ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡಿ ಡಾ.ಸಿಂಗ್‌

KannadaprabhaNewsNetwork |  
Published : Dec 28, 2024, 12:46 AM IST
27ಕೆಬಿಪಿಟಿ.1.ಬಂಗಾರಪೇಟೆ ಪಟ್ಟಣದ ಕೃಷಿಕ ಸಮಅಜದ ಕಚೇರಿಯಲ್ಲಿ ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರಿಗೆ ಶ್ರದ್ದಾಂಜಲಿ ಸಲ್ಲಿಸಿದರು. | Kannada Prabha

ಸಾರಾಂಶ

೧೯೯೧ರಲ್ಲಿ ಭಾರತ ಭೀಕರ ಆರ್ಥಿಕ ಕುಸಿತಕ್ಕೆ ಒಳಗಾಗಿದ್ದಾಗ ನರಸಿಂಹರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಸಿಂಗ್ ಎಲ್‌ಪಿಜಿ ನೀತಿ ಪರಿಚಯಿಸುವ ಮೂಲಕ ಭಾರತದ ಅಭಿವೃದ್ದಿಗೆ ಹೊಸ ಮುನ್ನುಡಿ ಬರೆದರು. ಹೀಗಾಗಿ ಮನಮೋಹನ್‌ ಸಿಂಗ್‌ ಅವರನ್ನು ಆಧುನಿಕ ಭಾರತದ ಅರ್ಥ ವ್ಯವಸ್ಥೆಯ ಹರಿಕಾರ ಎಂದು ಕರೆಯಲಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆರ್ಥಿಕತೆಯ ಪಿತಾಮಹ ದೇಶದ ಮಾಜಿ ಪ್ರಧಾನಿ ಡಾಃ ಮನಮೋಹನ್ ಸಿಂಗ್ ವಿಧಿವಶರಾಗಿರುವುದು ದೇಶಕ್ಕೆ ತಂಬಲಾರದ ನಷ್ಟವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಕೃಷಿಕ ಸಮಾಜದ ನಿರ್ದೇಶಕ ಕೆ.ಚಂದ್ರಾರೆಡ್ಡಿ ಹೇಳಿದರು.ಪಟ್ಟಣದ ಕೆಂಪೇಗೌಡ ವೃತ್ತದ ಬಳಿಯಿರುವ ಕೃಷಿಕ ಸಮಾಜದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮನಮೋಹನ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕಳಂಕರಹಿತ ಆಡಳಿತಗಾರ

ಮನಮೋಹನ್ ಸಿಂಗ್ ಸಾಧಾರಣ ಹಿನ್ನೆಲೆಯಿಂದ ಬಂದ ಅವರು ಗೌರವಾನಿತ್ವ ಆರ್ಥಿಕತಜ್ಙರಾಗಿ ಬೆಳೆದಿದ್ದರು, ಹಣಕಾಸು ಸಚಿವರಾಗಿ ದೇಶದ ಆರ್ಥಿಕ ನೀತಿಯ ಮೇಲೆ ಬಲವಾದ ಮುದ್ರೆ ಒತ್ತಿದ್ದ ಕೀರ್ತಿ ಅವರಿಗೆ ಸಲ್ಲಬೇಕು, ಎರಡು ಬಾರಿ ಪ್ರಧಾನಿಯಾಗಿ ಯಾವುದೇ ಕಳಂಕ ಇಲ್ಲದೆ ಆಡಳಿತ ನೀಡಿ ಹಲವು ರೈತಪರ ಹಾಗೂ ಜನಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದರು.ಅಣು ಒಪ್ಪಂದಕ್ಕಾಗಿ ಕುರ್ಚಿ ಬಿಡಲೂ ಮುಂದಾಗಿದ್ದ ಮನಮೋಹನ್ ಸಿಂಗ್ ಕಟು ಟೀಕೆಕಾರರಿಗೂ ಮೌನದಿಂದಲೇ ಉತ್ತರ ನೀಡಿದ್ದರು, ಸಿಂಗ್‌ರವರ ದಕ್ಷ ಆಡಳಿತದಿಂದ ಇಡೀ ವಿಶ್ವವೇ ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ್ದರು. ೧೯೯೧ರಲ್ಲಿ ಭಾರತ ಭೀಕರ ಆರ್ಥಿಕ ಕುಸಿತಕ್ಕೆ ಒಳಗಾಗಿದ್ದಾಗ ನರಸಿಂಹರಾವ್ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ಸಿಂಗ್ ಎಲ್‌ಪಿಜಿ ನೀತಿ ಪರಿಚಯಿಸುವ ಮೂಲಕ ಭಾರತದ ಅಭಿವೃದ್ದಿಗೆ ಹೊಸ ಮುನ್ನುಡಿ ಬರೆದರು. ಹೀಗಾಗಿ ಮನಮೋಹನ್‌ ಸಿಂಗ್‌ ಅವರನ್ನು ಆಧುನಿಕ ಭಾರತದ ಅರ್ಥ ವ್ಯವಸ್ಥೆಯ ಹರಿಕಾರ ಎಂದು ಕರೆಯಲಾಗುತ್ತಿತ್ತು ಎಂದು ಬಣ್ಣಿಸಿದರು.

ಈ ವೇಳೆ ಕೃಷಿಕ ಸಮಾಜದ ಅಧ್ಯಕ್ಷ ಜಿ.ರಾಜಾರೆಡ್ಡಿ,ಟಿಎಪಿಸಿಎಂಎಸ್ ಅಧ್ಯಿಕ್ಷ ವೆಂಕಟಾಚಲಪತಿ, ಸೀತಾರಾಮಪ್ಪ, ವಿಜಿಕುಮಾರ್, ವಿಶ್ವನಾಥ್, ಎಸ್.ನಾರಾಯಣಗೌಡ, ಪಾರ್ಥಸಾರಥಿ, ಪುರಸಭೆ ಸದಸ್ಯ ವಸಂತ್, ನರಸಾರೆಡ್ಡಿ, ಕರವೇ ಚಲಪತಿ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...