ಡಾ.ರಾಜ್‌ ನಡೆ ನುಡಿ ಕನ್ನಡ ಸಂಸ್ಕೃತಿಯ ಪ್ರತಿಬಿಂಬ: ಕೆ.ವೈ.ನಂಜೇಗೌಡ

KannadaprabhaNewsNetwork |  
Published : Apr 25, 2026, 01:30 AM IST
ಶಿರ್ಷಿಕೆ-೨೪ಕೆ.ಎಂ.ಎಲ್.ಆರ್.೨-ಮಾಲೂರಿನ ನಗರಸಭೆ ಅವರಣದಲ್ಲಿರುವ ಡಾ.ರಾಜ್‌ ಕುಮಾರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಡಾ.ರಾಜ್‌ ಕುಮಾರ್‌ ಅವರ ೯೭ ನೇ ಹುಟ್ಟು ಹಬ್ಬ ಆಚರಿಸಿದ ಶಾಸಕ ನಂಜೇಗೌಡ. | Kannada Prabha

ಸಾರಾಂಶ

ತನ್ನ ನಟನೆಯಿಂದ ಹಾಗೂ ಸರಳ ಜೀವನ ಶೈಲಿಯಿಂದ ಇಡೀ ದೇಶದಲ್ಲಿ ಇದ್ದ ಏಕೈಕ ನಟ ರಾಜ್‌ ಕುಮಾರ್‌ ಆಗಿದ್ದರು. ಅವರ ಒಂದೊಂದು ಚಲನಚಿತ್ರವು ಮನ ಪರಿವರ್ತನೆ ಮಾಡುವಂತಾಗಿದ್ದು, ಅವರ ಕನ್ನಡ ಪದ ಉಚ್ಚಾರಣೆ ಬೇರೊಬ್ಬ ನಾಯಕ ನಟದಲ್ಲಿ ಕಾಣಲಿಲ್ಲ ಎಂದರು.

ಮಾಲೂರು: ಕನ್ನಡ ಚಲನಚಿತ್ರದ ಮೇರು ಪರ್ವತ ಡಾ.ರಾಜ್‌ ಕುಮಾರ್‌ ಅವರು ಕೇವಲ ನಟರಾಗದೆ ನಮ್ಮ ಕನ್ನಡ ಸಂಸ್ಕೃತಿಯ ಪ್ರತಿಬಿಂಬವಾಗಿದ್ದರು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು. ಅವರು ನಗರದ ನಗರಸಭೆ ಕಚೇರಿ ಅವರಣದಲ್ಲಿ ಭವನೇಶ್ವರಿ ಕಲಾ ಸಂಘ ಕಸಾಪ ಜಂಟಿಯಾಗಿ ಆಯೋಜಿಸಿದ್ದ ಡಾ.ರಾಜ್‌ ಕುಮಾರ್‌ ಅವರ ೯೭ನೇ ಜನ್ಮದಿನಾಚರಣೆಯಲ್ಲಿ ಡಾ.ರಾಜ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ತನ್ನ ನಟನೆಯಿಂದ ಹಾಗೂ ಸರಳ ಜೀವನ ಶೈಲಿಯಿಂದ ಇಡೀ ದೇಶದಲ್ಲಿ ಇದ್ದ ಏಕೈಕ ನಟ ರಾಜ್‌ ಕುಮಾರ್‌ ಆಗಿದ್ದರು. ಅವರ ಒಂದೊಂದು ಚಲನಚಿತ್ರವು ಮನ ಪರಿವರ್ತನೆ ಮಾಡುವಂತಾಗಿದ್ದು, ಅವರ ಕನ್ನಡ ಪದ ಉಚ್ಚಾರಣೆ ಬೇರೊಬ್ಬ ನಾಯಕ ನಟದಲ್ಲಿ ಕಾಣಲಿಲ್ಲ ಎಂದರು.

ಪೌರಾಯುಕ್ತ ಮಹದೇವ್, ಕಸಾಪ ಅಧ್ಯಕ್ಷ ಎಂ.ವಿ.ಹನುಮಂತಯ್ಯ, ಭುವನೇಶ್ವರಿ ಕಲಾ ಸಂಘದ ಶ್ರೀಧರ್‌ ಉಪಾದ್ಯ, ಕಲ್ಲು ಶ್ರೀನಪ್ಪ, ಹನುಮಂತರೆಡ್ಡಿ, ಲಿಂಗೇಶ್‌, ನಗರಸಭೆ ಮಾಜಿ ಅಧ್ಯಕ್ಷ ಎಂ.ವಿ.ಮುರಳಿಧರ್‌, ಚಾಕನಹಳ್ಳಿ ನಾಗರಾಜ್, ಜೆ.ಎಂ.ಸುರೇಶ್‌ ಕುಮಾರ್‌, ವೇಣುಗೋಪಾಲ್‌ ಗೌಡ, ಶಶಿಧರ್‌ ಇನ್ನಿತರರು ಇದ್ದರು.ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ಡಾ.ರಾಜ್‌ ಕುಮಾರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ರಾಜಕುಮಾರ್‌ ಅವರ ೯೭ ನೇ ಹುಟ್ಟುಹಬ್ಬವನ್ನು ಆಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ: ವಿ.ಕೆ.ಜಗದೀಶ್
ಡಾ.ರಾಜ್‌ಕುಮಾರ್ ಜನಸಮೂಹದ ಸಾಂಸ್ಕೃತಿಕ ರಾಯಭಾರಿ: ಸಂದೇಶ್‌