್1: