ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಅವರು ಭಾನುವಾರ ಸಂಜೆ ಬಸವಕಲ್ಯಾಣದ ಬಟಗೇರಾ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ಧರ್ಮಗಳಿಂದ ಮಾನವೀಯ ಧರ್ಮ ಮೇಲು, ಸಂವಿಧಾನ ನಮ್ಮ ಉಸಿರು ಎಂದು ಡಾ. ಅಂಬೇಡ್ಕರ್ ಅವರು ಹೇಳಿದ್ದರು ಅವರು ರಚಿಸಿದ ಸಂವಿಧಾನಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕಿದೆ. ಹಾಗೆಯೇ ದೇಶದಲ್ಲಿ ಜಾತಿಯತೆ, ಅಸಮಾನತೆ ಹೆಚ್ಚುತ್ತಿದೆ, ಬಡತನ ಹಾಗೆಯೇ ಇದೆ. ಕವಲು ದಾರಿಯಲ್ಲಿ ಸಾಗುತ್ತಿದೆ. ಇದನ್ನೆಲ್ಲ ನಿವಾರಣೆ ಮಾಡಲು ಯೋಚಿಸಬೇಕಿದೆ ಎಂದರು.
ಡಾ. ಬಿಆರ್ ಅಂಬೇಡ್ಕರ್ ಅವರ ತತ್ವಾದರ್ಶ, ಮಾರ್ಗದರ್ಶನವನ್ನು ನಾವು ಜೀವನದಲ್ಲಿ ಜಾರಿಗೆ ತರಬೇಕು. ಅವರು ಸಮ ಸಮಾಜ ನಿರ್ಮಾಣದ ಕನಸು ಕಂಡವರು. ಅನ್ಯಾಯ, ಅತ್ಯಾಚಾರ, ಕಂದಾಚಾರ, ಅಸ್ಪೃಶ್ಯತೆ ವಿರುದ್ಧ ಹೋರಾಟ ಮಾಡುವ ಮೂಲಕ ಬಾಲ್ಯದಿಂದಲೇ ಜ್ಞಾನಿಗಳಾಗಿ ಮುಂದೆ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದವರು ಎಂದರು.ಸಂವಿಧಾನ ಜಾರಿಯಾಗಿ 75 ವರ್ಷ ಕಳೆದಿದ್ದು ತದನಂತರ ಸಾಕಷ್ಟು ಬದಲಾವಣೆಗಳನ್ನು ದೇಶದಲ್ಲಿ ಕಂಡಿದ್ದೇವೆ. ಸಾಕ್ಷರತೆ ಪ್ರಮಾಣ, ಬಡತನ, ಆಹಾರ ಭದ್ರತೆಯಲ್ಲಿ ದೇಶ ಅಭಿವೃದ್ಧಿ ಸಾಧಿಸಿದ್ದು ಸಂವಿಧಾನವೇ ಮೂಲ. ಆದರೆ ಜಾತಿ ಧರ್ಮಗಳ ಮಧ್ಯ ಒಡೆದಾಳುವ ನೀತಿ ಅನುಸರಿಸಿ ಜಾತಿಯ ವೈಶಮ್ಯ ಮೂಡಿಸುವ ಕೆಲಸವನ್ನು ಕೋಮುವಾದಿಗಳು ನಡೆಸುತ್ತಿರುವದು ಖಂಡನೀಯ ಎಂದರು.
ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ ಇದರಿಂದ ಎಲ್ಲ ಸಮುದಾಯಕ್ಕೆ ಸಹಾಯವಾಗಿ ಆರ್ಥಿಕ ಭದ್ರತೆ ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಂತೆ ಭದಂತ ಸುಮಂಗಲ, ಭದಂತ ದಮಸಾರ ಸಾನಿಧ್ಯವಹಿಸಿದ್ದರು. ಶಾಸಕ ಶರಣು ಸಲಗರ, ಡಾ. ಬಿಆರ್ ಅಂಬೇಡ್ಕರ್ ರತ್ನ ಪ್ರಶಸ್ತಿ ಪುರಸ್ಕೃತ ತಾತ್ಯಾರಾವ್ ಕಾಂಬಳೆ, ಮಾಜಿ ಶಾಸಕ ವಿಜಯಸಿಂಗ್, ಮಾರುತಿರಾವ್ ಮೂಳೆ, ಮಾಲಾ ಬಿ. ನಾರಾಯಣರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ರಾಠೋಡ್, ಬಾಬು ಹೊನ್ನಾ ನಾಯಕ, ದಿಲೀಪ್ ಶಿಂಧೆ, ಶಿವರಾಜ ನರಶೆಟ್ಟಿ, ಕಾರ್ಯಕ್ರಮ ಆಯೋಜಕರಾದ ಸಂಜು ಗಾವಕವಾಡ, ದತ್ತು ಸೂರ್ಯವಂಶಿ, ನಾಗೇಂದ್ರ, ಅಂಬಾದಾಸ ಗಾಯಕವಾಡ ಮತ್ತಿತರರು ಇದ್ದರು.