ಕನ್ನಡಪ್ರಭ ವಾರ್ತೆ ಮುಧೋಳ
ನಗರದ ಮುಧೋಳ ರಾಯಲ್ ಸ್ಕೂಲ್ ಅವಿಷ್ಕಾರ್ 5ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಟಿ.ವಿ.ಅರಳಿಕಟ್ಟಿ ಅವರ ಕಾರ್ಯವು ಸಮಾಜಕ್ಕೆ ಮಾದರಿಯಾಗಿದ್ದು, ಹತ್ತು ಹಲವಾರು ಸಮಾಜಮುಖಿ ಅತ್ಯುತ್ತಮ ಕೆಲಸ ಮಾಡುವವರನ್ನು ತಾವುಗಳು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಕೋರಿದರು.
ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ತಿಮ್ಮಣ್ಣ ಅರಳಿಕಟ್ಟಿ ಅವರು ಓರ್ವ ಶಿಕ್ಷಕಿಯಾಗಿ ಪ್ರಸ್ತುತ ಮುಧೋಳ ರಾಯಲ್ ಸ್ಕೂಲ್ ಜವಾಬ್ದಾರಿಯುತ ಅಧ್ಯಕ್ಷೆಯಾಗಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಗಮನಿಸಿದರೇ ಅವರು ಮಕ್ಕಳ ಮೇಲೆ ಇಟ್ಟಿರುವ ಅತಿಯಾದ ಪ್ರೀತಿಯೇ ಕಾರಣ ಎಂದು ಶ್ಲಾಘಿಸಿದರು.ಮುಧೋಳ ರಾಯಲ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಕೆಲವೊಮ್ಮೆ ಶಿಕ್ಷಕರು ಮಕ್ಕಳನ್ನು ಗದರಿಸುವ ಅಥವಾ ತಿದ್ದುವುದು ಅವರ ಮೇಲಿನ ಸಿಟ್ಟಿನಿಂದಲ್ಲ, ಬದಲಾಗಿ ಅವರ ಭವಿಷ್ಯ ರೂಪಿಸಲು. ಪೋಷಕರು ಇದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಶಿಕ್ಷಕರ ಮೇಲೆ ದೂರು ಸಲ್ಲಿಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.
ಯಡಹಳ್ಳಿ-ಇಂಗಳಗಿ ಅಡವೇಶ್ವರ ಮಠದ ಚಂದ್ರಶೇಖರ ಸ್ವಾಮಿಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ತಿಮ್ಮಣ್ಣ ಅರಳಿಕಟ್ಟಿ ಅವರು ಏನೇ ಕೆಲಸ ಮಾಡಲಿ ಅವುಗಳು ಯಶಸ್ವಿಯಾಗಲು ಅವರ ಗುಣ ಸ್ವಭಾವವೇ ಕಾರಣ, ಅವರಂತೆ ತಾವುಗಳು ಸಾಧನೆ ಮಾಡಲಿ ಎಂದರು.ಮಾಜಿ ಸಚಿವ ಮುರಗೇಶ ನಿರಾಣಿ, ಜಮಖಂಡಿ ಎಸಿ ಶ್ವೇತಾ ಬೀಡಕರ, ಬಿಇಒ ಎಸ್.ಎಂ.ಮುಲ್ಲಾ ಮುಖ್ಯ ಅತಿಥಿ ಸ್ಥಾನ ವಹಿಸಿ ಸಾಂದರ್ಭಿಕವಾಗಿ ಮಾತನಾಡಿ, ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ ಅವರು ಹೊಸ ಕನಸುಗಳನ್ನು ಬಿತ್ತುವ ಕನಸುಗಾರ, ಗ್ರಾಮೀಣ ಭಾಗದ ಜನರ ಏಳ್ಗೆಗಾಗಿ ನಿರಂತರವಾಗಿ ದುಡಿಯುತ್ತಿದ್ದಾರೆ. ನುರಿತ ಶಿಕ್ಷಕರನ್ನು ಕರೆತಂದು ಸ್ಥಳೀಯ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಧೋಳ ರಾಯಲ್ ಸ್ಕೂಲ್ ಕಾರ್ಯದರ್ಶಿ ವಿನಾಯಕ ತಿ. ಅರಳಿಕಟ್ಟಿ, ರಾಯಲ್ ಸ್ಕೂಲ್ ಆಡಳಿತಾಧಿಕಾರಿ ಇಂದಿರಾ ಸಾತನೂರ ಇದ್ದರು. ಪ್ರಾಚಾರ್ಯ ಚಂದ್ರಶೇಖರ ನಾಗವಂದ ಸ್ವಾಗತಿಸಿದರು. ಉಪಪ್ರಾಚಾರ್ಯ ಮಾರುತಿ ಪವಾರ ವಂದಿಸಿದರು. ಉದ್ಘಾಟನೆ ಬಳಿಕ ಶಾಲಾ ಮಕ್ಕಳಿಗೆ ಪದವಿ ಪ್ರಮಾಣಪತ್ರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಮುಧೋಳ ರಾಯಲ್ ಸ್ಕೂಲ್ ಬಾಲಕರ ಸುಸಜ್ಜಿತ ಮತ್ತು ಸುರಕ್ಷಿತ ನೂತನ ವಸತಿ ನಿಲಯವು 3 ಮಹಡಿಗಳನ್ನು ಹೊಂದಿದ್ದು, 5 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ 300 ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವಿರುವುದು. ಪ್ರತ್ಯೇಕ ಮೆಸ್, ಡಿನ್ನರ್ ಡೈನಿಂಗ್ ಹಾಲ್, ಲೈಬ್ರರಿ ಆ್ಯಂಡ್ ಸ್ಟಡಿ ರೂಮ್, ಲಿಪ್ಟ್, ಆಫೀಸ್ ಕಂ ಗೆಸ್ಟ್ ರೂಮ್ ಸೇರಿದಂತೆ ಇತರೆ ಎಲ್ಲ ರೀತಿಯ ಸೌಲಭ್ಯಗಳು ಈ ಹಾಸ್ಟೇಲ್‌ನಲ್ಲಿರುವುದನ್ನು ನಾನಿಂದು ಪ್ರತ್ಯಕ್ಷವಾಗಿ ಎಲ್ಲವನ್ನು ನೋಡಿ ಸಂತಸಪಟ್ಟಿದ್ದೇನೆ. ತಾವುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.-ಅಶ್ವಿನಿ ಪುನೀತ್ ರಾಜಕುಮಾರ, ಸಂಸ್ಥಾಪಕ ಅಧ್ಯಕ್ಷೆ, ಜ್ಯೂನಿಯರ್ ಟೋಸ್ ಇಂಟರ್‌ನ್ಯಾಷನಲ್ ಫ್ರೀ ಸ್ಕೂಲ್ ಬೆಂಗಳೂರು.
ನಮ್ಮ ಸಂಸ್ಥೆ ಇಷ್ಟೊಂದು ಎತ್ತರಕ್ಕೆ ಬೆಳೆಯಲು ಈ ಭಾಗದ ಜನರ ಸಹಾಯ, ಸಹಕಾರ ಕಾರಣ ಅವರನ್ನು ನಾನೆಂದಿಗೂ ಮರೆಯುವುದಿಲ್ಲ. ನನ್ನ ಅಲ್ಪ ಸಾಧನೆಗೆ ಸಹಕರಿಸುತ್ತಿರುವ ಅಭಿಮಾನಿ ಬಳಗಕ್ಕೆ ತಾವು ಕೃತಜ್ಞತೆ ಸಲ್ಲಿಸುತ್ತೇನೆ.-ಡಾ.ತಿಮ್ಮಣ್ಣ ವಿ.ಅರಳಿಕಟ್ಟಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ರಜತ ಸಾಧಕರು ಪ್ರಶಸ್ತಿ ಪುರಸ್ಕೃತರು.
ಪ್ರಸ್ತುತ ಶಿಕ್ಷಣ ಕೇವಲ ತಂತ್ರಜ್ಞಾನದಿಂದ ಮಾತ್ರ ಕೂಡಿದರೇ ಸಾಲದು, ಅದರೊಂದಿಗೆ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಸಂಸ್ಕಾರ ಕಲಿಸುವಂತ ಕಾರ್ಯವಾಗಬೇಕು. ಅಂತಹ ಕೆಲಸವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದು ಹೇಳಲು ಹೆಮ್ಮೆಯಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಮ್ಮಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಉತ್ತಮ ಶಿಕ್ಷಣ ಅತ್ಯವಶ್ಯಕವಾಗಿದ್ದು, ಜಿಲ್ಲೆಯ ಶೈಕ್ಷಣಿಕ ಸಾಧನೆಗೆ ನಾವೆಲ್ಲರೂ ಶ್ರಮಿಸೋಣ.-ಸವಿತಾ ತಿ.ಅರಳಿಕಟ್ಟಿ, ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದ ಸುವರ್ಣ ಸಾಧಕಿ ಪ್ರಶಸ್ತಿ ಪುರಸ್ಕೃತೆ.