ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಶತಮಾನ ಕಂಡ ಶ್ರೇಷ್ಠ ಸಂತರು: ಅಸುಂಡಿ

KannadaprabhaNewsNetwork |  
Published : Oct 28, 2026, 02:15 AM IST
ಶಿವಾನುಭವ ಕಾರ್ಯಕ್ರಮದಲ್ಲಿ ಮಾರುತಿ ಅಸುಂಡಿ ಮಾತನಾಡಿದರು. | Kannada Prabha

ಸಾರಾಂಶ

ಬಸವಣ್ಣನಾಗಿ ಈ ನಾಡಿನಲ್ಲಿ ಸಾಮಾಜಿಕ ಕ್ರಾಂತಿಯ ಜೊತೆಗೆ ವೈಚಾರಿಕ ಕ್ರಾಂತಿ ಮಾಡಿದ ಈ ಶತಮಾನ ಕಂಡ ಶ್ರೇಷ್ಠ ಸಂತರು ಡಾ. ತೋಂಟದ ಸಿದ್ದಲಿಂಗ ಶ್ರೀಗಳು.

ಕನ್ನಡಪ್ರಭ ವಾರ್ತೆ ನರಗುಂದ

ಬಸವಣ್ಣನಾಗಿ ಈ ನಾಡಿನಲ್ಲಿ ಸಾಮಾಜಿಕ ಕ್ರಾಂತಿಯ ಜೊತೆಗೆ ವೈಚಾರಿಕ ಕ್ರಾಂತಿ ಮಾಡಿದ ಈ ಶತಮಾನ ಕಂಡ ಶ್ರೇಷ್ಠ ಸಂತರು ಡಾ. ತೋಂಟದ ಸಿದ್ದಲಿಂಗ ಶ್ರೀಗಳು. ಅವರು ತಮ್ಮ ಜೀವನದುದ್ದಕ್ಕೂ ಬಸವಣ್ಣನವರ ಸಮಸಮಾಜದ ಕನಸನ್ನು ನನಸು ಮಾಡವಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ ಎಂದು ತಾಲೂಕಾ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಾರುತಿ ಅಸುಂಡಿ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 288ನೇ ಮಾಸಿಕ ಶಿವಾನುಭವ ಹಾಗೂ ಕೋಮುಸೌಹಾರ್ದತೆ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಶ್ರೀಗಳ 8ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ದುಡಿಯುವವರ, ಶ್ರಮಿಕರ ಪರವಾದ ಉದಾರತೆಯನ್ನು ತೋರಿದ ತೋಂಟದ ಶ್ರೀಗಳು ಈ ಶತಮಾನದ ಬಸವಣ್ಣ. ಅರಣ್ಯ, ಪ್ರಾಣಿ, ರೈತ ಹಾಗೂ ಶ್ರಮಿಕರು ಹೀಗೆ ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಅನ್ಯಾಯವಾದಾಗ ಹೋರಾಟದ ಮೂಲಕ ಅವರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದಾರೆ. ಭಾಷೆ, ನಾಡು ಜನರ ಹಿತಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟವರು. ಕನ್ನಡ ಭಾಷೆ ಉಳಿದರೆ ನಾವು ಉಳಿದೇವು ಎಂಬ ನಿಲುವನ್ನು ಹೊಂದಿದ್ದ ಪೂಜ್ಯರ ತಮ್ಮ ಉಸಿರು ಇರುವರೆಗೂ ಕನ್ನಡದ ಸಂರಕ್ಷಕರಾಗಿದ್ದರು ಎಂದರು.

ಸಾನಿಧ್ಯ ವಹಿಸಿದ್ದ ಪೂಜ್ಯ ಶಾಂತಲಿಂಗ ಶ್ರೀಗಳು ಮಾತನಾಡಿ, ಗಾಳಿ, ನೀರು, ಬೆಂಕಿ ಯಾರೊಂದಿಗೂ ಬೇಧ ಮಾಡುವುದಿಲ್ಲ ಹಾಗೆ ಸ್ವಾಮಿಗಳಾದವರು ಯಾರೊಂದಿಗೂ ಬೇಧ ಮಾಡಬಾರದು. ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಜಾತಿ ಬೇಧವರಿಯದೆ ಮನುಕುಲದ ಒಳತಿಗಾಗಿ ಶ್ರಮಿಸಿದ ಎಲ್ಲ ಜನಾಂಗದ ಮಹನೀಯರ ಜಯಂತಿಯನ್ನು ಶ್ರೀಮಠದಲ್ಲಿ ಆಚರಿಸಿ ಭಾವೈಕ್ಯತೆಯ ಸಂದೇಶವನ್ನು ಸಾರಿದವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದುಗಿನ ಸುಮಾ ಸಿದ್ಧಲಿಂಗೇಶ ಗೊಡಚಿ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಶಿವಾಣಿ ಮಾತಾಜಿ, ಭಾವನಾ ಪಾಟೀಲ, ಉಮಾ ಕುರಿ, ಈರಮ್ಮ ಮುದಕವಿ, ಬಿ.ಬಿ.ಕುರಿ, ಶ್ರದ್ಧಾನಂದ ಅಕ್ಕನ ಬಳಗದ ಸದಸ್ಯರು ಸೇರಿದಂತೆ ಮುಂತಾದವರು ಇದ್ದರು.

ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗಾಮತ ಸಮಾಜ ಮುಖ್ಯವಾಹಿನಿಗೆ ಬರಲು ವಿಫಲ
ಗ್ರಾಮಾಂತರ ಪ್ರದೇಶಗಳಿಗೂ ಸಂಗೀತ, ನೃತ್ಯ ಅಕಾಡೆಮಿ ಕಾರ್ಯಕ್ರಮ ವಿಸ್ತರಣೆ