ಜೆಎಸ್ಸೆಸ್‌ ಉದ್ಯೋಗ ಮೇಳಕ್ಕೆ ಡಾ. ವೀರೇಂದ್ರ ಹೆಗ್ಗಡೆ ಪ್ರೇರಣೆ

KannadaprabhaNewsNetwork |  
Published : Aug 25, 2025, 01:00 AM IST
25ಡಿಡಬ್ಲೂಡಿ5ಜೆ.ಎಸ್.ಎಸ್ ಉತ್ಸವ ಸಭಾಭವನದಲ್ಲಿ ಜನತಾ ಶಿಕ್ಷಣ ಸಮಿತಿ ಹಾಗೂ ಬಾಷ್ ಇಂಡಿಯಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಐ.ಟಿ.ಐ ಉದ್ಯೋಗಮೇಳದಲ್ಲಿ ಡಾ. ಅಜಿತ ಪ್ರಸಾದ ಮಾತನಾಡಿದರು.  | Kannada Prabha

ಸಾರಾಂಶ

ಇಲ್ಲಿಯ ವರೆಗೆ ಸಂಸ್ಥೆಯು 300ಕ್ಕೂ ಹೆಚ್ಚು ಉದ್ಯೋಗಮೇಳ, ಕ್ಯಾಂಪಸ್ ಸಂದರ್ಶನಗಳ ಮೂಲಕ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿದೆ. ಕೇವಲ ಶಿಕ್ಷಣ ನೀಡುವುದಷ್ಟೇ ಶಾಲಾ ಕಾಲೇಜುಗಳ ಕೆಲಸವಲ್ಲ. ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಸಹ ಮಾಡಬೇಕು.

ಧಾರವಾಡ: ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ವಹಿಸಿಕೊಂಡಾಗ ಮಾತ್ರ ಸಮಾಜ ಸುಸ್ಥಿರವಾಗಬಲ್ಲದು. ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ, ರುಡ್‌ಸೆಟ್ ಸಂಸ್ಥೆಗಳ ಕಾರ್ಯವೈಖರಿ ಗಮನಿಸಿರುವ ಜೆಎಸ್ಸೆಸ್‌ ಶಿಕ್ಷಣ ಸಂಸ್ಥೆಯು ಆ ಕಾರ್ಯಗಳಿಂದ ಪ್ರೇರಿತವಾಗಿ ಉದ್ಯೋಗಮೇಳಗಳನ್ನು ಆಯೋಜಿಸುತ್ತಿದೆ ಎಂದು ಜೆಎಸ್ಸೆಸ್‌ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.

ಇಲ್ಲಿಯ ಜೆ.ಎಸ್.ಎಸ್ ಉತ್ಸವ ಸಭಾ ಭವನದಲ್ಲಿ ಜನತಾ ಶಿಕ್ಷಣ ಸಮಿತಿ ಹಾಗೂ ಬಾಷ್ ಇಂಡಿಯಾ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಐ.ಟಿ.ಐ ಉದ್ಯೋಗಮೇಳ ಉದ್ಘಾಟಿಸಿ ಮಾತನಾಡಿದರು.

ಇಲ್ಲಿಯ ವರೆಗೆ ಸಂಸ್ಥೆಯು 300ಕ್ಕೂ ಹೆಚ್ಚು ಉದ್ಯೋಗಮೇಳ, ಕ್ಯಾಂಪಸ್ ಸಂದರ್ಶನಗಳ ಮೂಲಕ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿದೆ. ಕೇವಲ ಶಿಕ್ಷಣ ನೀಡುವುದಷ್ಟೇ ಶಾಲಾ ಕಾಲೇಜುಗಳ ಕೆಲಸವಲ್ಲ. ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಸಹ ಮಾಡಬೇಕು ಎಂದರು.

ಉದ್ಯೋಗ ಮತ್ತು ತರಬೇತಿ ಇಲಾಖೆ ಬೆಳಗಾವಿ ವಿಭಾಗದ ಸಹಾಯಕ ಜಂಟಿ ನಿರ್ದೇಶಕ ರವೀಂದ್ರ ದ್ಯಾಬೇರಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಕೆಲವೇ ಕೋರ್ಸುಗಳಿಗೆ ಕಟ್ಟು ಬೀಳದೆ, ಉದ್ಯೋಗಾವಕಾಶವಿರುವ ಹೊಸ ಹೊಸ ಕೋರ್ಸುಗಳನ್ನು ಆಯ್ದುಕೊಳ್ಳಬೇಕು. ಆ ಮುಖಾಂತರ ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು. ಉದ್ಯೋಗ ಪಡೆದ ನಂತರವೂ ನಿರಂತರ ತರಬೇತಿ, ಅಧ್ಯಯನ ಅವಶ್ಯಕ. ಇದರಿಂದ ಬದಲಾಗುತ್ತಿರುವ ತಾಂತ್ರಿಕತೆಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿಎಸ್ಸೆಸ್‌ ಐ.ಟಿ.ಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾದ್ಯೆ ಮಾತನಾಡಿ, ಡಾ. ಅಜಿತ ಪ್ರಸಾದರವರ ಆಶಯದಂತೆ ಪ್ರತಿವರ್ಷ ಕನಿಷ್ಠ ಐದು ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇದು ಐ.ಟಿ.ಐ ಕ್ಷೇತ್ರಕ್ಕೆ ಸೀಮಿತವಾದ ಉದ್ಯೋಗಮೇಳ. ಡಾ. ಡಿ. ವೀರೆಂದ್ರ ಹೆಗ್ಗಡೆಯವರ ಆಶಯದಂತೆ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಬೇಕೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುತ್ತಿದೆ ಎಂದರು. ಈ ಉದ್ಯೋಗ ಮೇಳದಲ್ಲಿ 285 ವಿದ್ಯಾರ್ಥಿಗಳು ಭಾಗವಹಿಸಿದ್ದು, 86 ವಿದ್ಯಾರ್ಥಿಗಳು ಕೊನೆಯ ಸುತ್ತಿಗೆ ಆಯ್ಕೆಯಾದರೆ, 34 ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಯಿತು ಎಂದರು.

ಬಾಷ್ ಇಂಡಿಯಾ ಫೌಂಡೇಶನ್‌ ಅಧಿಕಾರಿ ಸುಧೀರ್ ಪಿಡ್ಡಿ ಮಾತನಾಡಿದರು. ಅಶ್ವಿನಿ ದೇಸಾಯಿ ಪ್ರಾರ್ಥಿಸಿದರು. ಮಂಜುನಾಥ ಚಟ್ಟೇರ ನಿರೂಪಿಸಿದರು. ವಿದ್ಯಾ ಹಿರೇಮಠ ವಂದಿಸಿದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ