ಗದಗ: ಕನ್ನಡ ಕಾದಂಬರಿ ಲೋಕದಲ್ಲಿ ಮರೆಯಲಾಗದ ಹೆಸರು ಡಾ. ಎಸ್.ಎಲ್. ಭೈರಪ್ಪ ಅವರದ್ದು. ತಮ್ಮ ಅಧ್ಯಯನ ಪೂರ್ಣತೆ ಮತ್ತು ಸೃಜನಶೀಲತೆಯಿಂದಾಗಿ ಕನ್ನಡ ಕಾದಂಬರಿ ಲೋಕದ ಅತ್ಯಂತ ಜನಪ್ರಿಯ ಮತ್ತು ಸರ್ವ ಶ್ರೇಷ್ಠ ಕಾದಂಬರಿಕಾರರಾಗಿ ಭೈರಪ್ಪ ಅವರ ಕೊಡುಗೆ ಅಪಾರವಾಗಿದೆ ಎಂದು ನಿವೃತ್ತ ಪ್ರಾಚಾರ್ಯೆ ಮುಕ್ತಾ ಉಡುಪಿ ತಿಳಿಸಿದರು.
ಧರ್ಮಶ್ರೀ, ದಾಟು, ಪರ್ವ, ತಂತು, ಜಲಪಾತ, ನಾಯಿ ನೆರಳು, ಮಂದ್ರ, ಉತ್ತರಕಾಂಡ, ಯಾನ ಹೀಗೆ ವೈವಿಧ್ಯಮಯ ವಿಷಯಗಳನ್ನೊಳಗೊಂಡ ಭೈರಪ್ಪ ಅವರ ಕಾದಂಬರಿಗಳು ಓದುಗರಿಗೆ ಹೊಸ ವಿಷಯಗಳನ್ನು ತಿಳಿಸಿ, ಜ್ಞಾನಾರ್ಜನೆಯೊಂದಿಗೆ ಸದಭಿರುಚಿಯ ಮನರಂಜನೆಯನ್ನು ನೀಡುತ್ತವೆ.
ಹೀಗಾಗಿಯೇ ಅವರ ಮೂರು ದಶಕಗಳ ಹಿಂದೆ ರಚಿಸಿದ ಕಾದಂಬರಿಗಳು ಕೂಡಾ ನಿರಂತರ ಪ್ರಸ್ತುತತೆ ಹೊಂದಿವೆ. ಭೈರಪ್ಪ ಅವರು ಇತ್ತೀಚಿಗೆ ನಮ್ಮನ್ನು ಅಗಲಿದರೂ ತಮ್ಮ ಕಾದಂಬರಿಗಳ ಮೂಲಕ ಓದುಗರ ಹೃನ್ಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.ಮಧುವಂತಿ ರಾಜಪುರೋಹಿತ ಪ್ರಾರ್ಥಿಸಿದರು. ಆರುಷಿ ರಾಜಪುರೋಹಿತ ಕೊಳಲು ನುಡಿಸಿದರು.
ಅರುಣ ರಾಜಪುರೋಹಿತ, ರವಿ ರಾಜಪುರೋಹಿತ, ರವೀಂದ್ರ ಜೋಶಿ, ರಾಮ ಪುರಾಣಿಕ, ಗಿರೀಶ ಪಂತರ, ಡಾ. ಡಿ.ಪಿ. ಸುಬ್ಬಣ್ಣವರ, ವಿಶ್ವನಾಥ ಕುಲಕರ್ಣಿ, ರಾಧಿಕಾ ಜೋಶಿ, ಸಿ.ಕೆ.ಎಚ್. ಕಡಣಿಶಾಸ್ತ್ರೀ, ವಾಣಿಶ್ರೀ ರಾಜಪುರೋಹಿತ, ವಿನೋದಾ ಜಾಲಿಹಾಳ, ಚೈತ್ರಾ ಕುಲಕರ್ಣಿ, ರಮೇಶ ಕುಲಕರ್ಣಿ, ಪ್ರಶಾಂತ ಪಾಟೀಲ ಇತರರು ಇದ್ದರು. ಆರುಂಧತಿ ರಾಜಪುರೋಹಿತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.