- 1 ಎಕರೆಯಲ್ಲಿ ಬರೋಬ್ಬರಿ ₹10 ಲಕ್ಷ ಆದಾಯ । ಒಣ ಭೂಮಿಯಲ್ಲಿ ಬೆಳೆದು ಯಶಸ್ಸು ಕಂಡ ರೈತ ಯಡಗೆರೆ ಕಬ್ಬಿನತೋಟ ಶ್ರೀನಿವಾಸ್ಯಡಗೆರೆ ಮಂಜುನಾಥ್ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಒಂದು ಎಕರೆಯಲ್ಲಿ ಡ್ರಾಗನ್ ಫ್ರೂಟ್ ನ 1680 ಗಿಡ ನೆಡಬಹುದು. 10 ಅಡಿ ದೂರದಂತೆ ನೆಲ ಮಟ್ಟದಿಂದ 4 ಅಡಿ ಎತ್ತರದ 420 ಸಿಮೆಂಟು ಕಂಬ ನೆಟ್ಟು ಕಂಬದ ಮೇಲೆ ಸಿಮೆಂಟಿನ ವೃತ್ತಾಕಾರದ ರಿಂಗ್ ಹಾಕಿ ಪ್ರತಿ ಸಿಮೆಂಟ್ ಕಂಬದ ಮೇಲೆ 4 ಗಿಡಗಳನ್ನು ನೆಡಬೇಕು. ಈ ಗಿಡಗಳು ಮೇಲೆ ಬಂದು ರಿಂಗ್ ಮೇಲೆ ಹಬ್ಬುತ್ತದೆ. ಗಿಡಗಳನ್ನು ಚೆನ್ನಾಗಿ ಆರೈಕೆ ಮಾಡಿದರೆ 18 ತಿಂಗಳಲ್ಲೇ ಹಣ್ಣು ಕೊಯ್ಲಿಗೆ ಬರುತ್ತದೆ. 30 ವರ್ಷಗಳ ಕಾಲ ನಿರಂತರವಾಗಿ ಗಿಡಗಳಿಂದ ಉತ್ತಮ ಹಣ್ಣು ನಿರೀಕ್ಷೆ ಮಾಡಬಹುದು. ನಂತರ ಹಣ್ಣು ಕಡಿಮೆಯಾಗುವುದರಿಂದ ಆ ಗಿಡಗಳನ್ನು ತೆಗೆದು ಅದೇ ಕಂಬಗಳಿಗೆ ಮತ್ತೆ ಹೊಸ ಪ್ಲಾಂಟ್ ಮಾಡಬೇಕಾಗಿದೆ. -- ಬಾಕ್ಸ್--ಎಕರೆಗೆ ₹8 ರಿಂದ 10 ಲಕ್ಷ ಆದಾಯ
ಒಂದು ಎಕರೆಗೆ ಅತಿ ಕಡಿಮೆ ಎಂದರೂ 10 ಟನ್ ಹಣ್ಣು ಬರಲಿದೆ. ಮೇ ನಿಂದ ಪ್ರಾರಂಭವಾದರೆ ಡಿಸೆಂಬರ್ ವರೆಗೆ 4 ಹಂತದಲ್ಲಿ ಹಣ್ಣು ಬರಲಿದೆ. ಈಗಿನ ಧಾರಣೆ 1 ಟನ್ ಡ್ರಾಗನ್ ಫ್ರೂಟ್ ಗೆ ₹80 ಸಾವಿರ ವಿದೆ. ಅಂದರೆ 1 ಎಕರೆಗೆ ₹8 ರಿಂದ 10 ಲಕ್ಷ ಆದಾಯ ನಿರೀಕ್ಷೆ ಮಾಡಬಹುದು. ಡ್ರಾಗನ್ ಫ್ರೂಟ್ ನಲ್ಲೂ ಧಾರಣೆ ಏರಿಳಿತ ಆಗಿದೆ. 6 ವರ್ಷದ ಹಿಂದೆ 1 ಟನ್ ಡ್ರಾಗನ್ ಫ್ರೂಟ್ ಗೆ ₹3 ಲಕ್ಷ ಇತ್ತು. ಧಾರಣೆ ಇಳಿದು ಕಳೆದ 3 ವರ್ಷದ ಹಿಂದೆ 1 ಟನ್ ಡ್ರಾಗನ್ ಫ್ರೂಟ್ ಗೆ 1.50 ಲಕ್ಷ ಇತ್ತು. ಈ ವರ್ಷ 1 ಟನ್ ಗೆ ₹80 ಸಾವಿರದಿಂದ ₹2 ಲಕ್ಷ ದವರೆಗೂ ಧಾರಣೆ ಇದೆ. -- ಬಾಕ್ಸ್ --ಎಪಿಎಂಸಿಗಳಿಗೆ ರವಾನೆ ಡ್ರಾಗನ್ ಪ್ರೂಟ್ ಗೆ ಹಣ್ಣಿನ ಅಂಗಡಿಗಳೇ ಮಾರುಕಟ್ಟೆ. ಸಣ್ಣ ಊರುಗಳ ಹಣ್ಣಿನ ಅಂಗಡಿಗಳು ಸಹ ಡ್ರಾಗನ್ ಫ್ರೂಟ್ ಖರೀದಿ ಮಾಡುತ್ತಾರೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆದರೆ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತರೀಕೆರೆ ಮುಂತಾದ ಎಪಿಎಂಸಿಗಳಿಗೆ ಡ್ರಾಗನ್ ಫ್ರೂಟ್ ಕಳಿಸಬಹುದಾಗಿದೆ. ಇದನ್ನು ಬೆಳೆದ ರೈತರು ಮಾರುಕಟ್ಟೆಯ ಕಡೆಗೂ ಗಮನ ನೀಡಬೇಕು. -- ಕೋಟ್ --
ಕಬ್ಬಿನತೋಟ ಶ್ರೀನಿವಾಸ್,