- ತಾಲೂಕು ಆಡಳಿತ, ರಾಜ್ಯ ಸರ್ಕಾರಿ ನೌಕರರ ಸಂಘ ದಿಂದ ಡಾ.ರಾಜ್ ಕುಮಾರ್ ಹುಟ್ಟುಹಬ್ಬದಂದು ನುಡಿ ನಮನ
ತೆರೆಯ ಮೇಲೆ ಮತ್ತು ನಿಜ ಜೀವನದಲ್ಲೂ ಡಾ.ರಾಜ್.ಕುಮಾರ್ ಹೀರೋ ಆಗಿದ್ದರು ಎಂದು ಉಪ ವಿಭಾಗಾಧಿಕಾರಿ
ಡಾ.ಕಾಂತರಾಜ್ ಹೇಳಿದರು.ಗುರುವಾರ ತಾಲೂಕು ಆಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತರೀಕೆರೆ ತಾಲೂಕಿನಿಂದ ಡಾ.ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ನಡೆದ ನುಡಿನಮನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೀವನಕ್ಕೆ ಬಹಳ ಹತ್ತಿರದ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು, ಅವರ ಸಿನಿಮಾಗಳು ಶೀರ್ಷಿಕೆಗೆ ತಕ್ಕ ಹಾಗೆ ಇರುತ್ತಿತ್ತು ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ ಮಾತನಾಡಿ ಡಾ.ರಾಜ್ ಕುಮಾರ್ ಚಲನಚಿತ್ರಗಳು ಜನರ ಜೀವನಕ್ಕೆ ಹತ್ತಿರವಾಗಿರುತ್ತಿತ್ತು. ಜನರು ಡಾ.ರಾಜ್ ಅವರ ಚಿತ್ರಗಳನ್ನು ನೋಡಿ ಪ್ರಭಾವಿತರಾಗಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರು. ಪ್ರತಿ ಚಿತ್ರದಲ್ಲು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದರು ಎಂದು ಅವರು ಹೇಳಿದರು.
ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಮಾತನಾಡಿ, ರೈತನ ಪಾತ್ರದಿಂದ ಹಿಡಿದು ಎಲ್ಲ ಪಾತ್ರಗಳಲ್ಲೂ ಅಭಿನಯಿಸಿದ ಡಾ.ರಾಜ್ ಕುಮಾರ್ ಅದ್ಬುತವಾದ ಗಾಯಕರಾಗಿದ್ದರು. ಎಲ್ಲ ಪಾತ್ರಗಳಿಗೂ ಅವರು ತಂದು ಗೌರವ ಕೊಟ್ಟರು ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಎಂ..ಬಿ.ರಾಮಚಂದ್ರಪ್ಪ, ಧರಣೇಶ್, ಉಪನ್ಯಾಸಕ ದಾದಾಪೀರ್, ಚೇತನ್ ಗೌಡ, ಪತ್ರಕರ್ತ ಅನಂತ ನಾಡಿಗ್ ಮತ್ತಿತರರು ಮಾತನಾಡಿದರು.
25ಕೆಟಿಆರ್.ಕೆ.5ಃ ತರೀಕೆರೆಯಲ್ಲಿ ತಾಲೂಕು ಅಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ವತಿಯಿಂದ ಡಾ.ರಾಜ್.ಕುಮಾರ್ ಹುಟ್ಟುಹಬ್ಬನಡೆದ ಕಾರ್ಯಕ್ರಮದಲ್ಲಿ ಉಪ ವಿಭಾಗಾದಿಕಾರಿ ಡಾ. ಕೆ.ಜೆ.ಕಾಂತರಾಜ್, ಜಯ ಕರ್ನಾಟಕ ಸಂಘಟನೆ ತಾಲೂಕು ಶಾಖೆ ಅಧ್ಯಕ್ಷ ಡಾ.ಟಿ.ಎನ್.ಜಗದೀಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾ.ಶಾಖೆ ಅಧ್ಯಕ್ಷ ಸಿ.ಆರ್. ಅನಂತಪ್ಪ,ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ.ದೇವರಾಜ್ ಮತ್ತಿತರರು ಇದ್ದರು.