ನಂದಿಗಿರಿ ಪ್ರದಕ್ಷಿಣೆಗೆ ಡಾ.ಪ್ರೀತಿ ಸುಧಾಕರ್ ಚಾಲನೆ

KannadaprabhaNewsNetwork |  
Published : Apr 02, 2026, 01:15 AM IST
  ಸಿಕೆಬಿ-2   ನಂದಿಗಿರಿ ಪ್ರದಕ್ಷಿಣೆ ಯಲ್ಲಿ ಡಾ.ಪ್ರೀತಿ ಸುಧಾಕರ್ ಮತ್ತು ಪಿ.ಎನ್.ಕೇಶವರೆಡ್ಡಿ ಭಕ್ತರೊಂದಿಗೆ  ಹೆಜ್ಜೆ ಹಾಕಿದರುಸಿಕೆಬಿ-3 ನಂದಿಗಿರಿ ಪ್ರದಕ್ಷಿಣೆ ಯಲ್ಲಿ ಡಾ.ಪ್ರೀತಿ ಸುಧಾಕರ್   ಭಕ್ತರೊಂದಿಗೆ  ಹೆಜ್ಜೆ ಹಾಕಿದರು | Kannada Prabha

ಸಾರಾಂಶ

1936 ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿಧಾಮಕ್ಕೆ ನಡೆದುಕೊಂಡು ಹೋಗಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು ಆರೋಗ್ಯಧಾಮ ಎಂದು ಬಣ್ಣಿಸಿದ್ದರು.

ಚೈತ್ರ ಮಾಸದ ಹುಣ್ಣಿಮೆ ಅಂಗವಾಗಿ ಭೋಗನಂದೀಶ್ವರ ದೇವಾಲಯದಿಂದ ನಂದಿ ಗಿರಿ ಪ್ರದಕ್ಷಿಣೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆರೋಗ್ಯ ಹಾಗೂ ಅಧ್ಯಾತ್ಮದ ಸಮ್ಮಿಲನದ ಗುರುತಾಗಿ ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ನಂದಿಗಿರಿ ಪ್ರದಕ್ಷಿಣೆಯನ್ನು ಮಾಘ ಮಾಸದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಪ್ರಾರಂಭಿಸಿದ್ದು, ಇಂದಿನ ಚೈತ್ರ ಮಾಸದ ಹುಣ್ಣಿಮೆಯ (ಎರಡನೇ) ನಂದಿಗಿರಿ ಪ್ರದಕ್ಷಿಣೆ ನಡೆಯುತ್ತಿದೆ ಎಂದು ಡಾ.ಪ್ರೀತಿ ಸುಧಾಕರ್ ತಿಳಿಸಿದರು.

ಚೈತ್ರ ಮಾಸದ ಹುಣ್ಣಿಮೆಯ ಅಂಗವಾಗಿ ಬುಧವಾರ ಸಂಜೆ ತಾಲೂಕಿನ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಾಲಯದಿಂದ ನಂದಿ ಗಿರಿ ಪ್ರದಕ್ಷಿಣೆಗೆ ಚಾಲನೆ ನೀಡಿ ಮಾತನಾಡಿ, 1936 ರಲ್ಲಿ ಮಹಾತ್ಮ ಗಾಂಧೀಜಿಯವರು ನಂದಿಗಿರಿಧಾಮಕ್ಕೆ ನಡೆದುಕೊಂಡು ಹೋಗಿ 45 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಆ ಸಮಯದಲ್ಲಿ ಅವರು ನಂದಿ ಬೆಟ್ಟವನ್ನು ಆರೋಗ್ಯಧಾಮ ಎಂದು ಬಣ್ಣಿಸಿದ್ದರು. ನಂದಿ ಬೆಟ್ಟವನ್ನು ದಕ್ಷಿಣದ ಕಾಶಿ ಎಂದೂ ಕರೆಯಲಾಗುತ್ತದೆ. ತಮಿಳುನಾಡಿನ ತಿರುವಣಾಮಲೈನಲ್ಲಿ ಪ್ರತಿ ಪೌರ್ಣಮಿಗೆ ಅರುಣಾಚಲ ಗಿರಿಯ ಪ್ರದಕ್ಷಣೆ ಮಾಡಿದರೆ ಕೈಲಾಸವನ್ನು ಪ್ರದಕ್ಷಿಣೆ ಮಾಡಿದಷ್ಟೇ ಪುಣ್ಯ ಎಂಬ ನಂಬಿಕೆ ಇಂದಿಗೂ ಇದೆ. ಆದರೆ ದೂರದ ತಿರುವಣಾಮಲೈಗೆ ತೆರಳಲು ಆಗದು ಎಂದು ನಂದಿಗಿರಿಗೆ ಪ್ರದಕ್ಷಿಣೆ ಮಾಡಿದರೆ ಅದೇ ಪುಣ್ಯಲಭಿಸುತ್ತದೆ ಎಂದರು.

1928ರಲ್ಲಿ ದೊಡ್ಡಬಳ್ಳಾಪುರದ ಸುಬ್ಬರಾಯಪ್ಪ ಮತ್ತು ಗೌರಿಬಿದನೂರು ತಾಲೂಕು ನಾಮಗೊಂಡ್ಲು ಚಿಕ್ಕಣ್ಣ ಎಂಬುವರಿಂದ ಪ್ರಾರಂಭವಾಯಿತು. ಈ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವಿದೆ. ಪ್ರತಿ ವರ್ಷ ಆಷಾಢ ಮಾಸದ ಕೊನೆ ಸೋಮವಾರ ನಂದಿಗಿರಿಯನ್ನು ಭಕ್ತಿಯಿಂದ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತವನ್ನು ಸುತ್ತಿದಂತೆ ಎನ್ನುವ ನಂಬಿಕೆ ಈ ಭಾಗದ ಆಸ್ತಿಕರದ್ದಾಗಿದೆ. ಅದೇ ರೀತಿಯಲ್ಲಿ ಇಲ್ಲಿಯೂ ಶ್ರೇಷ್ಠವಾದ ಪ್ರದಕ್ಷಿಣೆ ಕಾರ್ಯಕ್ರಮವನ್ನು ಸಂಸದ ಡಾ.ಕೆ.ಸುಧಾಕರ್‌ ರವರು ಕಳೆದ ಫೆಬ್ರವರಿ ಒಂದರಂದು ಪ್ರಾರಂಭಿಸಿದ್ದು, ಕಳೆದ ತಿಂಗಳು ಚಂದ್ರಗ್ರಹಣ ವಿದ್ದುದ್ದರಿಂದ ಗಿರಿ ಪ್ರದಕ್ಷಿಣೆ ಮಾಡಲಾಗಲಿಲ್ಲ. ಇಂದು ಸಂಸದ ಡಾ.ಕೆ.ಸುಧಾಕರ್‌ ಅವರಿಗೆ ಸಂಸತ್ ಕಲಾಪ ವಿದ್ದುದರಿಂದ ಬರಲಾಗಲಿಲ್ಲ. ಆದ್ದರಿಂದ ನಾನು ಹಾಗೂ ನಮ್ಮ ಮಾವನವರಾದ ಪಿ.ಎನ್.ಕೇಶವರೆಡ್ಡಿ ರವರು ಪ್ರದಕ್ಷಿಣೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದರು. ಸಂಸದ ಡಾ.ಕೆ.ಸುಧಾಕರ್ ತಂದೆ ಪಿ.ಎನ್.ಕೇಶವರೆಡ್ಡಿ ಮಾತನಾಡಿ, ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಕುಟುಂಬ, ಸ್ನೇಹಿತರ ಬಳಗದೊಂದಿಗೆ ನಡೆದುಕೊಂಡು ಹೋಗುವುದರಿಂದ ವಿಶೇಷ ಅನುಭವ ಆಗುವುದು ಎಂದು ಹೇಳಿದರು.ಭಕ್ತರಿಗೆ ಅಗತ್ಯ ವ್ಯವಸ್ಥೆ:

ಪ್ರತಿ ನಾಲ್ಕು ಕಿಲೋ ಮೀಟರ್‌ಗಳಿಗೆ ಕಾಲ್ನಡಿಗೆಯಲ್ಲಿ ಬರುವ ಭಕ್ತರ ಆಯಾಸ ನೀಗಿಸಿಸಲು ಅಲ್ಲಲ್ಲಿ ಮಜ್ಜಿಗೆ, ಜ್ಯೂಸ್, ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್, ಕಲ್ಲುಸಕ್ಕರೆ, ಖರ್ಜೂರ ಸೇರಿದಂತೆ ಹಣ್ಣುಗಳನ್ನು ವಿತರಿಸಲಾಗುತ್ತಿತ್ತು. ಕತ್ತಲೆಯಾಗುವುದರಿಂದ ದಾರಿಯುದ್ದಕ್ಕೂ ಲೈಟಿಂಗ್ ವ್ಯೆವಸ್ಥೆ, ಕಾಡು ಪ್ರಾಣಿಗಳು ಬರುವ ಸಾಧ್ಯತೆ ಇರುವುದರಿಂದ ಅರಣ್ಯ ಮತ್ತು ಪೋಲಿಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತು, ಇದಲ್ಲದೆ ಉಚಿತ ಆರೋಗ್ಯ ಶಿಭಿರ ಮತ್ತು ಔಷಧ ವಿತರಣೆಗೆ ವ್ಯೆವಸ್ಥೆ ಮಾಡಲಾಗಿತ್ತು.

ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ಬಾಗೇಪಲ್ಲಿ, ಬೆಂಗಳೂರು, ದೊಡ್ಡಬಳ್ಳಾಪುರ, ನೆಲಮಂಗಲ,ದೇವನಹಳ್ಳಿ, ವಿಜಯಪುರ, ಮಾಗಡಿ ತುಮಕೂರು, ಕೋಲಾರ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಜನರ ಆಗಮಿಸಿದ್ದರು.

ವಿವಿಧ ಭಜನಾ ತಂಡಗಳೊಂದಿಗೆ ದೇವರ ಹಾಡುಗಳನ್ನು ಹಾಡುತ್ತ ಸಂಸದ ಡಾ. ಪ್ರೀತಿಸುಧಾಕರ್ ,ಪಿ.ಎನ್.ಕೇಶವರೆಡ್ಡಿ, ಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಪ್ರಸಾದ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮರಳಕುಂಟೆ ಕೃಷ್ಣಮೂರ್ತಿ, ಮುಖಂಡರಾದ ಎಸ್ ಆರ್ ಎಸ್ ದೇವರಾಜ್, ಅನುಆನಂದ್, ಮಧುಚಂದ್ರ, ಆರ್ ಹೆಚ್ ಎನ್ ಅಶೋಕ್ ಇದ್ದರು,

ಸಿಕೆಬಿ-2 ನಂದಿಗಿರಿ ಪ್ರದಕ್ಷಿಣೆ ಯಲ್ಲಿ ಡಾ.ಪ್ರೀತಿ ಸುಧಾಕರ್ ಮತ್ತು ಪಿ.ಎನ್.ಕೇಶವರೆಡ್ಡಿ ಭಕ್ತರೊಂದಿಗೆ ಹೆಜ್ಜೆ ಹಾಕಿದರು

ಸಿಕೆಬಿ-3 ನಂದಿಗಿರಿ ಪ್ರದಕ್ಷಿಣೆ ಯಲ್ಲಿ ಡಾ.ಪ್ರೀತಿ ಸುಧಾಕರ್ ಭಕ್ತರೊಂದಿಗೆ ಹೆಜ್ಜೆ ಹಾಕಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೊಡ್ಡಬಳ್ಳಾಪುರ: ಶಾಸನಬದ್ದವಾಗಿ ದ್ವಿಭಾಷಾ ನೀತಿ ಜಾರಿ ಅಗತ್ಯ
ಖಮೇನಿಗೆ ಕಂಬನಿ: ಪಾಲಿಕೆ ವಿರುದ್ದ ಆಕ್ರೋಶ