ಕನ್ನಡಪ್ರಭ ವಾರ್ತೆ ಬೀದರ್
ಇಲ್ಲಿಯ ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿಯವರ 80ನೇ ಜಯಂತಿ ಮಹೋತ್ಸವ ಫೆ. 14ರಿಂದ 18ರ ವರೆಗೆ ಜರುಗಲಿದೆ ಎಂದು ಡಾ. ಶಿವಕುಮಾರ ಸ್ವಾಮೀಜಿ ಅವರು ತಿಳಿಸಿದರು.ಈ ಕುರಿತು ಮಾಹಿತಿ ನೀಡಿದ ಅವರು, 5 ದಿನವೂ ಬೆಳಗ್ಗೆ 8ರಿಂದ 9 ಹಾಗೂ ಸಂಜೆ 5ರಿಂದ 6ರ ವರೆಗೆ ಭಕ್ತಿ ಸಂಗೀತ ಜರುಗಲಿದೆ. 9ರಿಂದ ಮಧ್ಯಾಹ್ನ 12.30 ಮತ್ತು ಸಂಜೆ 6ರಿಂದ 9ರ ವರೆಗೆ ದೇಶದ ವಿವಿಧೆಡೆಯ ಮಠಾಧೀಶರು ಆಧ್ಯಾತ್ಮಿಕ ಪ್ರವಚನ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಮಾರಂಭಕ್ಕೆ ಕಾಶಿ ಜಗದ್ಗುರು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಸುಮಾರು 167ಕ್ಕೂ ಹೆಚ್ಚು ಪ್ರಮುಖ ಪೂಜ್ಯರು ಭಾಗಿಯಾಗಲಿದ್ದಾರೆ ಎಂದರು.ಮಠದಲ್ಲಿ ಪ್ರತಿ ದಿನ ಬೆಳಗ್ಗೆ 7ರಿಂದ 9ರ ವರೆಗೆ ಉಪಹಾರ ಇರಲಿದ್ದು, ಬೆ.8ರಿಂದ 9ರ ವರೆಗೆ ಭಕ್ತಿ ಸಂಗೀತ ಸೇವೆ, 9ರಿಂದ 12.30ರ ವರೆಗೆ ಮಹಾತ್ಮರಿಂದ ಆಧ್ಯಾತ್ಮಿಕ ಪ್ರವಚನ, ಪ್ರತಿ ದಿನ ಸಂಜೆ 5ರಿಂದ 6ರ ವರೆಗೆ ಭಕ್ತಿ ಸಂಗೀತ ಸೇವೆ, ಸಂಜೆ 6ರಿಂದ 9ರ ವರೆಗೆ ಮಹಾತ್ಮರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ. ಉಪಾಹಾರ ಮತ್ತು ಪ್ರವಚನದ ನಂತರ ಮಹಾಪ್ರಸಾದ ಇರಲಿದೆ. ಸಮಾರಂಭದಲ್ಲಿ ಪ್ರತಿ ದಿನ 25 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ ಎಂದು ಪೂಜ್ಯರು ತಿಳಿಸಿದರು.
ಆನೆ ಮೇಲೆ ಸದ್ಗುರು ಸಿದ್ದಾರೂಢರ ಭವ್ಯ ಮೆರವಣಿಗೆ ಜರುಗಲಿದೆ: ಫೆ.14ರಂದು ಬೆಳಗ್ಗೆ 8 ಗಂಟೆಗೆ ನಗರದ ಬಿವಿಬಿ ಕಾಲೇಜು ಎದುರಿನಿಂದ ಕಳಸ ಹೊತ್ತ ಮಹಿಳೆಯರಿಂದ, ಆನೆ ಮೇಲೆ ಸದ್ಗುರು ಸಿದ್ದಾರೂಢರ ಭವ್ಯ ಮೆರವಣಿಗೆ ಜರುಗಲಿದೆ. ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.ಇಂಚಲ್‌ನ ಡಾ. ಶಿವಾನಂದ ಭಾರತಿ ಸ್ವಾಮೀಜಿ, ಕಾಶಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗತ್ಪಾದರು, ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಮುಂಬೈನ ಮಹಾಮಂಡಲೇಶ್ವರದ ವೀರೇಶ್ವರಾನಂದಗಿರಿ ಮಹಾರಾಜ್, ಬೆಂಗಳೂರಿನ ಗೋಸಾಯಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ, ಗೌರಿಗದ್ದೆಯ ವಿನಯ್ ಗುರೂಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ವಿಜಯಪುರದ ನಿರ್ಭಯಾನಂದ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಜಿಲ್ಲೆಯ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಜಯಂತಿ ಮಹೋತ್ಸವಕ್ಕೆ ಭರದ ಸಿದ್ಧತೆಗಳು ನಡೆದಿವೆ. ಬೃಹತ್ ವೇದಿಕೆ, ಪೆಂಡಾಲ್, ಭಕ್ತರಿಗೆ ಊಟ, ವಸತಿ ಮೊದಲಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಚಿದಂಬರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಜಿ. ಶೆಟಕಾರ್ ಹೇಳಿದರು.ಜಿ.ಕೆ ಫೌಂಡೇಷನ್ ಅಧ್ಯಕ್ಷ ಗುರುನಾಥ ಕೊಳ್ಳೂರ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಉದಯಭಾನು ಹಲವಾಯಿ, ಸಹಜಾನಂದ ಕಂದಗೂಳೆ, ವಿರೂಪಾಕ್ಷ ಗಾದಗಿ, ಗುರುನಾಥ ರಾಜಗೀರಾ, ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಇದ್ದರು.
ಉಚಿತ ಆರೋಗ್ಯ ತಪಾಸಣೆ ಶಿಬಿರ: ಮಹೋತ್ಸವ ಅಂಗವಾಗಿ ನಗರದ ಶ್ರೀ ಸಿದ್ಧಾರೂಢ ಧರ್ಮಾರ್ಥ ಆಸ್ಪತ್ರೆಯಲ್ಲಿ ಫೆ.18ರವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.ಶನಿವಾರ ಶಿಬಿರಕ್ಕೆ ಚಾಲನೆ ನೀಡಿದ ಶಿವಕುಮಾರ ಸ್ವಾಮೀಜಿಯವರು, ತಜ್ಞ ವೈದ್ಯರು ಆರೋಗ್ಯ ತಪಾಸಣೆ ಮಾಡಲಿದ್ದು, ಜಿಲ್ಲೆಯ ಜನ ಶಿಬಿರದ ಪ್ರಯೋಜನ ಪಡೆಯಬೇಕು ಎಂದರು.
ಪ್ರಮುಖರಾದ ಬಿ.ಜಿ. ಶೆಟಕಾರ, ಶಿವಶರಣಪ್ಪ ಸಾವಳಗಿ, ಡಾ. ವೈಜಿನಾಥ ತೂಗಾವೆ, ಡಾ. ಉಮಾ ದೇಶಮುಖ, ಡಾ. ಜಯಶ್ರೀ ಗೌರಿಶಂಕರ, ಡಾ. ಲಲಿತಾ ಎಸಿ, ಉದಯಭಾನು ಹಲವಾಯಿ, ಮಡಿವಾಳಪ್ಪ ಗಂಗಶೆಟ್ಟಿ, ಹಾವಗಿರಾವ್ ಮೈಲಾರೆ, ಬಾಬು ವಾಲಿ, ವಿರೂಪಾಕ್ಷ ಗಾದಗಿ, ಸಹಜಾನಂದ ಕಂದಗೂಳ, ಡಾ. ಬಂಡೆಪ್ಪ, ಡಾ. ಜೋತೆಪ್ಪ, ಡಾ. ಸಿಂಪಿ, ಡಾ.ಜಿ.ಎಂ. ಶೆಟಕಾರ್, ಡಾ. ರಮೇಶ ಓತಿ, ಡಾ. ಮಂಜುನಾಥ, ಡಾ. ಅಶೋಕ, ಡಾ.ವಿ.ವಿ. ನಾಗರಾಜ, ಡಾ. ಧೂಳಪ್ಪ, ಡಾ.ಮಹೇಶ, ಡಾ. ಶಿವಕುಮಾರ ಪಾಟೀಲ್, ಡಾ. ವಿಜಯಕುಮಾರ, ಡಾ. ಶ್ರೀದೇವಿ ಇದ್ದರು.ಆಸ್ಪತ್ರೆಯ ಮುಖ್ಯಸ್ಥ ಡಾ. ವಿಜಯಕುಮಾರ ಬಿರಾದಾರ ಸ್ವಾಗತಿಸಿ ಡಾ.ಪ್ರೀತಿ ಅಗ್ರಹಾರ ನಿರೂಪಿಸಿದರೆ ಡಾ. ಕೋಮಲಾ ವಂದಿಸಿದರು.