ಸೂಳೆಕೆರೆಗೆ ಭದ್ರಾನಾಲೆಯಿಂದ ನೀರು ಹರಿಸಿ: ಶ್ರೀ ಗುರುಬಸವ ಸ್ವಾಮೀಜಿ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ದೇಶದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೆರೆಯು ದಿನದಿಂದ ದಿನಕ್ಕೆ ಬತ್ತಿಹೋಗುತ್ತಿದೆ ಈ ಕೆರೆಯಿಂದಲೇ ಅನ್ಯ ಜಿಲ್ಲೆಯ ಜನರು ಸಹಾ ಕುಡಿಯುವ ನೀರಿಗಾಗಿ ನೀರನ್ನು ಪಡೆಯುತ್ತಿದ್ದು ಇಂತಹ ಜೀವ ಜಲವಾಗಿರುವ ಕೆರೆಗೆ ಎರಡು ದಿನಗಳ ಕಾಲ ಸಂಪೂರ್ಣವಾಗಿ ಭದ್ರಾನಾಲೆಯ ನೀರನ್ನು ಹರಿಸಬೇಕು ಇಲ್ಲವಾದರೆ ಉಗ್ರಸ್ವರೋಪದ ಹೋರಾಟ ಅನಿವಾರ್ಯ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಪ್ರಸಿದ್ಧ ಸೂಳೆಕೆರೆ ಬರಿದಾಗುತ್ತಿದ್ದು ಸೂಳೆಕೆರೆಗೆ ಭದ್ರಾನಾಲೆಯಿಂದ ಹರಿಯುತ್ತಿರುವ ನೀರನ್ನು ಚಾನಲ್ ನ ಬಿಡುಗಂಡಿಯ ಮೂಲಕ ಹರಿಸಿ ಚನ್ನಗಿರಿ ತಾಲೂಕು ಸೇರಿ ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು, ಸಿರಿಗೆರೆ ಈ ಭಾಗದ ಜನರಿಗೆ ಕುಡಿಯುವ ನೀರಿಗೆ ಸಹಕಾರಿಯಾಗಬೇಕು ಇಲ್ಲದಿದ್ದರೆ ಜನರು ನೀರಿನ ಹಾಹಾಕಾರಕ್ಕೆ ಒಳಗಾಗಲಿದ್ದಾರೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು.

ಭಾನುವಾರ ತಾಲೂಕಿನ ಸೂಳೆಕೆರೆಯಲ್ಲಿ ಖಡ್ಗ ಸಂಘ, ಹಾಗೂ ಸಾಂತಿಸಾಗರ ಸಂರಕ್ಷಣಾ ಸಮಿತಿ ವತಿಯಿಂದ ಭದ್ರಾನಾಲೆಯಿಂದ ಸೂಳೆಕೆರೆಗೆ ನೀರು ಹರಿಸಬೇಕು ತಾಲೂಕಿನ ಜನರ ರಕ್ಷಿಸಬೇಕು ಕಾರ್ಯಕ್ರಮದಲ್ಲಿ ಮಾತನಾಡಿ ಶ್ರೀಗಳು ದೇಶದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೆರೆಯು ದಿನದಿಂದ ದಿನಕ್ಕೆ ಬತ್ತಿಹೋಗುತ್ತಿದೆ ಈ ಕೆರೆಯಿಂದಲೇ ಅನ್ಯ ಜಿಲ್ಲೆಯ ಜನರು ಸಹಾ ಕುಡಿಯುವ ನೀರಿಗಾಗಿ ನೀರನ್ನು ಪಡೆಯುತ್ತಿದ್ದು ಇಂತಹ ಜೀವ ಜಲವಾಗಿರುವ ಕೆರೆಗೆ ಎರಡು ದಿನಗಳ ಕಾಲ ಸಂಪೂರ್ಣವಾಗಿ ಭದ್ರಾನಾಲೆಯ ನೀರನ್ನು ಹರಿಸಬೇಕು ಇಲ್ಲವಾದರೆ ಉಗ್ರಸ್ವರೋಪದ ಹೋರಾಟ ಅನಿವಾರ್ಯ ಎಂದು ತಿಳಿಸಿದರು.

ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಮಾತನಾಡಿ ದೂರದೃಷ್ಟಿಯಿಂದ 1986ರಲ್ಲಿ ಮುಖ್ಯಮಂತ್ರಿ ಜೆ.ಎಚ್.ಪಟೇಲರು ಸೂಳೆಕರೆಯ ಪಕ್ಕದಲ್ಲೇ ಹಾದುಹೋಗಿರುವ ಭದ್ರಾನಾಲೆಯಿಂದ ಕೆರೆಗೆ ನೀರು ಹರಿಸಲು ಬಿಡುಗಂಡಿ ಮಾಡಿದ್ದರು. ಕೆರೆಯಲ್ಲಿ ನೀರಿಲ್ಲದ ಕಾರಣ ಭದ್ರಾನಾಲೆಯಿಂದ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕಾಡಾ ಸಂಸ್ಥೆಗೆ ಮನವಿ ಮಾಡಿಕೊಂಡರು.

ಸಭೆ ಆರಂಭಕ್ಕೂ ಮುನ್ನ ಸೂಳೆಕರೆಯ ಅಚ್ಚುಕಟ್ಟು ಪ್ರದೇಶದ ರೈತರು ಸೂಳೆಕೆರೆಗೆ ನೀರು ಹರಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಸಭೆಯಲ್ಲಿ ಖಡ್ಗ ಸಂಸ್ಥೆಯ ರಾಜ್ಯಾಧ್ಯಕ್ಷ ರಘು, ಚಂದ್ರಹಾಸ, ಕುಬೇಂದ್ರಸ್ವಾಮಿ, ಶ್ರೀಧರ್, ವಿಜಯ್ ಅಕಳಿಕಟ್ಟೆ ಸೇರಿ ರೈತರಿದ್ದರು.

Share this article